ಮಂಗಳೂರು : ಸಿ.ಐ.ಎಸ್.ಎಫ್ ನ ಇನ್ಸ್ಪೆಕ್ಟರ್ ನಾಪತ್ತೆ, ದೂರು ದಾಖಲು

ಎಂ.ಆರ್.ಪಿ.ಎಲ್. ಕಂಪೆನಿಯ ಸಿ.ಐ.ಎಸ್.ಎಫ್. ಯೂನಿಟ್‌ನ ಇನ್ಸ್ಪೆಕ್ಟರ್ ಒಬ್ಬರು ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರು ‌ತಾಲೂಕಿನ ಕುತ್ತೆತ್ತೂರು ಗ್ರಾಮದ ಡಿಗ್ಗಿ ಡಿ.ಎಸ್ (34) ಎಂಬವರು ಕಾಣೆಯಾದ ಇನ್ಸ್ಪೆಕ್ಟರ್.

ಡಿಗ್ಗಿ ಅವರು 2021ರ ಡಿ.20 ರಂದು ಸಿ.ಐ.ಎಸ್.ಎಫ್ ಕ್ಯಾಂಪಸ್‌ನ ಬ್ಯಾಚುಲರ್ ರಕ್‌ನಿಂದ ಕಾಣೆಯಾಗಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದವರು ನಸು ಕಪ್ಪು ಮೈ ಬಣ್ಣ, ಸಾಧಾರಣ ಶರೀರ ಹೊಂದಿದ್ದು, 165 ಸೆಂಟಿ ಮೀಟರ್ ಎತ್ತರ ಇರುತ್ತಾರೆ. ಕ್ರೀಂ ಬಣ್ಣದ ಟೀ ಶರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಲಭ್ಯವಾದರೆ ಸುರತ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.