Day: December 22, 2021

ಕಡಬ : ಕಾರ್ಮಿಕರಿಂದ ಮೊಬೈಲ್ ಪಡೆದು ಪರಾರಿ

ಕಡಬ : ಇಲ್ಲಿನ ಮಿನಿ ವಿಧಾನಸೌಧದ ಕಟ್ಟಡ ಕಾಮಗಾರಿ ಮಾಡುತ್ತಿದ್ದ ಹಿಂದಿ ಭಾಷಿಗ ಕಾರ್ಮಿಕರ ಮೊಬೈಲ್ ನ್ನು ಬೈಕ್ ನಲ್ಲಿ ಬಂದ ಅಪರಿಚಿತರು ಎಗರಿಸಿಕೊಂಡು ಪರಾರಿಯಾದ ಘಟನೆ ಕಡಬದಲ್ಲಿ ಬುಧವಾರದಂದು ಸಂಜೆ ನಡೆದಿದೆ. ಕಡಬ ತಹಶೀಲ್ದಾರ್ ಕಛೇರಿಯ ಹಿಂಭಾಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅಲ್ಲಿಗೆ ಬೈಕ್ ನಲ್ಲಿ ಬಂದ ಅಪರಿಚಿತರು ತುರ್ತು ಕರೆಯನ್ನು ಮಾಡಲು ಮೊಬೈಲ್ ಕೊಡುವಂತೆ ಕೇಳಿದ್ದಾರೆ. ಅದರಂತೆ ಕಾರ್ಮಿಕರು ಮೊಬೈಲ್ ಕೊಟ್ಟಿದ್ದಾರೆ. ಮೊಬೈಲ್ ಸಿಗುತ್ತಿದ್ದಂತೆಯೇ ಯುವಕರು ಪರಾರಿಯಾಗಿದ್ದು, ಕಡಬ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶಾಲಾ ಬಸ್‌ಗೆ ಇದ್ದಕ್ಕಿದ್ದಂತೆ ಬೆಂಕಿ | ಆತಂಕ ಸೃಷ್ಟಿಸಿದ ಘಟನೆ,ಇತರ ಬಸ್ ಸ್ಥಳಾಂತರ

ಮೈಸೂರು: ಶಾಲಾ ಮಕ್ಕಳ ಬಸ್‌ಗೆ ಇದ್ದಕ್ಕಿದ್ದ ಹಾಗೆ ಬೆಂಕಿ ಹಿಡಿದು ಉರಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ನಡೆದಿದೆ. ಬಸ್ ನಲ್ಲಿ ಎಂದಿನಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಬಂದ ಚಾಲಕ, ಬಸ್ ನಿಂದ ಮಕ್ಕಳನ್ನು ಕೆಳಗಿಳಿಸಿ ಶಾಲಾ ಆವರಣದಲ್ಲಿ ಇತರೆ ಬಸ್ ಗಳ ಪಕ್ಕದಲ್ಲಿ ನಿಲ್ಲಿಸಿ ಹೊರ ಬಂದ ಸ್ವಲ್ಪ ಹೊತ್ತಿನಲ್ಲೇ ಇದ್ದಕ್ಕಿದ್ದಂತೆ ಬಸ್ ಗೆ ಬೆಂಕಿ ತಗುಲಿ ದಿಢೀರನೇ ಹೊತ್ತಿ ಉರಿಯಲು ಪ್ರಾರಂಭಿಸಿತು. ಬಸ್ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಆತಂಕಕ್ಕೊಳಗಾದ ಇತರೆ ಬಸ್ …

ಶಾಲಾ ಬಸ್‌ಗೆ ಇದ್ದಕ್ಕಿದ್ದಂತೆ ಬೆಂಕಿ | ಆತಂಕ ಸೃಷ್ಟಿಸಿದ ಘಟನೆ,ಇತರ ಬಸ್ ಸ್ಥಳಾಂತರ Read More »

ಸರ್ವೆ : ಸಂತಾನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶ,ಧಾರ್ಮಿಕ ಕಾರ್ಯಕ್ರಮ

ಸವಣೂರು: ದೇವಾಲಯ ನಮ್ಮ ಧಾರ್ಮಿಕ ಪರಂಪರೆ ಮುಂದುವರಿಸಲು ಒಂದು ಸೇತುವೆ ಎಂದು ಮುಂಡೂರು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಚೆಲ್ಯಡ್ಕ ಹೇಳಿದರು. ಮಂಗಳವಾರ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಪುನಃ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಸರ್ವೆಯಲ್ಲಿ ಭವ್ಯ ದೇಗುವ ನಿರ್ಮಾಣ ದ ಮೂಲಕ ಮುಂದಿನ ಜನಾಂಗಕ್ಕೆ ನಮ್ಮ ಪರಂಪರೆ ಮುಂದುವರಿಸಲು ಅಕಾಶ ಮಾಡಿಕೊಟ್ಟಂತಾಗಿದೆ‌. ಸಂಪೂರ್ಣ ಶರಣಾಗತಿಯಿಂದ ದೇವರ ಒಲುಮೆ ಸಾಧ್ಯ ಎಂದರು. ಕಲ್ಲಮ ರಾಘವೇಂದ್ರ …

ಸರ್ವೆ : ಸಂತಾನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶ,ಧಾರ್ಮಿಕ ಕಾರ್ಯಕ್ರಮ Read More »

ರಾಮನಗರ : ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಒಬ್ಬರ ರಕ್ಷಣೆ

ಬೆಂಗಳೂರು : ರಾಮನಗರದ ಮಾಗಡಿ ತಾಲ್ಲೂಕಿನ ದಮ್ಮನಕಟ್ಟೆ ಗ್ರಾಮದಲ್ಲಿ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಗ್ರಾಮದ ನಿವಾಸಿಗಳಾದ ಸಿದ್ದಮ್ಮ (55), ಅವರ ಪುತ್ರಿ ಸುಮಿತ್ರಾ (30) ಹಾಗೂ ಅಳಿಯ ಹನುಮಂತ ರಾಜು (35) ಮೃತರು ಎಂದು ಗುರುತಿಸಲಾಗಿದೆ. ಸುಮಿತ್ರಾ ಅವರ ಹಿರಿಯ ಪುತ್ರಿ ಕೀರ್ತನಾಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಹನುಮಂತರಾಜು ದಮ್ಮನಕಟ್ಟೆಯಲ್ಲಿ ವ್ಯವಸಾಯ ಮಾಡಿಕೊಂಡು ಕುಟುಂಬ ಸಮೇತ ಅತ್ತೆಯ ಮನೆಯಲ್ಲೇ ನೆಲೆಸಿದ್ದು, ಮಂಗಳವಾರ ರಾತ್ರಿ ಮದ್ಯಪಾನ ಮಾಡಿ ಬಂದು ಮನೆಯಲ್ಲಿ ಜಗಳ ತೆಗೆದಿದ್ದರು ಎನ್ನಲಾಗದ್ದು, ಈ ವೇಳೆ …

ರಾಮನಗರ : ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಒಬ್ಬರ ರಕ್ಷಣೆ Read More »

ಕೆದಂಬಾಡಿ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ,ಬಿಂಬ ಪ್ರತಿಷ್ಠೆ

ಪುತ್ತೂರು: ಕೆದಂಬಾಡಿ ಸನ್ಯಾಸಿಗುಡ್ಡೆ ನೂತನ ಶಿಲಾಮಯ ಶ್ರೀರಾಮ ಮಂದಿರದ ಲೋಕಾರ್ಪಣೆ, ಸೀತಾ ಲಕ್ಷ್ಮಣ ಆಂಜನೇಯ ಸಹಿತ ಶ್ರೀರಾಮ ದೇವರ ಬಿಂಬ ಪ್ರತಿಷ್ಠೆ, ಶ್ರೀ ದುರ್ಗಾ ಪೀಠ, ಸದ್ಗುರು ಡಾ. ಎಸ್.ಆರ್. ಗೋಪಾಲನ್ ನಾಯರ್ ಗುರುಪೀಠ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ದ. 22 ರಂದು ಬೆಳಿಗ್ಗೆ 10.24 ರ ಕುಂಭ ಲಗ್ನ ಮುಹೂರ್ತದಲ್ಲಿ ಕ್ಷೇತ್ರದ ಪುರೋಹಿತರಾದ ಪಟ್ಲಮೂಲೆ ಕೃಷ್ಣಕುಮಾರ್ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಿತು. ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆಯಲ್ಲಿ ಭಕ್ತರಿಂದ ಆರಾಧನೆಗೊಳಪಡುತ್ತಿರುವ ಸುಮಾರು 75 ವರ್ಷಗಳ ಇತಿಹಾಸವಿರುವ ಶ್ರೀರಾಮ ಮಂದಿರದಲ್ಲಿ ಶಿಲಾಮಯ …

ಕೆದಂಬಾಡಿ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ,ಬಿಂಬ ಪ್ರತಿಷ್ಠೆ Read More »

ಇನ್ನು ಮುಂದೆ ಆನ್ಲೈನ್ ಶಾಪಿಂಗ್ ಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಗತ್ಯವಿಲ್ಲ !!| ಹಾಗಿದ್ರೆ ಹೇಗೆ ಪಾವತಿ ಮಾಡುವುದು?? ಇಲ್ಲಿದೆ ಮಾಹಿತಿ

ಆನ್ ಲೈನ್ ಶಾಪಿಂಗ್ ವೇಳೆ ಪಾವತಿ ಮಾಡುವ ವಿಧಾನ ಕಿರಿಕಿರಿಯಾಗುತ್ತಿತ್ತೆ. ಹಾಗಿದ್ರೆ ಇದೀಗ ಖರೀದಿ ಬಹು ಸುಲಭವೆಂದೇ ಹೇಳಬಹುದು. ಹೌದು.ವೆಬ್ ಸೈಟ್ʼಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿ ಬಹುತೇಕ ವೆಬ್ ಸೈಟ್ʼಗಳಿಂದ ಖರೀದಿಸುವುದು ಜನವರಿ 1, 2022 ರಿಂದ ಸುಲಭವಾಗಲಿದೆ. ಅದೇಗೆ? ಮುಂದೆ ನೋಡಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಪಾವತಿ ವಿಧಾನವನ್ನ ಪರಿಚಯಿಸಿದ್ದು, ಕೇವಲ ಸುಲಭವಲ್ಲ, ಈ ಹೊಸ ವಿಧಾನ ನಿಮ್ಮ ಗೌಪ್ಯ ಮಾಹಿತಿಯನ್ನ ರಕ್ಷಿಸುತ್ತದೆ. ಡಿಜಿಟಲ್ ಪ್ಲಾಟ್ ಫಾರ್ಮ್ʼಗಳಿಗಾಗಿ, ಇನ್ಮುಂದೆ 16 ಅಂಕಿಗಳ …

ಇನ್ನು ಮುಂದೆ ಆನ್ಲೈನ್ ಶಾಪಿಂಗ್ ಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಗತ್ಯವಿಲ್ಲ !!| ಹಾಗಿದ್ರೆ ಹೇಗೆ ಪಾವತಿ ಮಾಡುವುದು?? ಇಲ್ಲಿದೆ ಮಾಹಿತಿ Read More »

ನಟಿಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಆರೋಪಿ ಕೊನೆಗೂ ಪೊಲೀಸ್ ಅತಿಥಿ !!

ದಕ್ಷಿಣ ಭಾರತದ ಜನಪ್ರಿಯ ನಟಿ ಪಾರ್ವತಿ ತಿರುವೋತು ಅವರನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದ ಆರೋಪಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕೊಲ್ಲಂ ಮೂಲದ ಅಫ್ಸಲ್ (34) ಬಂಧಿತ ಆರೋಪಿ. ನಟಿಗೆ ನಿರಂತರ ಫೋನ್ ಕರೆಗಳ ಮೂಲಕ ಆರೋಪಿಯು ತೊಂದರೆಯನ್ನು ನೀಡುತ್ತಿದ್ದ. ಅಷ್ಟೇ ಅಲ್ಲದೆ ಈತ ಆಹಾರ ಪೊಟ್ಟಗಳನ್ನು ನೀಡಲು ಕೊಚ್ಚಿಯಲ್ಲಿರುವ ನಟಿ ಪಾರ್ವತಿ ನಿವಾಸಕ್ಕೆ ಆಗಾಗ ಬಂದು ಅಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿದ್ದ. ಕಳೆದ ಕೆಲವು ವರ್ಷಗಳಿಂದ ಫೋನ್ ಸಂದೇಶಗಳ ಮೂಲಕ ನಟಿಗೆ ತೊಂದರೆ ನೀಡುತ್ತಿದ್ದನು. ಇದರ …

ನಟಿಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಆರೋಪಿ ಕೊನೆಗೂ ಪೊಲೀಸ್ ಅತಿಥಿ !! Read More »

ಲವ್ ಜಿಹಾದ್ ಪ್ರಕರಣದ ಮೊದಲ ತೀರ್ಪು ಪ್ರಕಟ | ಮುಸ್ಲಿಂ ಯುವಕನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಲವ್ ಜಿಹಾದ್ ಕಾಯ್ದೆಯಡಿ ಮೊಟ್ಟ ಮೊದಲ ತೀರ್ಪು ಪ್ರಕಟವಾಗಿದ್ದು, ಕಾನ್ಪುರದ ಯುವಕನಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 30,000 ರೂಪಾಯಿ ದಂಡ ವಿಧಿಸಿ ಕಾನ್ಪುರ ನ್ಯಾಯಾಲಯ ತೀರ್ಪು ನೀಡಿದೆ. ಈ ಘಟನೆ 2017ರ ಮೇ ತಿಂಗಳಲ್ಲಿ ನಡೆದಿತ್ತು. ಜಾವೇದ್ ಎಂಬ ಮುಸ್ಲಿಂ ಯುವಕ ತನ್ನನ್ನು ಹಿಂದೂ ಎಂದು ಪರಿಚಯಿಸಿಕೊಂಡು ಬಾಲಕಿಯೊಬ್ಬಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ನಂತರ ಆತ ಬಾಲಕಿಯನ್ನು ಕರೆದುಕೊಂಡು ಪರಾರಿಯಾಗಿದ್ದ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರು ದಿನ ಯುವಕನನ್ನು …

ಲವ್ ಜಿಹಾದ್ ಪ್ರಕರಣದ ಮೊದಲ ತೀರ್ಪು ಪ್ರಕಟ | ಮುಸ್ಲಿಂ ಯುವಕನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ Read More »

ಪುತ್ತೂರು :ನೀಟ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ ಸಿಂಚನಾಲಕ್ಷ್ಮೀ ಜೊತೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ವಿಶೇಷ ಸಂವಾದ

ಪುತ್ತೂರು: ನೀಟ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ ಸಿಂಚನಾಲಕ್ಷ್ಮೀ ಜೊತೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿಜ್ಞಾನ ಸಂಘದ ವಿದ್ಯಾರ್ಥಿಗಳು ಅವರ ಮನೆಗೆ ತೆರಳಿ ಸಂದರ್ಶಿಸಿ ವಿಶೇಷ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಸಿಂಚನಾಲಕ್ಷ್ಮೀ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ನಿರಂತರ ಕಲಿಕೆ, ಪುನರ್ಮನನ, ಸಮಯ ಹೊಂದಾಣಿಕೆ ಜೊತೆಗೆ ತನ್ನ ಕಾಲೇಜಿನ ಉಪನ್ಯಾಸಕರ ಪ್ರೋತ್ಸಾಹ ಹಾಗೂ ಹೆತ್ತವರ ಒತ್ತಡ ರಹಿತ ಸಹಕಾರ ಇವೆಲ್ಲಾ ತಮ್ಮ ಸಾಧನೆಗೆ ಸಹಕಾರಿಯಾಯಿತೆಂದು ತಿಳಿಸಿದರು. ಸಂವಾದವನ್ನು ಕಾಲೇಜಿನ ವಿದ್ಯಾರ್ಥಿಗಳಾದ ಸ್ತುತಿ ,ಪ್ರತೀಕ್ಷಾ, ಪೂಜಿತ, ಅಕ್ಷಯ …

ಪುತ್ತೂರು :ನೀಟ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ ಸಿಂಚನಾಲಕ್ಷ್ಮೀ ಜೊತೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ವಿಶೇಷ ಸಂವಾದ Read More »

ಶಿರಾಡಿ : ಘನತ್ಯಾಜ್ಯ ಘಟಕಕ್ಕೆ ಮಂಜೂರಾಗಿದ್ದ ಜಾಗ ಅತಿಕ್ರಮಣ ,ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿದ ಗ್ರಾ.ಪಂ

ಕಡಬ : ಕಡಬ ತಾಲೂಕಿನ ಶಿರಾಡಿ ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕಕ್ಕೆ ಮಂಜೂರಾಗಿದ್ದ ಸರಕಾರಿ ಜಾಗದ ಅತಿಕ್ರಮಣವನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಡಿ.೨೧ರಂದು ತೆರವುಗೊಳಿಸಲಾಗಿದೆ. ಶಿರಾಡಿ ಗ್ರಾಮದ ಪದಂಬಳ ಎಂಬಲ್ಲಿ ಸರ್ವೆ ನಂಬ್ರ 87\1ರ ಪೈಕಿ 50 ಸೆಂಟ್ಸ್ ಜಾಗವನ್ನು ಘನತ್ಯಾಜ್ಯ ಘಟಕಕ್ಕೆ ಕಾಯ್ದಿರಿಸಲಾಗಿತ್ತು. ಆದರೆ ಈ ಜಾಗವನ್ನು ಸ್ಥಳೀಯರೊಬ್ಬರು ಅತಿಕ್ರಮಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜೆಸಿಬಿ ಬಳಸಿ ಅತಿಕ್ರಮಣವನ್ನು ಗ್ರಾ.ಪಂ ತೆರವುಗೊಳಿಸಿದೆ. ಈ ಸಂದರ್ಭದಲ್ಲಿ ಶಿರಾಡಿ ಗ್ರಾ.ಪಂ.ಪಿಡಿಒ ವೆಂಕಟೇಶ್, ಗ್ರಾಮಕರಣಿಕ ಸಂತೋಷ್, ಗ್ರಾ.ಪಂ.ಅಧ್ಯಕ್ಷೆ ವಿನಿತಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. …

ಶಿರಾಡಿ : ಘನತ್ಯಾಜ್ಯ ಘಟಕಕ್ಕೆ ಮಂಜೂರಾಗಿದ್ದ ಜಾಗ ಅತಿಕ್ರಮಣ ,ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿದ ಗ್ರಾ.ಪಂ Read More »

error: Content is protected !!
Scroll to Top