Day: December 26, 2021

ಡಿ.27 : ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ `ನಾಗ ತನು ತರ್ಪಣ ಸೇವೆ

ಪುತ್ತೂರು : ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ `ನಾಗ ತನು ತರ್ಪಣ ಸೇವೆಯು ಡಿ.27ರಂದು ನಡೆಯಲಿದೆ. ಡಿ.27ರಂದು ಬೆಳಿಗ್ಗೆ 7ರಿಂದ ನಾಗಸನ್ನಿಧಾನದಲ್ಲಿ ಕಲಶಾಭಿಷೇಕ, ತಂಬಿಲಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆಮಧ್ಯಾಹ್ನಶ್ರೀದೇವರ ಮಹಾಪೂಜೆ, ಅನ್ನಸಂತರ್ಪಣೆ,ಸಂಜೆ ದೈವಗಳ ಭಂಡಾರ ತೆಗೆಯುವುದು.ಸಂಜೆ 6.30ಕ್ಕೆ ಲೋಕ ಕಲ್ಯಾಣಾರ್ಥವಾಗಿ ನಾಗಸಂಪ್ರೀತಿಗಾಗಿ `ನಾಗ ತನು ತರ್ಪಣ ಸೇವೆ ನಡೆಯಲಿದೆ.ರಾತ್ರಿ ಅನ್ನಸಂತರ್ಪಣೆ ,ಕ್ಷೇತ್ರದ ದೈವಗಳ ನರ್ತನ ಸೇವೆ ನಡೆಯಲಿದೆ.

ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ |
ಆಚರಣೆಗಳ ಮಹತ್ವ ತಿಳಿಸಿಕೊಡುವ ಕಾರ್ಯಗಳಾಗಬೇಕು-ಕಾಣಿಯೂರು ಶ್ರೀ

ಸವಣೂರು: ಸನಾತನ ಹಿಂದೂ ಧರ್ಮದಲ್ಲಿರುವ ಆಚರಣೆಗಳ ಮಹತ್ವವನ್ನು ತಿಳಿಸಿಕೊಡುವ ಕಾರ್ಯಗಳಾಗಬೇಕು.ಪ್ರತೀಯೊಂದು ಆಚರಣೆಗಳು ತನ್ನದೇ ಆದ ಮಹತ್ವ,ವೈಶಿಷ್ಟ್ತಹೊಂದಿದೆ ಎಂದು ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ಸ್ವಾಮೀಜಿ ಹೇಳಿದರು.ಅವರು ತನು ತರ್ಪಣ ಸೇವೆ ನಡೆಯಲಿದೆ,ರಾತ್ರಿ ಅನ್ನಸಂತರ್ಪಣೆ ,ಕ್ಷೇತ್ರದ ದೈವಗಳ ನರ್ತನ ಸೇವೆ ನಡೆಯಲಿದೆ.ರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಧನಕ್ಕಿಂತಲೂ ತನು,ಮನದ ಸೇವೆ ಸರ್ವೆಯಲ್ಲಿ ಎದ್ದು ಕಾಣುತ್ತಿದೆ.ಈ ರೀತಿಯ ಕಾರ್ಯದಿಂದ ವಿಶ್ವಾಸ ವೃದ್ದಿಯಾಗುತ್ತದೆ.ಸರ್ವೆಯ ದೇವರಿಗೆ ಬ್ರಹ್ಮಕಲಶದ ಮೂಲಕ ಪೂರ್ಣ ಶಕ್ತಿ ನೀಡುವ ಕೆಲಸವಾಗಿದೆ.ಕೊರೊನಾ ಕಾಲದಲ್ಲೂ ಉತ್ತಮ ರೀತಿಯಲ್ಲಿ ದೇವಸ್ಥಾನ ನಿರ್ಮಿಸಿದ ಊರವರಿಗೆ,ಸಮಿತಿಯವರಿಗೆ ಅಭಿನಂದಿಸುತ್ತೇನೆ …

ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ |
ಆಚರಣೆಗಳ ಮಹತ್ವ ತಿಳಿಸಿಕೊಡುವ ಕಾರ್ಯಗಳಾಗಬೇಕು-ಕಾಣಿಯೂರು ಶ್ರೀ
Read More »

ಬೆಳ್ತಂಗಡಿ:ಉಜಿರೆಯ ಕಾಮತ್ ಕಂಪೌಂಡ್ ನಲ್ಲಿರುವ ಮನೆಯಲ್ಲಿ ಕಳ್ಳತನ

ಬೆಳ್ತಂಗಡಿ :ಉಜಿರೆಯ ಕಾಮತ್ ಕಂಪೌಂಡ್ ನಲ್ಲಿರುವ ಮಹಾಮಯಾಕೃಪಾ ಮನೆಯಲ್ಲಿ ಯಾರು ಇಲ್ಲವೆಂದು ಖಚಿತ ಪಡಿಸಿಕೊಂಡ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಮನೆಯ ಸದಸ್ಯರೆಲ್ಲರು ಬೆಂಗಳೂರಿನಲ್ಲಿ ವಾಸವಿದ್ದು, ಮನೆಯನ್ನು ಆಗಾಗ ಸಂಬಂಧಿಕರು ಬಂದುನೋಡಿಕೊಂಡು ಹೋಗುತ್ತಿದ್ದರು. ಹೀಗಾಗಿ ಮನೆಯಲ್ಲಿ ಯಾರು ಇಲ್ಲ ಎಂದು ತಿಳಿದು ಕಳ್ಳತನಕ್ಕೆ ಹೊಂಚುಹಕಿದ್ದಾರೆ.ಬ್ಯಾಟರಿ ,ಗ್ರಾಂಡರ್ ,ಮಿಕ್ಸಿ ಎರಡು ,ಏಣಿ ಎರಡು, ತ್ರಾಮದ ಪಾತ್ರೆ,ಸ್ಟಿಲ್ ಪಾತ್ರೆಗಳು ಮುಂತಾದ ವಸ್ತುಗಳು ಕಳ್ಳತನವಾಗಿದೆ ಎಂದು ಅಶ್ವಿನಿ ಆರ್ ಕಾಮತ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.

ಜಪಾನ್ ಪರಿಚಯಿಸಿದೆ ವಿಶ್ವದ ದ್ವಿ ಮಾದರಿಯ ವಾಹನ | ರಸ್ತೆ ಮೇಲೆ ಮಾತ್ರವಲ್ಲದೆ ರೈಲ್ವೆ ಹಳಿ ಮೇಲೂ ಚಲಿಸುತ್ತದೆಯಂತೆ ಈ ಮಿನಿ ಬಸ್ ಮಾದರಿಯ ವಾಹನ |ಇದರ ಇನ್ನಷ್ಟು ವಿಶಿಷ್ಟತೆ ಕುರಿತು ಇಲ್ಲಿದೆ ನೋಡಿ ಮಾಹಿತಿ

ಈ ಡಿಜಿಟಲ್ ಯುಗದಲ್ಲಿ ಟೆಕ್ನಾಲಜಿ ಮುಂದುವರೆಯುತ್ತಲೇ ಇದೆ. ಇದೀಗ ಜಪಾನ್ ದೇಶ ಹೊಸ ಟೆಕ್ನಾಲಜಿಯೊಂದನ್ನು ವಿಶ್ವಕ್ಕೆ ಪರಿಚಯಿಸಿದ.ರೈಲ್ವೆ ಹಳಿ ಮತ್ತು ರಸ್ತೆ ಮೇಲೆ ಚಲಿಸಬಲ್ಲಂತಹ ವಿಶ್ವದ ಮೊದಲ ದ್ವಿ ಮಾದರಿಯ ವಾಹನವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿಗೆ ಜಪಾನ್ ಪಾತ್ರವಾಗಿದೆ. ಈ ವಾಹನ ನೋಡಲು ಮಿನಿಬಸ್ ನಂತೆ ಕಾಣುತ್ತದೆ. ಹಾಗೆಯೇ ರಸ್ತೆ ಮೇಲೆ ಸಾಮಾನ್ಯ ರಬ್ಬರ್ ಟೈರ್‌ಗಳಲ್ಲಿ ಚಲಿಸುತ್ತದೆ. ಈ ವಾಹನ ಕೆಳಭಾಗದಲ್ಲಿ ಉಕ್ಕಿನ ಚಕ್ರಗಳನ್ನು ಹೊಂದಿದ್ದು, ಅದು ರೈಲು ಹಳಿಗಳನ್ನು ಸ್ಪರ್ಶಿಸಿದಾಗ ಇಳಿಯುತ್ತದೆ. ಇದೇ ಈ …

ಜಪಾನ್ ಪರಿಚಯಿಸಿದೆ ವಿಶ್ವದ ದ್ವಿ ಮಾದರಿಯ ವಾಹನ | ರಸ್ತೆ ಮೇಲೆ ಮಾತ್ರವಲ್ಲದೆ ರೈಲ್ವೆ ಹಳಿ ಮೇಲೂ ಚಲಿಸುತ್ತದೆಯಂತೆ ಈ ಮಿನಿ ಬಸ್ ಮಾದರಿಯ ವಾಹನ |ಇದರ ಇನ್ನಷ್ಟು ವಿಶಿಷ್ಟತೆ ಕುರಿತು ಇಲ್ಲಿದೆ ನೋಡಿ ಮಾಹಿತಿ Read More »


ಇಂಡಿಗೋ ವಿಮಾನದಲ್ಲಿ ತುಳುವಿನಲ್ಲಿ ಅನೌನ್ಸ್ ಮೆಂಟ್ ಮಾಡಿ ಕರಾವಳಿಗರ ಮನಗೆದ್ದ ಪೈಲೆಟ್ !!|  “ಮಾತೆರೆಗ್ಲಾ ಸೊಲ್ಮೆಲು” ಎಂದು ಮಾತು ಆರಂಭ ಮಾಡಿದ ವೀಡಿಯೋದ ತುಣುಕು ಕರಾವಳಿಯಲ್ಲಿ ಫುಲ್ ವೈರಲ್

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆ ಕರಾವಳಿಯ ಮಾತೃಭಾಷೆ. ತುಳು ಭಾಷೆಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ತುಳು ಭಾಷೆ ಎಂಥವರನ್ನಾದರೂ ಮೆಚ್ಚಿಸುವಂತದ್ದು ಹಾಗೆಯೇ ಆಕರ್ಷಿಸುವಂತದ್ದು ಕೂಡ. ಅದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ. ವಿಮಾನದ ಪೈಲಟ್ ಒಬ್ಬ ತುಳುವಿನಲ್ಲಿ ಅನೌನ್ಸ್ ಮೆಂಟ್ ಕೊಟ್ಟು ಹೈಫೈ ಇಂಗ್ಲಿಷ್ ಪ್ರಿಯರ ಮಧ್ಯೆ ವಿಭಿನ್ನ ಆಕರ್ಷಣೆಗೆ ಕಾರಣವಾಗಿರುವ ವೀಡಿಯೋ ಇದೀಗ ಕರಾವಳಿಯಲ್ಲಿ ಫುಲ್ ವೈರಲ್ ಆಗಿದೆ. ಉಡುಪಿ ಮೂಲದ ಪ್ರದೀಪ್ ಪದ್ಮಶಾಲಿ ಇಂಡಿಗೋ ವಿಮಾನದಲ್ಲಿ ಪೈಲಟ್ ಆಗಿದ್ದು, ಶುಕ್ರವಾರ ರಾತ್ರಿ …


ಇಂಡಿಗೋ ವಿಮಾನದಲ್ಲಿ ತುಳುವಿನಲ್ಲಿ ಅನೌನ್ಸ್ ಮೆಂಟ್ ಮಾಡಿ ಕರಾವಳಿಗರ ಮನಗೆದ್ದ ಪೈಲೆಟ್ !!|  “ಮಾತೆರೆಗ್ಲಾ ಸೊಲ್ಮೆಲು” ಎಂದು ಮಾತು ಆರಂಭ ಮಾಡಿದ ವೀಡಿಯೋದ ತುಣುಕು ಕರಾವಳಿಯಲ್ಲಿ ಫುಲ್ ವೈರಲ್
Read More »

ಮಂಗಳೂರು : ಎನ್ಐಟಿಕೆಯ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಮಂಗಳೂರು: ಸುರತ್ಕಲ್ ನ ಎನ್‌ಐಟಿಕೆ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ಬಿಹಾರದ ಜಮುಯಿ ಜಿಲ್ಲೆಯ ಓರೈಯಾ ಗ್ರಾಮದ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಸೌರವ್(19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.ಸೌರವ್ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು,ಆರ್ಥಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.ಬೆಳಗ್ಗೆ 8 ಗಂಟೆಯ ವೇಳೆಗೆ ಸೌರವ್ ರೂಂ ನಿಂದ ಹೊರಬಂದಿರದ ಕಾರಣ 9.30 ರ ವೇಳೆ ಕಿಟಕಿಯಿಂದ ನೋಡಿದಾಗ ಆತ್ಮಹತ್ಯೆ …

ಮಂಗಳೂರು : ಎನ್ಐಟಿಕೆಯ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು Read More »

ಅಂಕಲ್ ಎಂದು ಕರೆದಿದ್ದಕ್ಕೆ ಯುವತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ !!

ಅಂಕಲ್ ಅಂದಿದ್ದಕ್ಕೇ 18ರ ಯುವತಿಗೆ ಅಂಗಡಿ ಮಾಲೀಕನೋರ್ವ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಸಿತಾರ್‌ಗಂಜ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಅಂಕಲ್ ಎಂದು ಕರೆದಿದ್ದಕ್ಕೆ ನಿಶಾ ಅಹ್ಮದ್ ಎಂಬ 18 ವರ್ಷದ ಯುವತಿಗೆ 35 ವರ್ಷದ ಅಂಗಡಿ ಮಾಲೀಕ ಥಳಿಸಿದ್ದಾನೆ. ಹಲ್ಲೆಗೊಳಗಾದ ಯುವತಿ ತಲೆಗೆ ತೀವ್ರ ಪೆಟ್ಟಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು, ಆರೋಪಿಯನ್ನು ಮೋಹಿತ್ ಕುಮಾರ್ ಎಂದು …

ಅಂಕಲ್ ಎಂದು ಕರೆದಿದ್ದಕ್ಕೆ ಯುವತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ !! Read More »

ಎಸ್ ಡಿಪಿಐ ರಾಜ್ಯಾಧ್ಯಕ್ಷರಿಗೆ ಸವಣೂರಿನಲ್ಲಿ ಭವ್ಯ ಸ್ವಾಗತ

ಸವಣೂರು: ಎಸ್ ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಪ್ರಥಮ ಬಾರಿಗೆ ಸವಣೂರಿಗೆ ಆಗಮಿಸಿದ ಅಬ್ದುಲ್ ಮಜೀದ್ ಮೈಸೂರು ರವರನ್ನು ಸವಣೂರು ಗ್ರಾಮ ಸಮಿತಿ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.ಈ ಸಂಧರ್ಭದಲ್ಲಿ ಎಸ್ ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಬಾಬು ಸವಣೂರು, ಕಾರ್ಯದರ್ಶಿ ನಝೀರ್ ಸಿ.ಎ, ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ, ಸವಣೂರು ಬ್ಲಾಕ್ ಅಧ್ಯಕ್ಷ ರಫೀಕ್ ಎಂ. ಎ, ಸವಣೂರು ಗ್ರಾಮ ಸಮಿತಿ ಅಧ್ಯಕ್ಷ ರಝಾಕ್ ಕೆನರಾ, ಆಶ್ರಫ್ ಉರ್ಸಾಗ್,ರಫೀಕ್ ಎಂ.ಎಸ್, ಇರ್ಷಾದ್ ಸರ್ವೆ ಮತ್ತಿತರರು ಉಪಸ್ಥಿತರಿದ್ದರು.

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹಾವು ಕಡಿತ !! | ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಫಾರ್ಮ್ ಹೌಸ್ ನಲ್ಲಿ ಹಾವು ಕಡಿದಿದ್ದು, ಅದೃಷ್ಟವಶಾತ್ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಾನ್ವೆಲ್ ಫಾರ್ಮ್ ಹೌಸ್‍ನಲ್ಲಿ ಸಲ್ಮಾನ್ ಖಾನ್ ಅವರಿಗೆ ಹಾವು ಕಡಿದಿದೆ. ಈ ಹಾವು ವಿಷಕಾರಿ ಆಗಿರಲಿಲ್ಲ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಶನಿವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ನಟನನ್ನು ಚಿಕಿತ್ಸೆಗಾಗಿ ಕಾಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ನಂತರ ಬೆಳಗ್ಗೆ 9 ಗಂಟೆಗೆ …

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹಾವು ಕಡಿತ !! | ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು Read More »

ಸರ್ವೆ ಶ್ರೀ ಸಂತಾನ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶಾಭಿಷೇಕ,ಕಣ್ತುಂಬಿಕೊಂಡ ಸಹಸ್ರಾರು ಭಕ್ತರು | ಇಂದು ರಾತ್ರಿ ಆಕರ್ಷಕ ಸುಡುಮದ್ದುಗಳ ಪ್ರದರ್ಶನ ಸರ್ವೆ ಬೆಡಿ

ಪುತ್ತೂರು : ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಪುನಃ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದ್ದು,ಡಿ.26ರಂದು ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ‌ ವೇ.ಮೂ.ಬ್ರಹ್ಮ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಅವರ ನೇತೃತ್ವದಲ್ಲಿ ನಡೆಯಿತು. ಬ್ರಹ್ಮಕಲಶದ ಪುಣ್ಯ ದಿನವಾದ ಆದಿತ್ಯವಾರ ದೇವಸ್ಥಾನವನ್ನು ವಿಶೇಷವಾಗಿ ಹೂವಿನಿಂದ ಅಲಂಕಾರ ಮಾಡಲಾಗಿತ್ತು..ಸಂತಾನ ಶ್ರೀ ಸುಬ್ರಹ್ಮಣ್ಯ್ಯೇಶ್ವರ ದೇವರೆಂದೆ ಪ್ರಸಿದ್ದಿ ಪಡೆದಿರುವ ,ಬೇಡಿದವರಿಗೆ ಮಾಂಗಲ್ಯ ಭಾಗ್ಯ,ಸಂತಾನ ಭಾಗ್ಯ ಕರುಣಿಸುವ ಸುಬ್ರಹ್ಮಣ್ಯನ ಬ್ರಹ್ಮಕಲಶವನ್ನು ಕಣ್ತುಂಬಿಸಿಕೊಳ್ಳಲು ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಬೆಳಗ್ಗೆ 7ಕ್ಕೆ ಗಣಪತಿ ಹೋಮ, …

ಸರ್ವೆ ಶ್ರೀ ಸಂತಾನ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶಾಭಿಷೇಕ,ಕಣ್ತುಂಬಿಕೊಂಡ ಸಹಸ್ರಾರು ಭಕ್ತರು | ಇಂದು ರಾತ್ರಿ ಆಕರ್ಷಕ ಸುಡುಮದ್ದುಗಳ ಪ್ರದರ್ಶನ ಸರ್ವೆ ಬೆಡಿ Read More »

error: Content is protected !!
Scroll to Top