ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ನುಗ್ಗಿದ ಚಿರತೆ | ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಂಟ್ವಾಳ : ನಾಯಿಯ ಬೇಟೆಗಾಗಿ ಚಿರತೆಯೊಂದು ಮನೆಯೊಂದರ ಆವರಣಕ್ಕೆ ಬರುತ್ತಿರುವ ದೃಶ್ಯ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳಿಸುವಂತಿದೆ.

ಬಂಟ್ವಾಳದ ನರಿಕೊಂಬು ಗ್ರಾಮದ ನಿರ್ಮಲ್‌ನ ನಿವಾಸಿ
ಜಯಂತ್ ಅವರ ಮನೆಯ ಅಂಗಳಕ್ಕೆ ರಾತ್ರಿ ವೇಳೆ
ಚಿರತೆಯೊಂದು ಬಂದು ಹೋಗುವ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದ್ದು,ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಗ್ರಾಮ ಪಂಚಾಯತ್ ಗೆ ವಿಷಯ ತಿಳಿಸಲಾಗಿದ್ದು,ಗ್ರಾಮಸ್ಥರು ರಾತ್ರಿ ಸಮಯದಲ್ಲಿ ಹೊರಗೆ ಬರಲು ಹೆದರುವ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.