ಧಾವಿಸುತ್ತಿರುವ ರೈಲಿಗೆ ಬೆನ್ನುಹಾಕಿ ನಿಂತು ವಿಡಿಯೋ ತೆಗೆಯುವ ಹುಚ್ಚು | ರೈಲಿಗೆ ಸಿಲುಕಿ ಯುವಕ ಸಾವು, ವೈರಲ್ ಆಗಿದೆ ಆ ಭಯಾನಕ ವೀಡಿಯೋ !!
ಹೋಶಂಗಾಬಾದ್: ಸೆಲ್ಫಿ ಮತ್ತು ಫೋಟೋ ತೆಗೆಯುವ ಹವ್ಯಾಸ ಯುವಕನೊಬ್ಬನನ್ನು ಬಲಿತೆಗೆದುಕೊಂಡಿದೆ. ಅಪಾಯಕಾರಿ ಸಂದರ್ಭಗಳಲ್ಲಿ ಸೆಲ್ಫಿ ತೆಗೆದುಕೊಂಡು ಹಲವು ಜೀವಗಳು ಬಲಿಯಾಗುತ್ತಿರುವ ಸಂಗತಿ ದಿನ ನಿತ್ಯ ನಡೆಯುತ್ತಿದ್ದರೂ ಮತ್ತೆ ಜನ ಬುದ್ದಿ ಕಲಿಯುತ್ತಿಲ್ಲ.ಮಧ್ಯಪ್ರದೇಶದ ಹೋಶಂಗಾಬಾದ್ ನಲ್ಲಿ ಭಾನುವಾರ ಭೀಕರ ಅಪಘಾತ ನಡೆದಿದ್ದು ಇಟಾರ್ಸಿಯ ಯುವಕನೊಬ್ಬ ರೈಲ್ವೆ ಹಳಿ ಬಳಿ ವಿಡಿಯೋ ಮಾಡುತ್ತಿರುವಾಗ ರೈಲು ಹೊಡೆದ ಹೊಡೆತಕ್ಕೆ ಆತ ಕೊಚ್ಚಿ ಹೋಗಿದ್ದಾನೆ. ಇದೀಗ ಯುವಕನಿಗೆ ರೈಲು ಡಿಕ್ಕಿ ಹೊಡೆಯುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಸಂಜು ಚೌರೆ ಎಂಬ 22 …