Day: August 14, 2021

ಕೋವಿಡ್ ಪಾಸಿಟಿವ್ ಬಂದವರು ಕಡ್ಡಾಯವಾಗಿ ಕೋವಿಡ್ ಸೆಂಟರ್‌ಗೆ ದಾಖಲಿಸಿ | ಸೂಚನೆ ಉಲ್ಲಂಘಿಸಿದರೆ ಎಫ್‌ಐಆರ್ -ದ.ಕ.ಜಿಲ್ಲಾಧಿಕಾರಿ

ಮುಖ್ಯಮಂತ್ರಿಗಳು ನೀಡಿದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹಾಗೂ ಅದರ ಪಾಸಿಟಿವಿಟಿಯನ್ನು ನಿಯಂತ್ರಿಸುವಂತೆ ಜಿಲ್ಲಾಧಿಕಾರಿ ಡಾ ಕೆ. ವಿ ರಾಜೇಂದ್ರ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಶನಿವಾರ ನಗರದಜಿಲ್ಲಾಧಿಕಾರಿಯವರ ಸಭಾಂಗಣದಲ್ಲಿ ಜಿಲ್ಲಾ ಹಾಗೂ ಕಚೇರಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಸೋ೦ಕಿತರನ್ನು ಕೋವಿಡ್ ಕೇರ್ ಸೆಂಟರ್ ‌ಗೆದಾಖಲಿಸಲಾಗುತ್ತಿದೆ. ಸೋ೦ಕು ತಗಲಿರುವವರು ಸೆಂಟರ್‌ಗೆಹೋಗದೆ ಹೊರಗೆ ಓಡಾಡಿದ್ದಲ್ಲಿ ಅವರ ವಿರುದ್ದ ಎಫ್‌ಐಆರ್ ದಾಖಲಿಸಬೇಕು. ಗರ್ಭಿಣಿಯರಾಗಿದ್ದಲ್ಲಿ ಆಸ್ಪತ್ರೆಗೆ ದಾಖಲಿಸಬೇಕು.ಕೇರ್ …

ಕೋವಿಡ್ ಪಾಸಿಟಿವ್ ಬಂದವರು ಕಡ್ಡಾಯವಾಗಿ ಕೋವಿಡ್ ಸೆಂಟರ್‌ಗೆ ದಾಖಲಿಸಿ | ಸೂಚನೆ ಉಲ್ಲಂಘಿಸಿದರೆ ಎಫ್‌ಐಆರ್ -ದ.ಕ.ಜಿಲ್ಲಾಧಿಕಾರಿ Read More »

ಬೆಳ್ತಂಗಡಿ | ಬೆಳಾಲಿನ ಯುವತಿ ಅನಾರೋಗ್ಯದಿಂದ ನಿಧನ

ಬೆಳ್ತಂಗಡಿ : ಯುವತಿಯೋರ್ವಳು ಅನಾರೋಗ್ಯದಿಂದ ನಿಧನ ಹೊಂದಿದ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿ ನಡೆದಿದೆ. ಬೆಳಾಲು ಗ್ರಾಮದ ಕೊಲ್ಪಾಡಿ ಬಳಿಯ ತಿಮರಡ್ಡ ನಿವಾಸಿ ಯಶೋಧರ ಗೌಡ ಅವರ ಪುತ್ರಿ ಪ್ರತಿಕ್ಷಾ(18) ಬಲಿಯಾದ ಯುವತಿ. 2 ದಿನಗಳ ಹಿಂದೆ ಗಂಭೀರ ಸ್ಥಿತಿ ತಲುಪಿದ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಸಂಜೆ ವೇಳೆಗೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಹಿಂದು ಜಾಗರಣವೇದಿಕೆ ಪೆರ್ಲಂಪಾಡಿ ವತಿಯಿಂದ ಭಾರತ್ ಮಾತ ಪೂಜನಾ ಕಾರ್ಯಕ್ರಮ ಮತ್ತು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ

ಕೊಳ್ತಿಗೆ: ತಾ 13 ಶುಕ್ರವಾರ ಸಂಜೆ 6:30 ರಿಂದ ಹಿಂದು‌ ಜಾಗರಣವೇದಿಕೆ ಪೆರ್ಲಂಪಾಡಿ ‌ಘಟಕದ ವತಿಯಿಂದ ಭಾರತ್ ಮಾತ ಪೂಜನಾ ಕಾರ್ಯಕ್ರಮ ಮತ್ತು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮವು ಶ್ರೀ ಷಣ್ಮುಖದೇವ ಭಜನಾ ಮಂದಿರ ಪೆರ್ಲಂಪಾಡಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹಿಂಜಾವೇ ಪೆರ್ಲಂಪಾಡಿ ಘಟಕದ ಪ್ರಮುಖರು, ಕಾರ್ಯಕರ್ತರು, ಹಿಂದು ಮುಖಂಡರುಗಳು ಉಪಸ್ಥಿತರಿದ್ದರು.

ವಿ.ಹಿ.ಪ ಶ್ರೀ ರಾಮ ಶಾಖೆ ಏನೆಕಲ್ಲು ವತಿಯಿಂದ ಭಾರತ ಮಾತಾ ಪೂಜನ ಕಾರ್ಯಕ್ರಮ|ಊರಿನ ಮಾಜಿ ಸೈನಿಕರಿಗೆ ಸನ್ಮಾನ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀ ರಾಮ ಶಾಖೆ ಯೇನೆಕಲ್ಲು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ವಿಶೇಷವಾಗಿ ದೇಶ ಸೇವೆ ಮಾಡಿದ ಊರಿನ ಮಾಜಿ ಸೈನಿಕರಾದ ಸುಬೇದಾರ್ ವಾಸುದೇವ ಬಾನಡ್ಕ,ಭವಾನಿ ಶಂಕರ ಪೂಂಬಾಡಿ,ಹರಿಶ್ಚಂದ್ರ ಪರಮಲೆ ಇವರುಗಳನ್ನು ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಶೂರಪ್ಪ ಬಾಲಾಡಿ ಇವರು ಸನ್ಮಾನಿಸಿದರು. ಮಾಜಿ ಸೈನಿಕರು ಅವರ ಸೇವಾ ವೃತ್ತಿಯ ಬಗ್ಗೆ ಮತ್ತು ವಿಶ್ವಹಿಂದೂ ಪರಿಷತ್ತಿನ ಕಾರ್ಯವೈಖರಿ ಬಗ್ಗೆ …

ವಿ.ಹಿ.ಪ ಶ್ರೀ ರಾಮ ಶಾಖೆ ಏನೆಕಲ್ಲು ವತಿಯಿಂದ ಭಾರತ ಮಾತಾ ಪೂಜನ ಕಾರ್ಯಕ್ರಮ|ಊರಿನ ಮಾಜಿ ಸೈನಿಕರಿಗೆ ಸನ್ಮಾನ Read More »

ಬೆಳ್ತಂಗಡಿ: ಜಲಪಾತ ವೀಕ್ಷಣೆ ಬಂದಿದ್ದ ಕುಟುಂಬ, ಆಳಕ್ಕೆ ಜಾರಿ ಬಿದ್ದ ಐದು ವರ್ಷದ ಮಗು

ಬೆಳ್ತಂಗಡಿ: ಬೆಂಗಳೂರಿನಿಂದ ಅಬ್ಬಿ ಜಲಪಾತ ವೀಕ್ಷಣೆಗಾಗಿ ಬಂದಿದ್ದ ಕುಟುಂಬವೊಂದರ ಐದು ವರ್ಷದ ಮಗುವೊಂದು ಬಿದ್ದು ಮುಖ ಮತ್ತು ತಲೆಗೆ ಗಂಭೀರ ಗಾಯಗೊಂಡ ಘಟನೆ ಆ.14 ರಂದು ಮಧ್ಯಾಹ್ನ ನಡೆದಿದೆ. ಶ್ರೇಯಾ ಎಂಬ ಬಾಲಕಿಯೇ ಗಾಯಗೊಂಡವರು. ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಬೆಳ್ತಂಗಡಿ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ. ಚಾರಣಿಗರು ಮೂಡಿಗೆರೆ ತಾಲೂಕು ಬಾಳೂರು ಬಳ್ಳಾಲರಾಯನದುರ್ಗ ಕಡೆಯಿಂದ 17 ಮಂದಿ ಇದ್ದ ಕುಟುಂಬವೊಂದು ಜಲಪಾತ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಬಳಗದಲ್ಲಿದ್ದ ಐದು ವರ್ಷದ ಮಗು …

ಬೆಳ್ತಂಗಡಿ: ಜಲಪಾತ ವೀಕ್ಷಣೆ ಬಂದಿದ್ದ ಕುಟುಂಬ, ಆಳಕ್ಕೆ ಜಾರಿ ಬಿದ್ದ ಐದು ವರ್ಷದ ಮಗು Read More »

ಸದ್ಯಕ್ಕಿಲ್ಲ ಲಾಕ್ ಡೌನ್ ನಂತಹ ಕಠಿಣ ಕ್ರಮ,ಇನ್ನೆರಡು ವಾರ ಈಗಿನ ನಿಯಮಗಳೇ ಜಾರಿ | ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಬೊಮ್ಮಾಯಿ, ಆರಂಭವಾಗಲಿದೆಯೇ ಶಾಲಾ ಕಾಲೇಜು?

ಕರ್ನಾಟಕದಲ್ಲಿ ಸದ್ಯ ಮಹಾಮಾರಿಯ ತಡೆಗಟ್ಟುವಲ್ಲಿ ಸರ್ಕಾರ ಉನ್ನತ ಪ್ರಯತ್ನದಲ್ಲಿದ್ದು,ಇಂದು ಮುಖ್ಯ ಮಂತ್ರಿ ಬೊಮ್ಮಾಯಿ ತುರ್ತು ಸಲಹಾ ಸಮಿಯ ಸಭೆ ನಡೆಸಿದರು.ಕರ್ನಾಟಕದಲ್ಲಿ ಕೊರೋನ ಮೂರನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಪೊಲೀಸ್ ಹಿರಿಯ ಅಧಿಕಾರಿಗಳ ಸಹಿತ ಟಾಸ್ಕ್ ಫೋರ್ಸ್ ನ ಸದಸ್ಯರು ಉಪಸ್ಥಿತರಿದ್ದರು. ಇಂದು ನಡೆದ ಮಹತ್ತರವಾದ ಸಭೆಯಲ್ಲಿ ಶಾಲಾ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಸಭೆಯಲ್ಲಿ …

ಸದ್ಯಕ್ಕಿಲ್ಲ ಲಾಕ್ ಡೌನ್ ನಂತಹ ಕಠಿಣ ಕ್ರಮ,ಇನ್ನೆರಡು ವಾರ ಈಗಿನ ನಿಯಮಗಳೇ ಜಾರಿ | ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಬೊಮ್ಮಾಯಿ, ಆರಂಭವಾಗಲಿದೆಯೇ ಶಾಲಾ ಕಾಲೇಜು? Read More »

ಬಂಟ್ವಾಳ : ಒಂಟಿ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರ

ಏಕಾಂಗಿಯಾಗಿ ವಾಸ ಮಾಡುತ್ತಿದ್ದ 52ರ ಹರೆಯದ ಮಹಿಳೆಯನ್ನು ಮನೆಯೊಳಗೆ ಕೂಡಿ ಹಾಕಿ ಹಲ್ಲೆ ನಡೆಸಿ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದಲ್ಲದೆ ಕೊಲೆ ಬೆದರಿಕೆ ಒಡ್ಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಗಬೆಟ್ಟುವಿನಲ್ಲಿ ಸಂಭವಿಸಿದೆ. ಸಿದ್ದಕಟ್ಟೆಯ ಅನಿಲ್ ಎಂಬಾತ ಅತ್ಯಾಚಾರಗೈದ ಆರೋಪಿಯಾಗಿದ್ದು , ತಲೆಮರೆಸಿಕೊಂಡಿದ್ದಾನೆ. ಆ. 11 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯ ಪತಿ ನಿಧನರಾಗಿದ್ದು, ಮಗಳಿಗೆ ವಿವಾಹವಾಗಿದೆ. ಏಕಾಂಗಿಯಾಗಿದ್ದ ಅವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಬಳಿಕ ಅತ್ಯಾಚಾರಕ್ಕೊಳಗಾದ ಮಹಿಳೆ …

ಬಂಟ್ವಾಳ : ಒಂಟಿ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರ Read More »

ಬೆಳ್ತಂಗಡಿ | 25 ಲಕ್ಷ ರೂ. ವೆಚ್ಚದಲ್ಲಿ 246 ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಿದ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಆಶಾ ಕಾರ್ಯಕರ್ತೆಯರ ಮೊಬೈಲ್ ಫೋನ್ ಸಮಸ್ಯೆಗೆ ಸ್ಪಂದಿಸಿ, 246 ಆಶಾ ಕಾರ್ಯಕರ್ತೆಯರಿಗೆ ಸುಮಾರು 25 ಲಕ್ಷ ವೆಚ್ಚದಲ್ಲಿ ಇಂದು ಮೊಬೈಲ್ ಫೋನ್ ವಿತರಿಸಿದರು. ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಇಲಾಖೆ ಸಂಬಂಧಿತ ಕೆಲಸ ನಿರ್ವಹಿಸುವಾಗ ಮೊಬೈಲ್ ಫೋನಿನ ಸಮಸ್ಯೆ ಎದುರಿಸುತ್ತಿದ್ದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಧ್ವನಿಯಾದ ಶಾಸಕರು, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಈಗ 25 ಲಕ್ಷ ವೆಚ್ಚದಲ್ಲಿ 246 ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ನೀಡುವ …

ಬೆಳ್ತಂಗಡಿ | 25 ಲಕ್ಷ ರೂ. ವೆಚ್ಚದಲ್ಲಿ 246 ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಿದ ಶಾಸಕ ಹರೀಶ್ ಪೂಂಜಾ Read More »

ಪ್ರತಿಭಟಿಸುವುದು ನಮ್ಮ ಹಕ್ಕು, ಅದನ್ನು ಕೇಳಲು ನೀವ್ಯಾರು? ಉಳ್ಳಾಲ ಪಾಕಿಸ್ಥಾನದಲ್ಲಿದೆಯಾ?ಖಾದರ್ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಮಂಗಳೂರು:ಲವ್ ಜಿಹಾದ್, ಮತಾಂತರ ಸಹಿತ ಉಗ್ರರ ಜೊತೆಗೆ ನಂಟು ಮುಂತಾದ ಕೃತ್ಯ ನಡೆದರೆ ಹಿಂದೂ ಸಂಘಟನೆ ಪ್ರಶ್ನೆ ಮಾಡಿಯೇ ಮಾಡುತ್ತದೆ, ಅದನ್ನು ಕೇಳೋದಕ್ಕೆ ನೀವ್ಯಾರು? ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಹೇಳಿದ್ದಾರೆ. ಮೊನ್ನೆ ತಾನೇ ಉಳ್ಳಾಲದಲ್ಲಿ ಮಾಜಿ ಶಾಸಕ ಇದಿನಬ್ಬ ರ ಮನೆಗೆ ಮುತ್ತಿಗೆ ಹಾಕಿದ ಹಿಂದೂ ಸಂಘಟನೆಯ ಕಾರ್ಯಕರ್ತರ ನಡೆಯನ್ನು ಪ್ರಶ್ನಿಸಿದ್ದ ಶಾಸಕ ಖಾದರ್ ಅವರಿಗೆ, ಪತ್ರಿಕಾ ಗೋಷ್ಠಿಯಲ್ಲಿ ಈ ರೀತಿಯಾಗಿ ಪ್ರಶ್ನಿಸಿದ್ದಾರೆ. ಇದಿನಬ್ಬರ ಮನೆಯಲ್ಲಿ ನಡೆದಂತಹ ಪ್ರಕರಣವನ್ನು ಪ್ರಶ್ನಿಸಲು ನೀವ್ಯಾರು? ತಾಕತ್ತು ಇದ್ದರೆ …

ಪ್ರತಿಭಟಿಸುವುದು ನಮ್ಮ ಹಕ್ಕು, ಅದನ್ನು ಕೇಳಲು ನೀವ್ಯಾರು? ಉಳ್ಳಾಲ ಪಾಕಿಸ್ಥಾನದಲ್ಲಿದೆಯಾ?ಖಾದರ್ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ Read More »

ಆಧಾರ್ ಕಾರ್ಡ್ ಕಳೆದು ಹೋದರೆ ಈ ಕ್ರಮಗಳನ್ನು ಅನುಸರಿಸಿ

ಸರ್ಕಾರದ ಎಲ್ಲಾ ಅಧಿಕೃತ ಕೆಲಸಗಳಿಗೆ ಆಧಾರ್ ಕಾರ್ಡ್ ಅತ್ಯಂತ ಮಹತ್ವದ ದಾಖಲೆಗಳಲ್ಲಿ ಒಂದು. ರಾಜ್ಯ ಸರ್ಕಾರಗಳ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ನೀಡಲಾಗುವ ಹಲವಾರು ಪ್ರಯೋಜನಗಳನ್ನು ಪಡೆಯಲು ಗುರುತಿನ ಪುರಾವೆಗೆ ಆಧಾರ್ ಕಾರ್ಡ್ ಅಗತ್ಯವಿದೆ. ಒಂದು ವೇಳೆ ನೀವು ಆಧಾರ್ ಕಾರ್ಡ್‌ ಕಳೆದುಕೊಂಡಿದ್ದರೆ, ಚಿಂತಿಸಬೇಕಾಗಿಲ್ಲ. ಏಕೆಂದರೆ ನೀವು ಪಿವಿಸಿ ಅಥವಾ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಅನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಅಧಿಕೃತ ವೆಬ್‌ಸೈಟ್‌ನಿಂದ ಸುಲಭವಾಗಿ ಪಡೆಯಬಹುದು. ನೀವು ಮೊದಲು ಮಾಡಬೇಕಾಗಿರುವುದು ನಿಮ್ಮ ಆಧಾರ್ ಕಾರ್ಡ್‌ನ ಪಿವಿಸಿ(PVC …

ಆಧಾರ್ ಕಾರ್ಡ್ ಕಳೆದು ಹೋದರೆ ಈ ಕ್ರಮಗಳನ್ನು ಅನುಸರಿಸಿ Read More »

error: Content is protected !!
Scroll to Top