22 ವರ್ಷಗಳ ನಂತರ ಕಂಡುಬಂದಿದೆ ವಾಕಿಂಗ್ ಹ್ಯಾಂಡ್ ಫಿಶ್ !! | ನಡೆದಾಡುವ ಈ ಪಿಂಕ್ ಮೀನಿನ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಅನೇಕ ಬಗೆಯ,ವಿಭಿನ್ನ ರೀತಿಯ ಮೀನುಗಳು ಕಾಣಸಿಗುತ್ತದೆ.ಇಂತಹ ಮೀನುಗಳಲ್ಲಿ ಕೆಲವೊಂದು ಮಾತ್ರ ನೋಡಲು ಸಿಗುತ್ತದೆ.ಇದೇ ರೀತಿ ಬಲು ಅಪರೂಪದ ವಾಕಿಂಗ್ ಹ್ಯಾಂಡ್‌ಫಿಶ್ ಎನ್ನುವ ಮೀನು ಬರೋಬ್ಬರಿ 22 ವರ್ಷಗಳಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾದ ಟ್ಯಾಸ್ಮೆನಿಯನ್ ಕರಾವಳಿಯಲ್ಲಿ ಕಂಡುಬಂದಿದೆ.

ಟ್ಯಾಸ್ಮೆನಿಯಾ ವಿಶ್ವವಿದ್ಯಾನಿಲಯದ ಅಂಟಾರ್ಕ್ಟಿಕ್ ಮತ್ತು ಸಾಗರ ಅಧ್ಯಯನಗಳ ಸಂಸ್ಥೆಯಿಂದ ಪ್ರೊಫೆಸರ್ ನೆವಿಲ್ಲೆ ಬ್ಯಾರೆಟ್ ಮತ್ತು ಅವರ ತಂಡವು ಹವಳ, ನಳ್ಳಿ ಮತ್ತು ಮೀನು ಪ್ರಭೇದಗಳನ್ನು ಸಮೀಕ್ಷೆ ಮಾಡಲು ಬೈಟೆಡ್ ಕ್ಯಾಮರಾವನ್ನು ಸಮುದ್ರದಾಳದಲ್ಲಿ ಇರಿಸಿದೆ. ಈ ವೇಳೆ ಪಿಂಕ್ ಹ್ಯಾಂಡ್‌ಫಿಶ್ ಪತ್ತೆಯಾಗಿದೆ.ಗುಲಾಬಿ ಹ್ಯಾಂಡ್‌ಫಿಶ್ ಅನ್ನು 1999ರಲ್ಲಿ ಟ್ಯಾಸ್ಮೆನಿಯಾದಲ್ಲಿ ಈಜುಗಾರನೊಬ್ಬ ಕೊನೆಯದಾಗಿ ಗುರುತಿಸಿದ್ದು, ಇದೀಗ ನೆವಿಲ್ಲೆ ಬ್ಯಾರೆಟ್ ಕ್ಯಾಮರ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ.

ವರ್ಷದ ಆರಂಭದಲ್ಲಿ ಟ್ಯಾಸ್ಮನ್ ಫ್ರಾಕ್ಚರ್ ಮೆರೈನ್ ಪಾರ್ಕ್‌ನಲ್ಲಿ ತೆಗೆದ ಆಳವಾದ ಸಮುದ್ರದ ಕ್ಯಾಮೆರಾ ರೆಕಾರ್ಡಿಂಗ್‌ನಲ್ಲಿ ಅಪರೂಪದ ಮೀನುಗಳನ್ನು ಅವರು ಗುರುತಿಸಿದ್ದಾರೆ. ಹ್ಯಾಂಡ್‌ಫಿಶ್ ಅನ್ನು ಇತ್ತೀಚೆಗೆ ಅಳಿವಿನಂಚಿನಲ್ಲಿರುವ ಜೀವಿ ಎಂಬ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು,ಈ ಜಾತಿಯ ಮೀನುಗಳು ಹೆಚ್ಚು ಗಾತ್ರದ ಕೈಗಳನ್ನು ಹೊಂದಿದ್ದು,ಈ ಮೀನುಗಳು ಸಮುದ್ರತಳದ ಉದ್ದಕ್ಕೂ ನಡೆಯುವ ಹಾಗೂ ಈಜುವ ಸಾಮರ್ಥ್ಯವನ್ನು ಹೊಂದಿವೆ.

Leave A Reply

Your email address will not be published.