ಇನ್ಮುಂದೆ ವಾಟ್ಸಪ್ ನಲ್ಲೇ ವೈದ್ಯರ ಭೇಟಿ | ಒಂದೇ ಮೆಸೇಜ್ ಮೂಲಕ ನೀವು ನಿಮ್ಮ ಸಮಸ್ಯೆಗೆ ಕಂಡುಕೊಳ್ಳಬಹುದಂತೆ ಪರಿಹಾರ!!

ಈ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸದವರು ಯಾರು ಇಲ್ಲ. ಹೆಚ್ಚಿನ ಯುವಜನತೆ ವಾಟ್ಸಾಪ್, ಇನ್ಸ್ಟಾಗ್ರಾಮ್ ಖಾತೆಗಳನ್ನು ಹೊಂದಿರುತ್ತಾರೆ. ಅದರಲ್ಲೂ ವಾಟ್ಸಪ್ ಉಪಯೋಗಿಸದವರು ಸಿಗುವುದು ಅಪರೂಪ. ವಾಟ್ಸಪ್ ಇತ್ತೀಚಿಗೆ ವಾಟ್ಸಾಪ್ ಪೇ ಎಂಬ ನೂತನ ಫ್ಯೂಚರ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಇನ್ನೊಂದು ಹೊಸ ಅವಕಾಶವನ್ನು ತನ್ನ ಖಾತೆದಾರರಿಗೆ ತೆರೆದಿಟ್ಟಿದೆ.

ಇದೀಗ ಆರೋಗ್ಯ ದೃಷ್ಟಿಯಿಂದ ವಾಟ್ಸಪ್ ನಲ್ಲಿಯೇ ವೈದ್ಯರನ್ನು ಭೇಟಿ ಮಾಡುವ ಅವಕಾಶವನ್ನು ವಾಟ್ಸಪ್ ತೆರೆದಿಟ್ಟಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಾಮಾನ್ಯ ಸೇವಾ ಕೇಂದ್ರ (CSC) ಆರೋಗ್ಯ ಸೇವಾ ಡೆಸ್ಕ್ ಅನ್ನು ಸ್ಥಾಪಿಸಿದೆ. ಇದರ ಅಡಿಯಲ್ಲಿ, ವಾಟ್ಸಾಪ್ನಲ್ಲಿ ಮೀಸಲಾದ ಚಾಟ್ಬಾಟ್ ಆಧಾರಿತ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ಇದು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ದೂರದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಹಾಯ ಮಾಡುತ್ತದೆ. ಈ ಸಹಾಯವಾಣಿಯು ವಾಟ್ಸಾಪ್ ನಲ್ಲಿ ಟೆಲಿ-ಕನ್ಸಲ್ಟೇಶನ್ ಸೌಲಭ್ಯವನ್ನು ಒದಗಿಸುತ್ತದೆ. ಇದನ್ನು CSC ಆರೋಗ್ಯ ಸೇವೆಗಳ ಸಹಾಯವಾಣಿ ಎಂದು ಕರೆಯಲಾಗುತ್ತಿದೆ.

ಸಹಾಯವಾಣಿಯಲ್ಲಿ ಜನರಿಗೆ ಯಾವ ಸೌಲಭ್ಯಗಳು ಸಿಗುತ್ತವೆ?

ವಾಟ್ಸಾಪ್ ಮೂಲಕ ವೈದ್ಯರನ್ನು ಸಂಪರ್ಕಿಸಬಹುದಾಗಿದೆ. ವ್ಯಾಪಕ ಶ್ರೇಣಿಯ ಕೊರೋನಾ ಸಂಬಂಧಿತ ಸಂಪನ್ಮೂಲಗಳನ್ನು ಪ್ರವೇಶಿಸಲು ಮತ್ತು ಗೊಂದಲವಿದ್ದ ಪ್ರಶ್ನೆಗಳನ್ನು ಪರಿಹರಿಸಲು ಇದು ಸಹಾಯಕವಾಗಿದೆ.

ವಾಟ್ಸಪ್ ನಲ್ಲಿ ಈ ಸೇವೆಯನ್ನು ಹೇಗೆ ಬಳಸುವುದು?

ವಿಶೇಷವೆಂದರೆ ಈ ಸೇವೆಯು ಎಲ್ಲರಿಗೂ ಉಚಿತವಾಗಿ ಲಭ್ಯವಿರುತ್ತದೆ. ಅಂದರೆ, ಬಳಕೆದಾರರು ವಾಟ್ಸಾಪ್ನಲ್ಲಿ CSC ಆರೋಗ್ಯ ಸೇವೆಗಳ ಸಹಾಯವಾಣಿಯನ್ನು ಉಚಿತವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ. ಈ ಸೇವೆಯು ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿರುತ್ತದೆ. ಸಹಾಯವಾಣಿಯನ್ನು ಪ್ರವೇಶಿಸಲು, ವಾಟ್ಸಪ್ ಬಳಕೆದಾರರು +917290055552 ಸಂಖ್ಯೆಗೆ ‘ಹಾಯ್’ ಸಂದೇಶವನ್ನು ಕಳುಹಿಸಬೇಕು ಮತ್ತು ವೈದ್ಯರೊಂದಿಗೆ ಸಂಪರ್ಕಿಸಲು ಆಯ್ಕೆಗಳನ್ನು ಆರಿಸಬೇಕಾಗುತ್ತದೆ.

CSC ಪ್ರಕಾರ, ಹೆಲ್ಪ್ಡೆಸ್ಕ್ ಅನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಡಿಜಿಟಲ್ ಒಳಗೊಳ್ಳುವ ಚಾನೆಲ್ಗಳ ಮೂಲಕ ಆರೋಗ್ಯ ಸೇವೆಯನ್ನು ಒದಗಿಸುವ ಗುರಿಯ ಪ್ರಮುಖ ಮತ್ತು ಸುಲಭವಾಗಿ ಪ್ರವೇಶಿಸಬಹುದಾದ ವಿಸ್ತರಣೆಯಾಗಿ ಅಭಿವೃದ್ಧಿಪಡಿಸಲಾಗಿದೆ. ವಾಟ್ಸಾಪ್ ಹೆಲ್ಪ್ಡೆಸ್ಕ್ ಬಳಕೆದಾರರಿಗೆ ಸಾಮಾನ್ಯ ಆರೋಗ್ಯ ಮತ್ತು ಕೊರೋನಾ ಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಅವರ ನಿರ್ದಿಷ್ಟ ಆರೋಗ್ಯ ಅಗತ್ಯಗಳ ಆಧಾರದ ಮೇಲೆ ಸೂಕ್ತ ವೈದ್ಯರಿಗೆ ಮಾರ್ಗದರ್ಶನ ನೀಡುತ್ತದೆ.

ಸಿಎಸ್ಸಿ ಇ-ಗವರ್ನೆನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್ ನ ಸಿಇಒ ಈ ಬಗ್ಗೆ ಮಾತನಾಡಿದ್ದು, “ಗ್ರಾಮೀಣ ನಾಗರಿಕರಿಗೆ ಆರೋಗ್ಯ ಮತ್ತು ಮೂಲಸೌಕರ್ಯ ಸೇವೆಗಳಿಗೆ ಉತ್ತಮ ಪ್ರವೇಶವಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. CSC ಯ ಟೆಲಿ-ಹೆಲ್ತ್ ಸಲಹಾ ಸಂಸ್ಥೆಯು ತಳಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ವಾಟ್ಸಪ್ ನಲ್ಲಿನ ಅದರ ವಿಸ್ತರಣೆಯು ನಮ್ಮ ದೇಶದ ದೂರದ ಜನಸಂಖ್ಯೆಗೆ ಪ್ರಾಥಮಿಕ ಆರೋಗ್ಯ ಸೇವೆಗಳು ಲಭ್ಯವಾಗುವಂತೆ ನೋಡಿಕೊಳ್ಳುವಲ್ಲಿ ವಿಶ್ವಾಸ ಹೊಂದಿದ್ದೇವೆ. ಈ CSC ಆರೋಗ್ಯ ಸೇವಾ ಸಹಾಯವಾಣಿಯನ್ನು Infobip ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದೆ” ಎಂದಿದ್ದಾರೆ.

Leave A Reply

Your email address will not be published.