ಮದುವೆ ಆದ ಮೇಲೆ ಒಂದು ಬಾರಿಯೂ ಮೇಕಪ್ ಇಲ್ಲದೆ ಪತ್ನಿಯನ್ನು ನೋಡದ ಗಂಡನಿಗೆ ಮೊದಲ ಬಾರಿಗೆ ಸುರಸುಂದರಿಯ ನಿಜರೂಪ ದರ್ಶನ!! | ಮೇಕಪ್ ಇಲ್ಲದ ಪತ್ನಿಯನ್ನು ಕಂಡು ದಿಗ್ಭ್ರಾಂತಗೊಂಡ ಗಂಡನಿಂದ ಡೈರೆಕ್ಟ್ ವಿಚ್ಛೇದನೆ

ಈಗಿನ ಕಾಲದ ಹೆಣ್ಣುಮಕ್ಕಳು ಮನೆಯಿಂದ ಆಚೆ ಬರಬೇಕು ಅಂದರೆ ಮೇಕಪ್​ ಇರಲೇ ಬೇಕು. ಹೊಟ್ಟೆಗೆ ಹಿಟ್ಟಿಲ್ಲ ಅಂದರೂ, ಜುಟ್ಟಿಗೆ ಮಲ್ಲಿಗೆ ಹೂ ಅನ್ನುವುದು ಹಳೆ ಗಾದೆ. ಹೊಟ್ಟೆಗೆ ಹಿಟ್ಟಿಲ್ಲ ಅಂದರೂ ಮುಖಕ್ಕೆ ಮೇಕಪ್​ ಇರಲೇ ಬೇಕು ಎಂಬುದು ಮಾಡರ್ನ್ ಗಾದೆ.

ಮೇಕಪ್​ ಹಾಕದಿದ್ದರೆ ಹೊರಗೆ ಬರೋದಕ್ಕೂ ಹಿಂದೆ ಮುಂದು ನೋಡುತ್ತಾರೆ. ಆ ಮೇಕಪ್​ ಹಾಕಲು 30 ರಿಂದ 40 ನಿಮಿಷ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲಿ ನವ ದಂಪತಿಯ ಬದುಕಲ್ಲಿ ಮೇಕಪ್ ವಿಲನ್ ಆಗಿಬಿಟ್ಟಿದೆ. ಅದು ಹೇಗೆ ಅಂತಿರಾ? ಮುಂದೆ ನೋಡಿ.

ಹೌದು, ಮೊದಲ ಬಾರಿಗೆ ಹೆಂಡತಿ ಗಂಡನ ಮುಂದೆ ಮೇಕಪ್​ ಇಲ್ಲದೇ ಬಂದು ನಿಂತಿದ್ದಕ್ಕೆ, ಆಕೆಯ ನಿಜ ರೂಪವನ್ನು ಕಂಡು ಗಂಡ ಕಕ್ಕಾಬಿಕ್ಕಿಯಾಗಿದ್ದಾನೆ. ಆಕೆಯ ನಿಜರೂಪವನ್ನು ಕಂಡು ಡಿವೋರ್ಸ್ ನೀಡಿದ್ದಾನೆ ಅಂದರೆ ನಂಬಲು ಕೊಂಚ ಕಷ್ಟ. ಆದರೂ ಇದು ನಡೆದಿರುವುದು ಸತ್ಯ. ಮದುವೆಯಾಗಿದ್ದಾಗಿನಿಂದಲೂ ಹೆಂಡತಿ ಮೇಕಪ್​ ಇಲ್ಲದೇ ಗಂಡನಿಗೆ ದರ್ಶನ ನೀಡುತ್ತಿರಲಿಲ್ಲ. ಅದ್ಯಾಕೋ ಒಂದು ದಿನ ಮೇಕಪ್​ ಮಾಡಿಕೊಳ್ಳದೇ ಗಂಡನ ಎದುರು ಬಂದು ನಿಂತಿದ್ದಾಳೆ. ತನ್ನ ಪತ್ನಿಯ ನಿಜ ರೂಪ ಕಂಡು ಕೋಪಗೊಂಡು ಪತಿರಾಯನೊಬ್ಬ ಡಿವೋರ್ಸ್​ ನೀಡಿದ್ದಾನೆ.

ಮೇಕಪ್​ ಇಲ್ಲದ ಹೆಂಡತಿ ನೋಡಿ ಗಂಡನಿಗೆ ಆಘಾತ!

ಕೆಲವರನ್ನು ಮೇಕಪ್​ ಇಲ್ಲದೇ ಗುರುತು ಹಿಡಿಯುವುದು ಕಷ್ಟ. ಅದೆಷ್ಟೋ ಬಾರಿ ಸಿನಿಮಾ ನಟ, ನಟಿಯರು ಮೇಕಪ್​ ಇಲ್ಲದೇ ನಮ್ಮ ಪಕ್ಕದಲ್ಲಿ ಓಡಾಡಿದ್ದಾರೂ ನಮಗೆ ತಿಳಿದಿರುವುದಿಲ್ಲ. ಯಾಕೆಂದರೆ ನಾವು ಅವರನ್ನು ಸದಾ ಮೇಕಪ್​ನಲ್ಲೇ ನೋಡಿರುತ್ತೇವೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮೇಕಪ್​ ಇಲ್ಲದೇ ನೋಡಿ ಆಘಾತಗೊಂಡಿದ್ದಾನೆ. ಮದುವೆಯಾದ ಒಂದೇ ತಿಂಗಳಿಗೆ ಆಕೆಗೆ ವಿಚ್ಛೇದನೆ ನೀಡಿದ್ದಾನೆ. ಈ ರೀತಿಯ ವಿಚಿತ್ರ ಘಟನೆ ಯುಎಇಯಲ್ಲಿ ನಡೆದಿದ್ದು, 34 ವರ್ಷದ ವ್ಯಕ್ತಿಯೊಬ್ಬ 1 ತಿಂಗಳ ಹಿಂದೆ 28 ವರ್ಷದ ಮಹಿಳೆಯನ್ನು ಮದುವೆಯಾಗಿದ್ದ. ಮದುವೆಗೂ ಮೊದಲು ವಿಪರೀತ ಮೇಕಪ್ ಮಾಡಿಕೊಳ್ಳುತ್ತಿದ್ದ ಆ ಮಹಿಳೆಯ ಸೌಂದರ್ಯವನ್ನು ನೋಡಿ ಇಷ್ಟಪಟ್ಟಿದ್ದ ಆಕೆಯ ಗಂಡನಿಗೆ ಆಕೆಯನ್ನು ಮೇಕಪ್ ಇಲ್ಲದೆ ನೋಡಿದಾಗ ಆಘಾತವಾಗಿದೆ.

ಮದುವೆ ಆದ ಬಳಿಕ ಪತ್ನಿಯನ್ನು ಆತ ಇದುವರೆಗೂ ಮೇಕಪ್​ ಇಲ್ಲದೇ ನೋಡಿರಲಿಲ್ಲ. ನನ್ನ ಹೆಂಡತಿಯನ್ನು ಮೇಕಪ್ ಇಲ್ಲದೆ ನೋಡಿ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ವ್ಯಕ್ತಿ ಹೇಳಿದ್ದಾನೆ ಎಂದು ಸ್ಥಳೀಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಹೇಳಿದೆ. ನಾನು ಮದುವೆಗೂ ಮೊದಲು ಸಮಯ ಕಳೆದಿದ್ದ, ಇಷ್ಟಪಟ್ಟಿದ್ದ ಮಹಿಳೆ ಇವಳಲ್ಲ ಎಂದು ಆತ ಬೇಸರಗೊಂಡು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ತನ್ನ ಗಂಡನ ಈ ನಿರ್ಧಾರದಿಂದ ಆ ಮಹಿಳೆ ಮಾನಸಿಕ ಖಿನ್ನತೆಗೊಳಗಾಗಿದ್ದು, ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ವಿಚ್ಛೇದನ ಬೇಕೆಂದು ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಆ ವ್ಯಕ್ತಿ, ಮದುವೆಗೂ ಮುನ್ನ ವಿಪರೀತ ಮೇಕಪ್ ಮಾಡಿಕೊಳ್ಳುತ್ತಿದ್ದ ನನ್ನ ಹೆಂಡತಿಯಿಂದ ನಾನು ಮೋಸ ಹೋಗಿದ್ದೇನೆ. ಅವಳು ಮೇಕಪ್ ಇಲ್ಲದೆ ಕೆಟ್ಟದಾಗಿ ಕಾಣುತ್ತಾಳೆ ಎಂದು ಪತಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮೇಕಪ್ ಇಲ್ಲದೆ ನನ್ನ ಹೆಂಡತಿಯನ್ನು ನೋಡಲು ಆಗುತ್ತಿಲ್ಲ. ಅವಳೊಂದಿಗೆ ಸಂಸಾರ ನಡೆಸಲು ನನಗೆ ಇಷ್ಟವಿಲ್ಲ ಎಂದು ಆತ ಹೇಳಿದ್ದಾನೆ. ದಯವಿಟ್ಟು ನನಗೆ ನ್ಯಾಯ ಒದಗಿಸಿಕೊಡಿ ಎಂದು ಜಡ್ಜ್​ ಮುಂದೆ ಕೇಳಿಕೊಂಡಿದ್ದಾನೆ. ಈತನ ಮಾತು ಕೇಳಿ ಜಡ್ಜ್​ ಕಕ್ಕಾಬಿಕ್ಕಿಯಾಗಿದ್ದರಂತೆ.

ಪ್ರಪಂಚದಲ್ಲಿ ಇಂತಹ ಘಟನೆಗಳು ಸಂಭವಿಸುತ್ತಲೇ ಇರುತ್ತದೆ. ಈ ಕುರಿತಂತೆ ಹಲವು ಮೇಮ್ಸ್ ಗಳು ಹರಿದಾಡಿದ್ದು, ಹುಡುಗಿ ನೋಡಲು ನೀನು ಆಕೆ ಬೆಳಗ್ಗೆ ಏಳುವ ಮುಂಚೆ ಹೋಗಿ ನೋಡಬೇಕಿತ್ತು ಎಂದು ಹಲವರು ಫ್ರೀ ಟಿಪ್ಸ್ ಆತನಿಗೆ ನೀಡಿದ್ದಾರೆ. ಅದೇನೆ ಆಗಲಿ ಆಕೆಯ ಮೇಕಪ್ ಚಟ ಇದೀಗ ಆಕೆಯ ಜೀವನಕ್ಕೆ ಮುಳ್ಳಾಗಿದ್ದಂತೂ ಸತ್ಯ.

Leave A Reply

Your email address will not be published.