ನಿರಪರಾಧಿಯಾಗಿ ಭಾರತಕ್ಕೆ ಬಂದಿಳಿದ ಹರೀಶ್ ಬಂಗೇರ!!ಕಿಡಿಗೇಡಿಗಳ ಕೃತ್ಯಕ್ಕೆ ಸೌದಿಯಲ್ಲಿ ಬಂಧಿಯಾದ ಬಂಗೇರ ಮರಳಿ ತಾಯಿನಾಡಿಗೆ | ಪ್ರಕರಣ ನಡೆದುಬಂದ ಹಾದಿಯ ನೋಟ
ಈಗ ತಾನೇ ಸರಿದ ಮುಂಜಾನೆ 6 ರ ಹೊತ್ತಿಗೆ ಮೈಮೇಲೆ ಇದ್ದ ಕಷ್ಟಗಳನ್ನೆಲ್ಲ ತೊಲಗಿಸಿಕೊಂಡು ಹರೀಶ್ ಬಂಗೇರ ಭಾರತದ ಮಣ್ಣಿನಲ್ಲಿ ಕಾಲಿಟ್ಟಿದ್ದಾರೆ. ಮನೆಯಲ್ಲಿನ ಕಷ್ಟ,ದುಡಿದು ಬದುಕುವ ಕುಟುಂಬ.ಆ ಕುಟುಂಬದ ಬೆಳವಣಿಗೆ, ಕುಟುಂಬ ಮುಂದೆ ಸಾಗಲು ದುಡಿಮೆಯೇ ಅಗತ್ಯ. ಆ ದುಡಿಮೆಗಾಗಿ ದೂರದ ಸೌದಿಗೆ ತೆರಳಿದ್ದ ಸಂದರ್ಭ ಯಾರೋ ದುಷ್ಕರ್ಮಿಗಳು ದುರುದ್ದೇಶಪೂರ್ವಕವಾಗಿ ಮಾಡಿದ ತಪ್ಪಿಗೆ ಸತತ ಎರಡು ವರ್ಷಗಳ ಮನೆಯವರ ಸಂಪರ್ಕಕ್ಕೆ ಸಿಗದೇ ಕಾರಾಗೃಹದ ಶಿಕ್ಷೆ ಅನುಭವಿಸಿದ ಉಡುಪಿ ಕುಂದಾಪುರ ನಿವಾಸಿ ಹರೀಶ್ ಬಂಗೇರ ಇಂದು ಮರಳಿ ತನ್ನ …