ಇದುವರೆಗೆ ಆಲೂಗೆಡ್ಡೆ, ಮೆಣಸು, ಈರುಳ್ಳಿ ಪಕೋಡ ಸವಿದಿರಬಹುದು.. ಆದರೆ ಎಂದಾದರೂ ಓರಿಯೋ ಬಿಸ್ಕೆಟ್ ಪಕೋಡ ಸವಿದಿದ್ದೀರಾ?? | ಇದೀಗ ಮಾರುಕಟ್ಟೆಯಲ್ಲಿ ಫುಲ್ ಫೇಮಸ್ ಆಗಿದೆ ಓರಿಯೋ ಬಿಸ್ಕೆಟ್ ಪಕೋಡ!!

ಕೆಲವರು ಹೊಸ ಹೊಸ ರೆಸಿಪಿಗಳ ರುಚಿ ಸವಿಯಲು ಕಾತುರಾಗಿರುತ್ತಾರೆ. ಅದರಲ್ಲೂ ಫುಟ್ ಪಾತ್ ನಲ್ಲಿ ಮಾಡುವ ಹೊಸ ರೆಸಿಪಿಗಳನ್ನು ಜನರು ಆದಷ್ಟು ಬೇಗ ನೆಚ್ಚಿಕೊಳ್ಳುತ್ತಾರೆ. ಕೆಲವೊಮ್ಮೆ ವಿಲಕ್ಷಣ ಆಹಾರ ಸಂಯೋಜನೆಗಳು ಹೆಚ್ಚು ಇಷ್ಟವಾಗುವುದಿಲ್ಲ. ಕೆಲವರು ಈ ವಿಲಕ್ಷಣ ಆಹಾರ ಸಂಯೋಜನೆ ನೋಡಿ ಮೂಗು ಮುರಿಯುವವರೂ ಇದ್ದಾರೆ.

ಇಲ್ಲಿಯವರೆಗೆ ಆಲೂಗಡ್ಡೆ, ಮೆಣಸು, ಈರುಳ್ಳಿಯಲ್ಲಿ ಪಕೋಡಾ ತಿಂದಿರಬಹುದು. ಆದರೆ ಎಂದಾದರೂ ಓರಿಯೊ ಬಿಸ್ಕೆಟ್​ನಿಂದ ತಯಾರಿಸಿದ ಪಕೋಡಾ ಸವಿದಿದ್ದೀರಾ? ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಸುದ್ದಿಯಲ್ಲಿದೆ ಓರಿಯೊ ಪಕೋಡ. ವಿಡಿಯೊದಲ್ಲಿ ಗಮನಿಸುವಂತೆ ವ್ಯಾಪಾರಿಯು ಓರಿಯೊ ಪ್ಯಾಕೇಟ್ ತೆಗೆದು ಬಿಸ್ಕೆಟ್​ಗಳನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ ಬಂಡಿಗೆ ಬಿಟ್ಟಿದ್ದಾರೆ. ಕಾದ ಎಣ್ಣೆಯಲ್ಲಿ ಕರಿದ ನಂತರ ಬಂಡಿಯಿಂದ ಓರಿಯೋ ಪಕೋಡಾವನ್ನು ತೆಗೆದಿದ್ದಾರೆ.
ಈ ವಿಡಿಯೋವನ್ನು ಫೂಡೀ ಇನ್ಕಾರ್ನೇಟ್ ಎಂಬ ಚಾನೆಲ್ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿಲಾಗಿದ್ದು, ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ನಮಗೆ ಇದು ವಿಚಿತ್ರ ಅನಿಸಿದರೂ, ಈ ತಿಂಡಿ ಇತ್ತೀಚಿನದಲ್ಲ, ಕಳೆದ 15-20 ವರ್ಷಗಳಿಂದ ವಿಶೇಷವಾಗಿ ಯುವ ಜನಸಂಖ್ಯೆಯಲ್ಲಿ ಪ್ರಸಿದ್ಧವಾಗಿದೆ ಎಂದು ಬ್ಲಾಗರ್ ಅಮರ್ ಸಿರೋಹಿ ಹೇಳುತ್ತಾರೆ.

ಈ ತಿಂಡಿಯನ್ನು ತಯಾರಿಸಲು ಬೀದಿ ಬದಿ ಸ್ಟಾಲ್ ನ ವ್ಯಾಪಾರಿ ಕಡಲೆ ಹಿಟ್ಟಿಗೆ ಉಪ್ಪು, ನೀರು ಸೇರಿಸಿ ದಪ್ಪವಾದ ಹಿಟ್ಟನ್ನು ತಯಾರಿಸಿದ್ದಾರೆ. ಅವರು ಓರಿಯೊ ಬಿಸ್ಕೆಟ್ ಪ್ಯಾಕೆಟ್ ಅನ್ನು ಹಾಕಿ, ಓರಿಯೋ ಬಿಸ್ಕತ್ತುಗಳಿಗೆ ಕಡಲೆ ಹಿಟ್ಟನ್ನು ಲೇಪಿಸುತ್ತಾರೆ. ನಂತರ ಅವುಗಳನ್ನು ಬಿಸಿ ಎಣ್ಣೆಯಲ್ಲಿ ಗೋಲ್ಡನ್-ಬ್ರೌನ್ ಆಗುವ ತನಕ ಹುರಿಯುತ್ತಾರೆ. ಇಷ್ಟೇ ಒರಿಯೋ ಬಿಸ್ಕೆಟ್ ಪಕೋಡ ಮಾಡುವ ವಿಧಾನ. ತುಂಬಾ ಸುಲಭವಾಗಿ ಕಡಿಮೆ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಸ್ಪೆಷಲ್ ಪಕೋಡ ತಯಾರಿಸಿದ್ದಾರೆ.

ವ್ಯಾಪಾರಿಯು ಓರಿಯೊ ಪಕೋಡಾವನ್ನು ಕರಿದ ಹಸಿರು ಮೆಣಸಿನಕಾಯಿಗಳು ಮತ್ತು ವಿಶೇಷ ಖರ್ಜೂರದ ಚಟ್ನಿಯೊಂದಿಗೆ ತಿನ್ನಲು ನೀಡುತ್ತಾರೆ. ಇದರ ಬೆಲೆ 100 ಗ್ರಾಂಗೆ 20 ರೂ. ಅಂತೆ. ಈ ರೆಸಿಪಿಯ ಬಗ್ಗೆ ಆಸಕ್ತಿ ಇದ್ದವರು ಇದನ್ನೊಮ್ಮೆ ಟ್ರೈ ಮಾಡಿ, ಟೇಸ್ಟ್ ಮಾಡಿ.

Leave A Reply

Your email address will not be published.