ಬೊಮ್ಮಾಯಿ ಸಚಿವ ಸಂಪುಟ | ಸಚಿವರಿಗೆ ಖಾತೆ ಹಂಚಿಕೆ

ಹಲವು ದಿನಗಳ ಪ್ರಯಾಸದ ಬಳಿಕ ಸಚಿವ ಸಂಪುಟ ರಚಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊನೆಗೂ ತನ್ನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಮುಖ ಖಾತೆಗಳಾದ ಹಣಕಾಸು, ಬೆಂಗಳೂರು ಅಭಿವೃದ್ದಿ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಅಚ್ಚರಿ ಎಂಬಂತೆ ಅರಗ ಜ್ಞಾನೆಂದ್ರ ಅವರಿಗೆ ಗೃಹ ಖಾತೆ ನೀಡಲಾಗಿದೆ. ಮೊದಲ ಬಾರಿಗೆ ಸಚಿವರಾದವರಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ.

ಸಚಿವರು ಮತ್ತು ಹಂಚಿಕೆಯಾದ ಖಾತೆಗಳು

ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್

ಆರ್.ಅಶೋಕ್- ಕಂದಾಯ

ವಿ ಸೋಮಣ್ಣ – ವಸತಿ

ಅರಗ ಜ್ಞಾನೇಂದ್ರ – ಗೃಹ

ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಉನ್ನತ ಶಿಕ್ಷಣ, ಐಟಿ

ಉಮೇಶ್ ಕತ್ತಿ- ಅರಣ್ಯ, ಆಹಾರ

ಎಸ್.ಟಿ.ಸೋಮಶೇಖರ್- ಸಹಕಾರ

ಡಾ.ಕೆ.ಸುಧಾಕರ್ –ಆರೋಗ್ಯ, ವೈದ್ಯಕೀಯ ಶಿಕ್ಷಣ

ಬಿ.ಶ್ರೀ ರಾಮುಲು- ಸಾರಿಗೆ, ಪರಿಶಿಷ್ಟ ಕಲ್ಯಾಣ

ಗೋವಿಂದ ಕಾರಜೋಳ- ಭಾರೀ ಮತ್ತು ಮಧ್ಯಮ ನೀರಾವರಿ, ಜಲಸಂಪನ್ಮೂಲ

ಕೋಟಾ ಶ್ರೀನಿವಾಸ ಪೂಜಾರಿ- ಸಮಾಜ ಕಲ್ಯಾಣ

ಸುನೀಲ್ ಕುಮಾರ್ – ಇಂಧನ, ಕನ್ನಡ ಮತ್ತು ಸಂಸ್ಕೃತಿ

ಎಸ್ ಅಂಗಾರ- ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ

ಸಿ.ಸಿ.ಪಾಟೀಲ್ – ಲೋಕೋಪಯೋಗಿ ಖಾತೆ

ಬೈರತಿ ಬಸವರಾಜ – ನಗರಾಭಿವೃದ್ದಿ

ಮುರುಗೇಶ್ ನಿರಾಣಿ – ಬೃಹತ್ ಮತ್ತು ಸಣ್ಣ ಕೈಗಾರಿಕೆ

ಶಿವರಾಂ ಹೆಬ್ಬಾರ್- ಕಾರ್ಮಿಕ ಖಾತೆ

ಶಶಿಕಲಾ ಜೊಲ್ಲೆ- ಮುಜರಾಯಿ

ಕೆಸಿ ನಾರಾಯಣಗೌಡ – ಯುವಜನ ಸಬಲೀಕರಣ ಮತ್ತು ಕ್ರೀಡೆ

ಮುನಿರತ್ನ- ತೋಟಗಾರಿಕೆ

ಎಂ.ಟಿ.ಬಿ ನಾಗರಾಜ್ – ಪೌರಾಡಳಿತ

ಗೋಪಾಲಯ್ಯ- ಅಬಕಾರಿ

ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ

ಹಾಲಪ್ಪ ಆಚಾರ್ – ಗಣಿ, ಭೂ ವಿಜ್ಞಾನ

ಶಂಕರ್ ಪಾಟೀಲ್ ಮುನೇನಕೊಪ್ಪ – ಸಕ್ಕರೆ, ರೇಶ್ಮೆ, ಜವುಳಿ

ಪ್ರಭು ಚೌವ್ಹಾಣ್ – ಪಶು ಸಂಗೋಪನೆ

ಆನಂದ್ ಸಿಂಗ್ – ಪರಿಸರ ಮತ್ತು ಪ್ರವಾಸೋದ್ಯಮ

ಬಿ.ಸಿ.ನಾಗೇಶ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಬಿ.ಸಿ.ಪಾಟೀಲ್- ಕೃಷಿ

Leave A Reply

Your email address will not be published.