ಪುನೀತ್ ರಾಜ್ ಕುಮಾರ್ ಸಾವಿಗೆ ಕಾರಣ | ಆರೋಗ್ಯದ ದೃಷ್ಟಿಯಿಂದ ವರ್ಕೌಟ್ ‘ವರ್ಕ್ ಔಟ್ ‘ ಆಗಲ್ಲ ಅಂತಿದೆ ವೈದ್ಯ ಜಗತ್ತು !

ಬೆಂಗಳೂರು: ಸದಾ ಫಿಟ್ ಆಗಿದ್ದು, ಆರೋಗ್ಯವಂತರಾಗಿದ್ದ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಇದ್ದಕ್ಕಿದ್ದಂತೆಯೇ ಹೃದಯಾಘಾತವಾಗಿದ್ದು ಹೇಗೆ ಎಂದು ಎಲ್ಲರೂ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಪರ್ಫೆಕ್ಟ್ ಎನ್ನಿಸುವ ಆರೋಗ್ಯ ಹೊಂದಿ, ಚೆನ್ನಾಗಿಯೇ ಇದ್ದ ಪುನೀತ್ ಒಂದಿನಿತು ಸೂಚನೆ ಕೂಡ ಕೊಡದೇ ಇದ್ದಕ್ಕಿದ್ದ ಹಾಗೆ ಪ್ರಾಣ ಕಳೆದುಕೊಳ್ಳುತ್ತಾರೆ ಎಂದರೆ ಯಾರಿಗೂ ಏನೂ ಹೇಳಲು ಆಗುತ್ತಿಲ್ಲ.

ಇದೀಗ ಪುನೀತ್ ಅವರು ಮೃತಪಟ್ಟಿರುವ ರೀತಿ ನೋಡಿದರೆ ಇದೀಗ ಹಿಂದಿನ ಕೆಲವು ಘಟನೆಗಳ ಜತೆ ಪುನೀತ್ ಅವರ ಸಾವನ್ನು ಕಂಪೇರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಲವರು ಶೇರ್ ಮಾಡುತ್ತಿದ್ದಾರೆ. ಅದೇನೆಂದರೆ, ಜಿಮ್‌ನಲ್ಲಿ ಅತಿಯಾಗಿ ವರ್ಕ್‌ಔಟ್ ಮಾಡುತ್ತಿದುದೇ ಅಪ್ಪು ಅವರ ಜೀವಕ್ಕೆ ಮುಳು ಆಗಿದೆ ಎನ್ನುವ ಮಾತು ಈಗ ಸಾರ್ವತ್ರಿಕವಾಗಿ ಕೇಳಿಬರುತ್ತಿದೆ.

ಕಳೆದ ವರ್ಷ ಹಿಂದಿಯ ಜನಪ್ರಿಯ ನಟ, ಬಾಲಿಕಾವಧು ಧಾರವಾಹಿಯ ಮುಖ್ಯ ಪಾತ್ರಧಾರಿ ಸಿದ್ದಾರ್ಥ್ ಶುಕ್ಲ ತೀರಿಕೊಂಡಿದ್ದರು. ಕೇವಲ 40 ವರ್ಷ ವಯಸ್ಸಿನ ಅವರು ವರ್ಕೌಟ್ ಮಾಡುತ್ತಿರುವಾಗ ಎದೆ ಮೇಲೆ ಕಾಣಿಸಿಕೊಂಡು ಆಸ್ಪತ್ರೆ ದಾರಿಯ ಮಧ್ಯೆಯಲ್ಲಿ ವಿಧಿವಶರಾಗಿದ್ದರು. ಇದೀಗ ಪುನೀತ್ ಅವರಂತೆ ಸಿದ್ಧಾರ್ಥ್ ಶುಕ್ಲಾ ಕೂಡ ತೀವ್ರವಾದ ವರ್ಕೌಟ್ ಮಾಡುತ್ತಿದ್ದರು. ಹೆಚ್ಚಿನ ಸಮಯವನ್ನು ಜಿಮ್ಮಿನಲ್ಲಿ ಕಳೆಯುತ್ತಿದ್ದರು. ಕಡಿಮೆ ಗಂಟೆಗಳ ಕಾಲ ನಿದ್ರೆ ಮಾಡುವ ಅಭ್ಯಾಸವನ್ನು ಇಟ್ಟುಕೊಂಡಿದ್ದರು ಶುಕ್ಲ. ಶುಕ್ಲಾ ಅವರ ದಿನಚರಿಯನ್ನು ಗಮನಿಸಿದ ವೈದ್ಯರುಗಳು ಮತ್ತು ಇತರ ಆರೋಗ್ಯ ಪಂಡಿತರುಗಳ ಹೇಳಿಕೆಯಿಂದ ಕಡಿಮೆ ನಿದ್ರೆ ಮತ್ತು ಅತಿಯಾದ ಜಿಮ್ಮಿನಲ್ಲಿ ಉಂಟಾಗುವ ಆಯಾಸ ಹೃದಯಾಘಾತಕ್ಕೆ ದಾರಿಮಾಡಿಕೊಟ್ಟಿದೆ ಎಂಬುದಾಗಿತ್ತು. ಈಗ ಪುನೀತ್ ಅವರ ಜಿಮ್ಮು ಫ್ರೀಕ್ ಮನಸ್ಸತ್ವ ಪುನೀತ್ ಅವರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ಫಿಟ್ ಆಗಿರಲು ಪುನೀತ್ ವಿಪರೀತ ವರ್ಕೌಟ್ ಮಾಡುತ್ತಿದ್ದರು. ಕನ್ನಡದ ಇತರ ನಟರಿಗೆ ಹೋಲಿಸಿದರೆ ಪುನೀತ್ ಫಿಟ್ ಮತ್ತು ಫ್ಲೆಕ್ಸಿಬಲ್ ಇದ್ದರು. ಆರೋಗ್ಯ ಮತ್ತು ಫಿಟ್ನೆಸ್ ಬೇಕು ಎನ್ನುವುದೇ ಅವರ ಜೀವಕ್ಕೆ ಮುಳುವಾದದ್ದು ವಿಷಾದನೀಯ.

ಮೊನ್ನೆ ಮೊನ್ನೆ, ಎರಡು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಯುವಕನೊಬ್ಬ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿದ್ದ ವೇಳೆಯೇ ಕುಸಿದುಬಿದ್ದಾಗ ಅದರ ವಿಡಿಯೋ ಭಾರಿ ವೈರಲ್ ಆಗಿತ್ತು. ಆಗ ಹಲವಾರು ತಜ್ಞರು ಈ ಬಗ್ಗೆ ಜನರಿಗೆ ಅದರಲ್ಲಿಯೂ ಹೆಚ್ಚಾಗಿ ಯುವಕರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದರು. ಜಿಮ್, ವರ್ಕ್‌ಔಟ್ ಎಲ್ಲವೂ ಒಳ್ಳೆಯದೇ. ಆದರೆ ಸಿಕ್ಸ್‌ಪ್ಯಾಕ್ ಮತ್ತು ಅತಿಯಾದ ಫಿಟ್‌ನೆಸ್ ಮಾಡಲು ಹೋದರೆ ಅದು ಜೀವಕ್ಕೆ ಅಪಾಯ ತಂದೊಡ್ಡಬಹುದು, ಹಾರ್ಟ್ ಎಟ್ಯಾಕ್‌ಗೆ ಇದು ಕಾರಣವಾಗುತ್ತದೆ ಎಂದು ಹಲವರು
ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪುನೀತ್ ರಾಜ್‌ಕುಮಾರ್ ಅವರು ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುತ್ತಿದ್ದ ವೇಳೆಯೇ ಈ ರೀತಿ ಹೃದಯಾಘಾತ ಆಗಿರುವುದಕ್ಕೆ ತಾಳೆ ಹಾಕಿದಾಗ ಇದೇ ಅವರ ಪ್ರಾಣವನ್ನು ಕಸಿದುಕೊಂಡುಬಿಟ್ಟಿತಾ ಎಂಬ ಮಾತುಗಳು ಕೇಳಿಬರುತ್ತಿವೆ. ಆರೋಗ್ಯದ ದೃಷ್ಟಿಯಿಂದ ವರ್ಕೌಟ್ ‘ವರ್ಕ್ ಔಟ್’ ಆಗಲ್ಲ ಎಂಬ ಮಾತು ನಿಜವಾಗುವ೦ತಿದೆ.

‘2 ಗಂಟೆಗಳ ಕಾಲ ಜಿಮ್ ಮಾಡಿದ್ದಾರೆ. ಕುಟುಂಬದ ವೈದ್ಯರ ಬಳಿ ಪ್ರಾಥಮಿಕ ಚಿಕಿತ್ಸೆ, ಇಸಿಜಿ ವೇಳೆ ಹೃದಯಾಘಾತ ಆಗಿರುವುದು ಗಮನಕ್ಕೆ ಬಂದಿದೆ. ವಿಕ್ರಮ್ ಆಸ್ಪತ್ರೆಗೆ ಬರುವ ಮೊದಲೇ ಮಾರ್ಗಮಧ್ಯೆಯೇ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಮೂರು ಬಾರಿ ಬದುಕುಳಿಸುವ ಚಿಕಿತ್ಸಾ ಪ್ರಯತ್ನಗಳನ್ನು ನಡೆಸಲಾಯಿತು. ಆದರೂ ಆಗಲಿಲ್ಲ ಎಂದು ಪುನೀತ್ ಅವರಿಗೆ ಚಿಕಿತ್ಸೆ ನೀಡಿದ ವಿಕ್ರಮ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ರಂಗನಾಥ್ ಹೇಳಿದ್ದಾರೆ. ಈ ಮಾತು ಕೂಡ ವರ್ಕ್‌ಔಟ್‌ಗೂ ಪುನೀತ್ ಅವರಿಗೆ ಹೃದಯಾಘಾತ ಆಗಿರುವುದಕ್ಕೂ ಸಂಬಂಧ ಕಲ್ಪಿಸುವಂತಿದೆ.

ಏಕೆಂದರೆ 46 ವರ್ಷದ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಬಹುಪಾಲು ವೇಳೆಯನ್ನು ಜಿಮ್‌ನಲ್ಲಿ ಕಳೆಯುತ್ತಿದ್ದರು. ಎಂದರೆ ಅವರಿಗೆ ಇಷ್ಟವಾಗಿತ್ತು. ಕೆಲವೊಂದು ಸಲ ಕುಟುಂಬಸ್ಥರು ಕೂಡ ಇಷ್ಟೆಲ್ಲಾ ವರ್ಕ್‌ಔಟ್ ಮಾಡಬೇಡ ಎಂದೂ ಸಲಹೆ ಕೊಟ್ಟಿದ್ದರಂತೆ. ಬೆಂಗಳೂರಿನ ಸದಾಶಿವನಗರದಲ್ಲಿ ಇರುವ ಮನೆಯಲ್ಲಿಯೂ ಹೆಚ್ಚಿನ ವೇಳೆ ವರ್ಕ್‌ಔಟ್‌ನಲ್ಲಿಯೇ ಕಾಲ ಕಳೆಯುತ್ತಿದ್ದ ಅಪ್ಪು, ನಂತರ ಜಿಮ್‌ಗೂ ಹೋಗಿ ಬರುತ್ತಿದ್ದರು ಎನ್ನಲಾಗಿದೆ.

ಅನೇಕ ನಟರು ತಮ್ಮ ದೇಹ ಸೌಂದರ್ಯಕ್ಕಾಗಿ ಈ ರೀತಿ ಮಾಡುವುದು ಸಾಮಾನ್ಯವಾದರೂ ಅತಿಯಾದ ವರ್ಕ್‌ಔಟ್‌ನಿಂದ ಹೃದಯಕ್ಕೆ ಹಾನಿಯಾಗುತ್ತದೆ, ಮಾತ್ರವಲ್ಲದೇ ದೇಹದ ಫಿಟ್‌ನೆಸ್‌ಗೆ ಜಿಮ್ ಕೇಂದ್ರಗಳಲ್ಲಿ ನೀಡುವ ಪೇಯ ಕೂಡ ಕೆಲವರ ದೇಹಕ್ಕೆ ಅಪಾಯ ತಂದೊಡ್ಡಬಹುದು ಎಂದು ತಜ್ಞರು ಹೇಳುತ್ತಾರೆ. ಇವೆಲ್ಲವನ್ನೂ ನೋಡಿದಾಗ ಆರೋಗ್ಯದಿಂದ ನಗುನಗುತ್ತಾ ಸದಾ ಚಟುವಟಿಕೆಯಿಂದ ಇದ್ದ ಅಪ್ಪು ಹೀಗೆ ಏಕಾಏಕಿ ಅಗಲಿರುವುದಕ್ಕೂ ಅವರ ಅತಿಯಾದ ವರ್ಕ್‌ಔಟ್ ಪ್ರೀತಿಯೇ ಕಾರಣವಾಗಿರಬಹುದು ಎಂದು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.

ದೇಹಕ್ಕೆ ಬೇಕಾದದ್ದು ವ್ಯಾಯಾಮ. ದಂಡನೆ ಅಲ್ಲ. ವ್ಯಾಯಾಮವು ದೇಹ ವಿವಿಧ ಅಂಗಗಳಿಗೆ ಚಟುವಟಿಕೆಯನ್ನು ನೀಡಿದರೆ, ಅದೇ ವ್ಯಾಯಾಮ ಅತಿಯಾದರೆ ದೇಹಕ್ಕೆ ಬರ್ಡನ್ ಅನ್ನಿಸಲು ಶುರುವಾಗುತ್ತದೆ. ಹಾಗೆ ಅತೀವ ಒತ್ತಡ ಬಿದ್ದ ಸಂದರ್ಭದಲ್ಲಿ ಅದು ಹೃದಯಾಘಾತಕ್ಕೆ ಕಾರಣವಾಗಬಹುದು ಎನ್ನುತ್ತಿದೆ ವೈದ್ಯ ಜಗತ್ತು. ಇದರ ಜೊತೆಗೆ ಆಹಾರ ಪದ್ಧತಿ ಅನುವಂಶಿಕತೆ ಮತ್ತು ನಿದ್ರೆ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

Leave A Reply

Your email address will not be published.