Day: August 7, 2021

ತುಳುನಾಡಿನ ಆಟಿ ಅಮಾವಾಸ್ಯೆ!!ಮಹಾಮಾರಿಯಿಂದ ದೂರವಾಗುತ್ತಿದೆ ಪೂರ್ವಜರಿಂದ ವರವಾದ ಸಂಸ್ಕೃತಿ | ಪುರಾತನ ಸಂಸ್ಕೃತಿ ಮುಂದಿನ ತಲೆಮಾರುಗಳೂ ಅನುಭವಿಸುವಂತಾಗಲಿ

ಪ್ರತೀ ವರ್ಷದಂತೆ ಇಂದು ತುಳುನಾಡಿಗೆ ಬಹಳ ವಿಶೇಷವಾದ ದಿನ. ಆಷಾಡ ಮಾಸ, ತುಳುನಾಡಿನಲ್ಲಿ ಆಟಿ.ಈ ಆಟಿ ತಿಂಗಳಿನಲ್ಲಿ ಬಗೆ ಬಗೆಯ ಖಾದ್ಯಗಳು ಪ್ರತೀ ಮನೆಯ ಅಡುಗೆ ಕೋಣೆಯಿಂದ ಮೂಗಿಗೆ ರಾಚುತ್ತಲೇ ಇರುತ್ತದೆ. ನೂತನ ವಧು ತನ್ನ ತವರು ಮನೆಗೆ ತೆರಳುವ, ಗದ್ದೆಗಳಲ್ಲಿ ಬೇಸಾಯ ನಾಟಿ ಪ್ರಾರಂಭವಾಗುವ ಒಂದು ಅಮೋಘ ಘಳಿಗೆಯಲ್ಲಿ ಆಟಿ ತಿಂಗಳು ಅತ್ಯಂತ ಶ್ರೇಷ್ಠವಾಗಿದೆ.ಈ ಆಟಿ ತಿಂಗಳಿನಲ್ಲಿ ಇನ್ನೊಂದು ವಿಶೇಷ, ಭಕ್ತಿ ಭಾವ ದಿಂದ ಕೂಡಿದ ದಿನವೆಂದರೆ ಅದು ಅಮಾವಾಸ್ಯೆ.ಹಿಂದಿನ ಕಾಲದಿಂದಲೂ ತುಳುನಾಡಿನಲ್ಲಿ ಆಟಿ ಅಮಾವಾಸ್ಯೆಗೆ …

ತುಳುನಾಡಿನ ಆಟಿ ಅಮಾವಾಸ್ಯೆ!!ಮಹಾಮಾರಿಯಿಂದ ದೂರವಾಗುತ್ತಿದೆ ಪೂರ್ವಜರಿಂದ ವರವಾದ ಸಂಸ್ಕೃತಿ | ಪುರಾತನ ಸಂಸ್ಕೃತಿ ಮುಂದಿನ ತಲೆಮಾರುಗಳೂ ಅನುಭವಿಸುವಂತಾಗಲಿ Read More »

ಎಡಮಂಗಲ : ರೈಲಿನಡಿಗೆ ಬಿದ್ದು ಯುವಕನೋರ್ವ ಸಾವು

ಕಡಬ : ಯುವಕನೋರ್ವ ರೈಲಿನ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ಎಡಮಂಗಲದಲ್ಲಿ ಸಂಭವಿಸಿದೆ. ಕಡಬ ತಾಲೂಕಿನ ಎಡಮಂಗಲದ ಪಟ್ಲ ದಡ್ಡು ಕುಶಾಲಪ್ಪ ಯಾನೆ ಪೂವಪ್ಪ ನಾಯ್ಕರ ಪುತ್ರ ಭರತ್(24) ಮೃತ ಯುವಕ ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ಎಡಮಂಗಲದ ಟೈಲರ್ ಅಂಗಡಿಗೆ ಹೋಗಿ ಹಿಂತಿರುಗುವ ಸಂದರ್ಭದಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲಿನ ಅಡಿಗೆ ಬಿದ್ದು ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಯುವಕ ಉತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದ. ಈತನ ಅಣ್ಣ ಮೂರು …

ಎಡಮಂಗಲ : ರೈಲಿನಡಿಗೆ ಬಿದ್ದು ಯುವಕನೋರ್ವ ಸಾವು Read More »

ಸವಣೂರು :ವೀಕೆಂಡ್ ಕರ್ಫ್ಯೂ,ಮಾಸ್ಕ್ ಧರಿಸದವರಿಗೆ ಮಾಸ್ಕ್ ವಿತರಿಸಿದ ಪೊಲೀಸರು

ಕಡಬ : ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಸರಕಾರ ಜಾರಿಗೊಳಿಸಿದ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಅನಗತ್ಯವಾಗಿ ರಸ್ತೆಗಿಳಿದವರಿಗೆ ಕಡಬ ತಾಲೂಕಿನ ಸವಣೂರಿನಲ್ಲಿ ಪೊಲೀಸರು ದಂಡ ವಿಧಿಸಿದರು. ಅಲ್ಲದೆ ಮಾಸ್ಕ್ ಹಾಕದವರಿಗೆ ದಂಡ ವಿಧಿಸಿ,ಮಾಸ್ಕ್ ವಿತರಿಸುವ ಮೂಲಕ ಪೊಲೀಸರು ಗಮನ ಸೆಳೆದರು. ಬೆಳ್ಳಾರೆ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ವಸಂತ ಗೌಡ ನೂಜಿ,ಜಗದೀಶ ಟಿ.ಗೌಡ ಅವರು ಮಾಸ್ಕ್ ವಿತರಿಸಿ ಗಮನಸೆಳೆದರು.ಗ್ರಾ.ಪಂ.ಅಭಿವೃದ್ದಿ ಅಽಕಾರಿ ಮನ್ಮಥ ಎ ಹಾಗೂ ಸಿಬಂದಿಗಳು ಹಾಜರಿದ್ದರು.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ, ಬಾಹುಬಲಿಯಾಗಿ ಜಾವೆಲಿನ್ ನಲ್ಲಿ ಈಟಿ ಬೀಸಿದ ನೀರಜ್ ಚೋಪ್ರಾ | ಅಥ್ಲೆಟಿಕ್ ವಿಭಾಗದಲ್ಲಿ ಭಾರತದ ಶತಮಾನದ ಕೊರಗಿಗೆ ಇಂದು ಬಿತ್ತು ಫುಲ್ ಸ್ಟಾಪ್ !

ಟೋಕಿಯೋ : ಶತಕೋಟಿ ಭಾರತೀಯರ ಶತಮಾನದ ಕನಸು ಇಂದು ನನಸಾಗಿದೆ‌. ಒಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ, ಬಲಿಷ್ಠ ಬಾಹುಬಲಿ ಪ್ರದರ್ಶನ ನಡೆದುಹೋಗಿದೆ. ಹಲವು ದೇಶಗಳ ಘಟಾನುಘಟಿ ಪಳಗಿದ ಆಟಗಾರರ ನಡುವೆ ಕೂಡಾ, ನಮ್ಮ ಹುಡುಗ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಎತ್ತಿ ಹಿಡಿದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಒಲಿಂಪಿಕ್ಸ್ ನಲ್ಲಿ ಭಾರತದ ಶತಮಾನದ ನಿರೀಕ್ಷೆ ಇಂದು ಸಾಕಾರವಾಗಿದೆ. ಇಲ್ಲಿಯವರೆಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಯಾವುದೇ ಪದಕ ಗೆದ್ದಿರಲಿಲ್ಲ. ಈಗ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ …

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ, ಬಾಹುಬಲಿಯಾಗಿ ಜಾವೆಲಿನ್ ನಲ್ಲಿ ಈಟಿ ಬೀಸಿದ ನೀರಜ್ ಚೋಪ್ರಾ | ಅಥ್ಲೆಟಿಕ್ ವಿಭಾಗದಲ್ಲಿ ಭಾರತದ ಶತಮಾನದ ಕೊರಗಿಗೆ ಇಂದು ಬಿತ್ತು ಫುಲ್ ಸ್ಟಾಪ್ ! Read More »

ಒಲಂಪಿಕ್ಸ್ ನ ಕುಸ್ತಿ ಪಂದ್ಯಾಟದಲ್ಲಿ ಕಂಚು ಗೆದ್ದ ‘ಭಜರಂಗ್’ | ಭಾರತಕ್ಕೆ ಆರನೇ ಪದಕ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟು ಭಜರಂಗ್ ಪೂನಿಯ ದೇಶಕ್ಕೆ ಕಂಚಿನ ಪದಕ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ನಡೆದ ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಪಂದ್ಯದಲ್ಲಿ ಕಜಾಕಿಸ್ತಾನದ ದೌಲೆಟ್ ನಿಯಾಜ್‌ಕಾವ್ ವಿರುದ್ಧ 8-0 ಸ್ಕೋರ್ ಪಡೆದ ಪೂನಿಯ, ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 6 ಪದಕಗಳು ದೊರೆತಂತಾಗಿದೆ. ಸೆಮಿಫೈನಲ್ಸ್‌ನಲ್ಲಿ ಇರಾನಿನ ಹಾಜಿ ಅಲಿಯೇವ್ ವಿರುದ್ಧ ಸೋತಿದ್ದ ಬಜರಂಗ್ ಪೂನಿಯಾ, ಚಿನ್ನಕ್ಕಾಗಿ ಕಾದಾಡುವ ಅವಕಾಶ ಕಳೆದುಕೊಂಡಿದ್ದರು. ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅತ್ಯುತ್ತಮ …

ಒಲಂಪಿಕ್ಸ್ ನ ಕುಸ್ತಿ ಪಂದ್ಯಾಟದಲ್ಲಿ ಕಂಚು ಗೆದ್ದ ‘ಭಜರಂಗ್’ | ಭಾರತಕ್ಕೆ ಆರನೇ ಪದಕ Read More »

ಕಣಿಯೂರು | ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

ವಿದ್ಯುತ್ ಶಾಕ್ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಕಣಿಯೂರಿನಲ್ಲಿ ನಡೆದಿದೆ. ಕಣಿಯೂರು ಗ್ರಾಮದ ಪೋಯ್ಯ ಮನೆ ನಿವಾಸಿ ನಾಣ್ಯಪ್ಪ ಪೂಜಾರಿ ಮೃತಪಟ್ಟವರು ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಮಳೆಯಿಂದಾಗಿ, ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಎಂದಿನಂತೆ ನಾಣ್ಯಪ್ಪ ಪೂಜಾರಿಯವರು ಇಂದು ಬೆಳಗ್ಗೆ ತೋಟದ ಕಡೆಗೆ ಹೋಗುತ್ತಿರುವಾಗ, ತಿಳಿಯದೆ ತುಂಡಾಗಿ ಬಿದ್ದಿದ್ದ ತಂತಿಯನ್ನು ತುಳಿದಿದ್ದಾರೆ. ಪರಿಣಾಮ ವಿದ್ಯುತ್ ಶಾಕ್ ಗೆ ಒಳಗಾಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ …

ಕಣಿಯೂರು | ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು Read More »

ಬ್ಲೂಟೂತ್ ಇಯರ್ ಫೋನ್ ಸ್ಫೋಟ, ಯುವಕ ಸಾವು

ಬ್ಲೂಟೂತ್ ಇಯರ್ ಫೋನ್ ಸ್ಫೋಟಗೊಂಡು ಯುವಕನೋರ್ವ ಮೃತಪಟ್ಟ ಘಟನೆ ರಾಜಸ್ಥಾನದ ಜೈಪುರ್ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವಕನನ್ನು ರಾಕೇಶ್ ನಗರ್ ಎಂದು ಗುರುತಿಸಲಾಗಿದೆ. ಈತ ಉದಯ್‍ಪುರ ನಿವಾಸಿಯಾಗಿದ್ದಾನೆ. ಯುವಕ ಬ್ಲೂಟೂತ್ ಇಯರ್ ಫೋನ್ ಕಿವಿಗೆ ಹಾಕಿಕೊಂಡು ಮಾತನಾಡುತ್ತಿದ್ದನು. ಇದ್ದಕ್ಕಿದ್ದಂತೆ ಇಯರ್ ಫೋನ್ ಸ್ಫೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಆತನ ಎರಡು ಕಿವಿಗಳಿಗೂ ಗಂಭೀರ ಗಾಯವಾಗಿದೆ ಹಾಗೂ ಇದರಿಂದ ಯುವಕನಿಗೆ ಹೃದಾಯಾಘಾತವಾಗಿದೆ. ಕೂಡಲೇ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ಬೆಳ್ತಂಗಡಿ | ವಿದ್ಯಾರ್ಥಿನಿ ನಾಪತ್ತೆ, ತಾಯಿಯಿಂದ ದೂರು ದಾಖಲು

ಬೆಳ್ತಂಗಡಿಯ ಚರ್ಚ್ ರೋಡ್ ಬಳಿ ಮನೆಯಿಂದ ನಿನ್ನೆ ಸಂಜೆ ಹೊರಹೋದ ವಿದ್ಯಾರ್ಥಿನಿ ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳ್ತಂಗಡಿ ಕಸಬಾ ಗ್ರಾಮದ ಸೋಬಿನ್ ಮತ್ತು ಮೊಳಿ ಸೋಬಿನ್ ದಂಪತಿ ಪುತ್ರಿ ಕುಮಾರಿ ಆಸೀನಾ ಎಂಬವರು ನಾಪತ್ತೆಯಾದವರು. ಕುಮಾರಿ ಆಸೀನಾ ರವರು ಉಜಿರೆ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಪೂರೈಸಿದ್ದು, ಬಳಿಕ ಮನೆಯಲ್ಲಿಯೇ ಇದ್ದು ಸಿಇಟಿ ಪರೀಕ್ಷೆಯ ಪೂರ್ವ ತಯಾರಿ ನಡೆಸುತ್ತಿದ್ದರು. ಈಕೆ ನಿನ್ನೆ ಸಂಜೆ ಮನೆಯಿಂದ ಹೊರಟವರು ಇದುವರೆಗೆ …

ಬೆಳ್ತಂಗಡಿ | ವಿದ್ಯಾರ್ಥಿನಿ ನಾಪತ್ತೆ, ತಾಯಿಯಿಂದ ದೂರು ದಾಖಲು Read More »

ಬೊಮ್ಮಾಯಿ ಸಚಿವ ಸಂಪುಟ | ಸಚಿವರಿಗೆ ಖಾತೆ ಹಂಚಿಕೆ

ಹಲವು ದಿನಗಳ ಪ್ರಯಾಸದ ಬಳಿಕ ಸಚಿವ ಸಂಪುಟ ರಚಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊನೆಗೂ ತನ್ನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಮುಖ ಖಾತೆಗಳಾದ ಹಣಕಾಸು, ಬೆಂಗಳೂರು ಅಭಿವೃದ್ದಿ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಅಚ್ಚರಿ ಎಂಬಂತೆ ಅರಗ ಜ್ಞಾನೆಂದ್ರ ಅವರಿಗೆ ಗೃಹ ಖಾತೆ ನೀಡಲಾಗಿದೆ. ಮೊದಲ ಬಾರಿಗೆ ಸಚಿವರಾದವರಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಸಚಿವರು ಮತ್ತು ಹಂಚಿಕೆಯಾದ ಖಾತೆಗಳು ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಆರ್.ಅಶೋಕ್- ಕಂದಾಯ ವಿ ಸೋಮಣ್ಣ …

ಬೊಮ್ಮಾಯಿ ಸಚಿವ ಸಂಪುಟ | ಸಚಿವರಿಗೆ ಖಾತೆ ಹಂಚಿಕೆ Read More »

ವೈದ್ಯೆಯ ಸಾವಿಗೆ ಕಾರಣನಾದ ಆಕೆಯ ಪತಿ ಆರ್.ಟಿ.ಓ ಕೆಲಸದಿಂದ ವಜಾ

ಪತ್ನಿಯ ಸಾವಿಗೆ ಕಾರಣನಾದ ಪತಿ ಆರ್‌ಡಿ.ಓ ಒಬ್ಬರನ್ನು ಕೆಲಸದಿಂದ ವಜಾ ಮಾಡಲಾಗಿದೆ. ವರದಕ್ಷಿಣೆ ಹಾಗೂ ದೈಹಿಕ ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣನಾಗಿದ್ದ ಆರೋಪಿ ಕಿರಣ್ ಎಂಬಾತನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಕೇರಳದ ಕೊಲ್ಲಂನಲ್ಲಿ ಪತ್ನಿ, ವೈದ್ಯೆ ಎಸ್ಎ ವಿಸ್ಮಯ ಅವರಿಗೆ ವರದಕ್ಷಿಣೆ ಕಿರುಕುಳ ನೀಡುವ ಮೂಲಕ ಆಕೆಯ ಸಾವಿಗೆ ಕಾರಣನಾಗಿದ್ದ ಆರೋಪಿ ಎಸ್ ಕಿರಣ್ ಕುಮಾರ್ ನನ್ನು ಸೇವೆಯಿಂದ ವಜಾಗೊಳಿಸುವಂತೆ ಕೇರಳ ಸಾರಿಗೆ ಇಲಾಖೆ ನಿರ್ಧರಿಸಿದೆ. 30 ವರ್ಷದ ಕಿರಣ್ ಕುಮಾರ್ ಅವರು ಕೊಲ್ಲಂನ ಪ್ರಾದೇಶಿಕ …

ವೈದ್ಯೆಯ ಸಾವಿಗೆ ಕಾರಣನಾದ ಆಕೆಯ ಪತಿ ಆರ್.ಟಿ.ಓ ಕೆಲಸದಿಂದ ವಜಾ Read More »

error: Content is protected !!
Scroll to Top