ಕಿಲ್ಲೆ ಮೈದಾನವನ್ನು ಕಾಂಗ್ರೆಸ್‌ನ ಶಕುಂತಳಾ ಶೆಟ್ಟಿ, ಹೇಮನಾಥ ಶೆಟ್ಟಿಯವರ ಗುಂಪಿಗೆ ತಾಂಟಲಿಕ್ಕೆ ಗುರುತು ಮಾಡಲಿ -ಎಸ್.ಡಿ.ಪಿ.ಐ

ಕಿಲ್ಲೆ ಮೈದಾನವನ್ನು ಕಾಂಗ್ರೆಸ್‌ನ ಶಕುಂತಳಾ ಶೆಟ್ಟಿ, ಹೇಮನಾಥ ಶೆಟ್ಟಿಯವರ ಗುಂಪಿಗೆ ತಾಂಟಲಿಕ್ಕೆ ಗುರುತು ಮಾಡಲಿ ಎಂದು ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಕೆ.ಎ ಸಿದ್ದೀಕ್ ಅವರು ಹೇಳಿದ್ದಾರೆ.

ಕಿಲ್ಲೆ ಮೈದಾನವನ್ನು ಬಿಜೆಪಿ ಮತ್ತು ಎಸ್‌ಡಿಪಿಐಗೆ ತಾಂಟಲು ಬಿಡಿ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯವರು ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಗೆ ಈ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

ಅವರು ಆ.19ರಂದು ಪುತ್ತೂರು ಎಸ್‌ಡಿಪಿಐ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಎಸ್‌ಡಿಪಿಐ ಈ ಹಿಂದೆಯೂ ಕೂಡಾ ಬಿಜೆಪಿ ಸಂಘ ಪರಿವಾರದೊಂದಿಗೆ ತಾಂಟಿದೆ. ಇವತ್ತು ಕೂಡಾ ತಾಂಟುತ್ತಾ ಇದ್ದೇವೆ. ಇನ್ನು ಮುಂದೆಯೂ ತಾಂಟಲಿದ್ದೇವೆ. ಕಾನೂನು ರೀತಿಯಲ್ಲಿ ಎಲ್ಲವನ್ನು ಎದುರಿಸಲಿದ್ದೇವೆ. ಅದೇ ರೀತಿ ಕಾಂಗ್ರೆಸ್ ಬಿಜೆಪಿಯೊಂದಿಗೆ ತಾಂಟುವುದಿಲ್ಲ.

Ad Widget


Ad Widget


Ad Widget

Ad Widget


Ad Widget

ಕಬಕದ ಘಟನೆಯಲ್ಲಿ ಬೇಕಾಬಿಟ್ಟಿ ಗೊಂದಲದ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್‌ಗೆ ತನ್ನ ನಿಲುವು ಸ್ಪಷ್ಟತೆ ತೋರಿಸುವುದಿಲ್ಲ. ಒಂದು ವೇಳೆ ಎಸ್‌ಡಿಪಿಐ ಪಕ್ಷ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪ ಮಾಡುವ ಕಾಂಗ್ರೆಸ್ ತಾಕತ್ತಿದ್ದರೆ ಸೂಕ್ತ ಪುರಾವೆಯನ್ನು ಜನತೆ ಮುಂದೆ ಪ್ರಸ್ತುತ ಪಡಿಸಿ ಎಂದು ಸವಾಲು ಹಾಕಿದರು.

ಪತ್ರಿಕಾಗೊಷ್ಠಿಯಲ್ಲಿ ಎಸ್‌ಡಿಪಿಐ ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್,ಕಾರ್ಯದರ್ಶಿ ಅಶ್ರಪ್ ಬಾವು, ಸದಸ್ಯರಾದ ಅಬ್ದುಲ್ ಹಮೀದ್ ಸಾಲ್ಮರ, ಪಿಬಿಕೆ ಮೊಹಮ್ಮದ್ ಉಪಸ್ಥಿತರಿದ್ದರು.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: