ಇನ್ನು ಮುಂದೆ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಗೆ ಹಾಕಿ ಬ್ರೇಕ್ !! | ಆರೋಗ್ಯ ತಜ್ಞರ ಪ್ರಕಾರ ಈ ಮಾಸ್ಕ್ ಬಳಸಬೇಕೆಂತೆ

ಕೊರೋನಾ ಮಹಾಮಾರಿ ಪ್ರಪಂಚಕ್ಕೆ ಕಾಲಿಟ್ಟ ಮೇಲೆ‌ ಜನಜೀವನವೇ ಬದಲಾಗಿದೆ. ಎರಡು ವರ್ಷ ಪ್ರಪಂಚದಾದ್ಯಂತ ತಾಂಡವವಾಡಿದ ಕೊರೊನಾ ವೈರಸ್‌ ಇದೀಗ ಹೊಸ ರೂಪಾಂತರದ ಭೀತಿಯನ್ನು ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ಮಾಸ್ಕ್‌ಗಳ ಅಪ್ಗ್ರೇಡ್ ಮಾಡಲು ಸೂಚಿಸುತ್ತಿದ್ದಾರೆ.

ಕೋವಿಡ್-19 ಪ್ರಾರಂಭವಾದಾಗ ವೈದ್ಯಕೀಯ ಸಾಧನಗಳ ಕೊರತೆಯಿತ್ತು. ಈ ಕಾರಣ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಎನ್95 ಮಾಸ್ಕ್‌ಗಳ ಬದಲು ಬಟ್ಟೆಯ ಮಾಸ್ಕ್‌ಗಳನ್ನು ಬಳಸಲು ಪ್ರೋತ್ಸಾಹಿಸಿದ್ದರು. ಈ ಬಟ್ಟೆಯ ಮಾಸ್ಕ್‌ಗಳನ್ನು ಜನರು ಕಡಿಮೆ ಬೆಲೆಯಲ್ಲಿ ಕೊಳ್ಳಬಹುದಿತ್ತು. ಅವುಗಳನ್ನು ಮರುಬಳಕೆಯೂ ಮಾಡಬಹುದಿತ್ತು. ಹೀಗಾಗಿ ಜನರು ಸಿಂಗಲ್ ಲೇಯರ್‌ನ ಬಟ್ಟೆಯ ಮಾಸ್ಕ್‌ಗಳನ್ನೇ ಹೆಚ್ಚಾಗಿ ಬಳಸಲು ಪ್ರಾರಂಭಿಸಿದ್ದರು.

ಇದೀಗ ಪ್ರಪಂಚವನ್ನೇ ತಲ್ಲಣಗೊಳಿಸುತ್ತಿರುವ ಓಮಿಕ್ರಾನ್ ರೂಪಾಂತರದಿಂದ ಬಚಾವಾಗಲು ಆರೋಗ್ಯ ತಜ್ಞರು ಎನ್95 ಅಥವಾ ಕೆ95 ಮಾಸ್ಕ್‌ಗಳನ್ನು ಬಳಕೆ ಮಾಡಲು ಸಲಹೆ ನೀಡುತ್ತಿದ್ದಾರೆ. ಸದ್ಯ ಈ ಮಾಸ್ಕ್‌ಗಳ ಕೊರತೆ ಇಲ್ಲದಿರುವುದರಿಂದ ಜನರೂ ಅಪ್ಗ್ರೇಡ್ ಆಗುವುದು ಒಳಿತು.

ಶಸ್ತ್ರಚಿಕಿತ್ಸೆಯಲ್ಲಿ ಬಳಕೆಯಾಗುವ ಮೂರು ಪದರದ ಮಾಸ್ಕ್‌ಗಳು ವೈರಸ್ ವಿರುದ್ಧ ಹೆಚ್ಚಿನ ರಕ್ಷಣೆ ನೀಡುತ್ತದೆ. ಬಟ್ಟೆಯ ಮಾಸ್ಕ್‌ಗಳು ಗಾಳಿಯನ್ನು ಶೇ.75 ರಷ್ಟು ಶುದ್ಧಗೊಳಿಸಿದರೆ, ಎನ್95 ಅಥವಾ ಕೆ95 ಮಾಸ್ಕ್‌ಗಳು ಗಾಳಿಯನ್ನು ಶೇ.95 ರಷ್ಟು ಶುದ್ಧಗೊಳಿಸುತ್ತದೆ.

ಹೀಗಿರುವಾಗ ಬಟ್ಟೆಯ ಮಾಸ್ಕ್‌ಗಳಿಗಿಂತಲೂ ಎನ್95 ಅಥವಾ ಕೆ95 ಮಾಸ್ಕ್‌ಗಳು ವೈರಸ್ ತಡೆಯಲು ಉತ್ತಮವಾಗಿದೆ. ಒಂದು ವೇಳೆ ಇಂತಹ ಮಾಸ್ಕ್‌ಗಳಿಕೆ ಹಣ ವ್ಯಯಿಸಲು ಇಷ್ಟಪಡದವರು ಮೂರು ಲೇಯರ್ ಹೊಂದಿರುವ ಬಟ್ಟೆಯ ಮಾಸ್ಕ್‌ಗಳನ್ನು ಬಳಸುವುದು ಉತ್ತಮ.

Leave A Reply

Your email address will not be published.