ಬೆಳ್ತಂಗಡಿ | ತಾಯಿಯನ್ನು ಅತ್ಯಾಚಾರ ನಡೆಸಿ ಗರ್ಭವತಿಯನ್ನಾಗಿಸಿ ಮಗ ಪರಾರಿ ?? | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸುಳ್ಳು ಸುದ್ದಿಯ ಬಗ್ಗೆ ಠಾಣೆ ಮೆಟ್ಟಿಲೇರಿದ ಯುವಕ

ಬೆಳ್ತಂಗಡಿ : ಲಾಯಿಲದ ಯುವಕನ ಮೇಲೆ ಯಾರೋ ಕಿಡಿಗೇಡಿಗಳು ಅಶ್ಲೀಲವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಲಾಯಿಲ ಸಮೃದ್ಧಿ ನಿವಾಸದ ಸುಶಾನ್ ಚಂದ್ರ ಇವರ ಮೇಲೆ ವಾಟ್ಸಪ್ ಹಾಗೂ ಫೇಸ್ ಬುಕ್ ನಲ್ಲಿ ಅಶ್ಲೀಲವಾಗಿ ಅಪಪ್ರಚಾರ ಮಾಡಲಾಗಿದೆ. ಈ ಬಗ್ಗೆ ಯುವಕ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ ಎಂದು ತಿಳಿದುಬಂದಿದೆ.

ಲಾಯಿಲ ಗ್ರಾಮದಲ್ಲಿ ಯುವಕನೋರ್ವ ತನ್ನ ತಾಯಿಯನ್ನು ನಿರಂತರವಾಗಿ ಅತ್ಯಾಚಾರ ಮಾಡಿ ಗರ್ಭ ಧರಿಸುವಂತೆ ಮಾಡಿ ಪರಾರಿಯಾಗಿದ್ದಾನೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ. ಈ ವಿಕೃತ ಕಾಮಿಯ ಹೆಸರು ಸುಶನ್ ಚಂದ್ರ. 5’6 ಅಡಿ ಎತ್ತರವಿದ್ದು, ಗುಂಗುರು ಕೂದಲು ಹೊಂದಿರುತ್ತಾನೆ. ಎಲ್ಲಿಯಾದರೂ ಕಂಡರೆ ದಯಮಾಡಿ ಕೆಳಗಿನ ನಂಬರಿಗೆ ಕರೆಮಾಡಬೇಕಾಗಿ ವಿನಂತಿ ಎಂದು ದೂರವಾಣಿ ಸಂಖ್ಯೆ ನೀಡುವುದರೊಂದಿಗೆ ಅಪಪ್ರಚಾರ ಮಾಡಲಾಗಿದೆ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾನೆ.

Ad Widget
Ad Widget

Ad Widget

Ad Widget

ಅಷ್ಟೇ ಅಲ್ಲದೆ ತನಗೆ ಮತ್ತು ತನ್ನ ಮನೆಯವರಿಗೆ ಬೇರೆಬೇರೆ ಫೋನ್ ನಂಬರ್ ಗಳಿಂದ ಬೆದರಿಕೆ ಕರೆ ಬಂದಿರುವುದಾಗಿಯೂ ದೂರಿನಲ್ಲಿ ತಿಳಿಸಿದ್ದಾನೆ.

ಅದಲ್ಲದೆ ಈ ಕೃತ್ಯವನ್ನು ಅನ್ಯ ಕೋಮಿನ ಯುವಕರು ನಡೆಸಿದ್ದಾಗಿ ತಿಳಿದುಬಂದಿದೆ. ಮೆಸೇಜ್ ಫಾರ್ವರ್ಡ್ ಮಾಡಿರುವ ನಂಬರ್ ನಲ್ಲಿ ಅನ್ಯಕೋಮಿನ ಯುವಕನ ಹೆಸರು ಇದೆ.

ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Leave a Reply

error: Content is protected !!
Scroll to Top
%d bloggers like this: