ಒಲಿಯುವಳಾ ಮಹಾಲಕ್ಷ್ಮೀ!! ವರಮಹಾಲಕ್ಷ್ಮೀ ವ್ರತದಿಂದಾಗುವ ಪ್ರಯೋಜನಗಳೇನು?ಸುಮಂಗಲೆಯರು ವ್ರತ ಕೈಗೊಳ್ಳಲು ಕಾರಣವಾದರೂ ಏನು?
ಶ್ರಾವಣ ಮಾಸದಲ್ಲಿ ಬರುವ ಅತ್ಯಂತ ಮಹತ್ವದ ಶುಕ್ರವಾರ, ಸುಮಂಗಲೆಯರಿಗೆ ಶುಭ ಶುಕ್ರವಾರ.ಕಷ್ಟ ಕೋಟಲೆಗಳು ಪರಿಹಾರವಾಗಲಿ, ತನ್ನ ಕುಟುಂಬಕ್ಕೆ ಒಳಿತಾಗಲಿ, ಆಯಸ್ಸು ಅರೋಗ್ಯ ಸಮೃದ್ಧಿಸಲೆಂದು ಮಹಾಲಕ್ಷ್ಮಿ ಯನ್ನು ವ್ರತಮಾಡಿ ಒಳಿಸಿಕೊಳ್ಳುವ ಪುಣ್ಯದ ದಿನ.ಈ ವ್ರತದ ಮಹತ್ವ, ಹಿನ್ನೆಲೆ ಪರಿಹಾರ ಇವೆಲ್ಲದರ ಬಗೆಗೊಂದು ಸವಿವರವಾದ ಮಾಹಿತಿ. ಸರ್ವೇಸಾಮಾನ್ಯವಾಗಿ ಹಬ್ಬ, ಆಚರಣೆಗಳನ್ನು ವೈಯಕ್ತಿಕವಾಗಿ ಆಚರಿಸುವಾಗ ಅದು ವ್ರತವಾಗುತ್ತದೆ. ಒಟ್ಟಿಗೆ ಒಂದು ಕಡೆ ಸೇರಿ ಆಚರಿಸುವಾಗ ಅದು ಉತ್ಸವವಾಗುತ್ತದೆ. ನಮ್ಮ ಅನೇಕ ವ್ರತಗಳು ಚಾತುರ್ಮಾಸದ ನಾಲ್ಕು ತಿಂಗಳಿನಲ್ಲಿ ಬರುತ್ತವೆ. ಅದರಲ್ಲಿಯೂ ಶ್ರಾವಣ ಮಾಸವು …