Number Plate: ಇನ್ನೂ HSRP ನಂಬರ್ ಪ್ಲೇಟ್ ಅಳವಡಿಸಿಲ್ವಾ? ಡೆಡ್ ಲೈನ್ ನೀಡುತ್ತಾ ಸರ್ಕಾರ !

Number Plate: ಪ್ರಸ್ತುತ ಕರ್ನಾಟಕದಲ್ಲಿ ವಾಹನಗಳಿಗೆ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ ಮಾಡಲಾಗಿದ್ದು, ಈಗಾಗಲೇ ನಂಬರ್ ಪ್ಲೇಟ್ ಅಳವಡಿ ಗಡುವನ್ನು ವಿಸ್ತರಿಸಿದ್ದು ಇದೀಗ ಮತ್ತೆ ಮೇ.31 ಅಂತಿಮ ಗಡುವು ನೀಡಿದೆ.

ಇದನ್ನೂ ಓದಿ: Belagavi: ನನ್ನ ಸಿಡಿ ಕೇಸ್‌ನಲ್ಲಿಯೂ ಡಿಕೆಶಿ ಆಡಿಯೋ ಇದೆ; ಹಣದಲ್ಲಿ ಈ ಮಹಾನ್‌ ನಾಯಕ ಪ್ರಭಾವಿ ಇದ್ದಾರೆ-ರಮೇಶ್‌ ಜಾರಕಿಹೊಳಿ

ವಾಹನಗಳಿಗೆ ಹೈಸೆಕ್ಯೂರಿಟಿ ನಂಬರ್ ಪ್ಲೇಟ್(HSRP) ಅಳವಡಿಕೆ ಕಡ್ಡಾಯವಾಗಿದ್ದು, ಈಗಾಗಲೇ ಕರ್ನಾಟದಲ್ಲಿ ಸರಿಸುಮಾರು 55 ಲಕ್ಷ ವಾಹನಳು HSRP ನಂಬರ್ ಪ್ಲೇಟ್ ಅಳಡಿಸಿಕೊಂಡಿದೆ. ಆದರೆ ಇದಕ್ಕಿಂತ ದುಪ್ಪಟ್ಟು ವಾಹನಗಳು ಇನ್ನೂ ಅಳವಡಿಸಿಕೊಂಡಿಲ್ಲ. ಕಾರಣ ಏನೆಂದರೆ ಜನರು ಮತ್ತೊಮ್ಮೆ ಗಡುವು ವಿಸ್ತರಣೆ ನಿರೀಕ್ಷೆಯಲ್ಲಿದ್ದಾರೆ. ಆದರೆ ಮೇ.31ಕ್ಕೆ ನೀಡಿರುವ ಅಂತಿಮ ಗಡುವು ಸದ್ಯಕ್ಕೆ ವಿಸ್ತರಣೆಯಾಗುವ ಸಾಧ್ಯತೆಗಳು ಕಡಿಮೆ. ಕಾರಣ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸರ್ಕಾರ ಈ ಕುರಿತು ಗಡುವು ವಿಸ್ತರಣೆ ಮಾಡುವ ಸಾಧ್ಯತೆಗಳಿಲ್ಲ. ಆದರೆ ಜೂನ್ 4 ರಂದು ಲೋಕಭಾ ಫಲಿತಾಂಶ ಘೋಷಣೆಯಾದ ಬಳಿಕ ನೀತಿ ಸಂಹಿತೆ ತೆರವಾಗಲಿದೆ. ಬಳಿಕ ವಾಹನಗಳ HSRP ಅಂಕಿ ಸಂಖ್ಯೆ ನೋಡಿಕೊಂಡು ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ.

ಇದನ್ನೂ ಓದಿ: Prajwal Revanna: ಎಸ್‌ಐಟಿ ಸಂಪೂರ್ಣ ಡಿಸಿಎಂ ಡಿಕೆ ಶಿವಕುಮಾರ್‌ ಅಧೀನದಲ್ಲಿದೆ, ಶೀಘ್ರದಲ್ಲೇ ಮತ್ತೊಂದು ಸಿಡಿ- ಹೊಸ ಬಾಂಬ್‌ ಸಿಡಿಸಿದ ಬಸನಗೌಡ ಪಾಟೀಲ್‌ ಯತ್ನಾಳ್‌

ಇನ್ನು ಮೇ.07ರಂದು ಕರ್ನಾಟಕದಲ್ಲಿ ಇನ್ನುಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೇ.8ರಿಂದ HSRP ನಂಬರ್ ಪ್ಲೇಟ್ ಬುಕಿಂಗ್ ಹಾಗೂ ಅಳವಡಿಕೆ ಹೆಚ್ಚಾಗುವ ನಿರೀಕ್ಷೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಮತದಾನ ಕಾರಣ ಮುಂದಿಟ್ಟುಕೊಂಡು ಸರ್ಕಾರ HSRP ನಂಬರ್ ಪ್ಲೇಟ್ (Number Plate) ಅಳವಡಿಕೆ ಗಡುವನ್ನು ಕೊನೆಯ ಬಾರಿಗೆ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

ಒಂದು ವೇಳೆ ರಾಜ್ಯ ಸರ್ಕಾರ HSRP ನಂಬರ್ ಪ್ಲೇಟ್ ಅಳವಡಿಕೆ ಅವಧಿ ವಿಸ್ತರಣೆ ಮಾಡಿದರೆ ಮತ್ತೆ ಮೂರು ತಿಂಗಳು ಅಂದರೆ ಆಗಸ್ಟ್ ಅಂತ್ಯಕ್ಕೆ ಡೆಡ್‌ಲೈನ್ ನೀಡುವ ಸಾಧ್ಯತೆ ಇದೆ. ಸದ್ಯ ಚುನಾವಣೆ ಹಾಗೂ ನೀತಿ ಸಂಹಿತೆ ಕಾರಣ ಸರ್ಕಾರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ.

Leave A Reply

Your email address will not be published.