ಕಣ್ಣೇದುರೇ ಜೀವ ಬಿಡುತ್ತಿರುವ ಕೊರೊನಾ ಸೋಂಕಿತರು | ಮನನೊಂದು ಸೋಂಕಿತರ ಪಾಲಿನ ದೇವರಾಗಿದ್ದ ವೈದ್ಯ ವಿವೇಕ್ ರೈ ಆತ್ಮಹತ್ಯೆ
ದೇಶದಲ್ಲಿ ಕೊರೊನಾ ಎರಡನೇ ಅಲೆ ತನ್ನ ವ್ಯಾಕುಲತೆಯನ್ನು ಹೆಚ್ಚಿಸುತ್ತಿದೆ.ಇದರಿಂದಾಗಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ.
ಈ ಕಾರಣದಿಂದ ಆರೋಗ್ಯ ಕ್ಷೇತ್ರದಲ್ಲಿ ಒತ್ತಡ ಹೆಚ್ಚಿದೆ.ಇದರಿಂದ ಒತ್ತಡ ತಾಳಲಾರದೇ ಖಾಸಗಿ ಆಸ್ಪತ್ರೆಯ ವೈದ್ಯನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನೆಡೆದಿದೆ.
ಡಾ. ವಿವೇಕ್ ರೈ ಎಂಬವರೇ ಆತ್ಮಹತ್ಯೆಗೈದ ಕೊರೊನ ಸೋಂಕಿತರ ಪಾಲಿಗೆ ದೇವರಂತಿದ್ದ ಯುವ ವೈದ್ಯ.
ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಯ ಮಾಜಿ ಮುಖ್ಯಸ್ಥ ಡಾ. ರವಿ ವಾಂಖೇಡ್ಕರ್, ವಿವೇಕ್ ಓರ್ವ ಪರಿಣಿತ ವೈದ್ಯ.ಅವರು ಉತ್ತರ ಪ್ರದೇಶದ ಗೋರಖ್ಪುರ್ ಮೂಲದವರು.
ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ನೂರಾರು ರೋಗಿಗಳ ಪ್ರಾಣ ಉಳಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರನ್ನು ನೋಡಿಕೊಳ್ಳುತ್ತಿದ್ದರು. ಪ್ರತಿದಿನ 7 ರಿಂದ 8 ಗಂಭೀರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೂ ಹೆಚ್ಚು ಹೆಚ್ಚು ಜನ ಕೊರೊನಾದಿಂದ ಬಲಿಯಾಗುವುದನ್ನು ನೋಡಿ ವಿವೇಕ್ ರೈ ಖಿನ್ನತೆಗೆ ಜಾರಿದ್ದರು.
ಇದರಿಂದ ತೀವ್ರ ಹತಾಶೆಗೊಂಡ ವಿವೇಕ್ ತೀವ್ರ ಒತ್ತಡಕ್ಕೆ ಒಳಗಾಗಿ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಕಣ್ಣೆದುರಲ್ಲೇ ಜನರ ಪ್ರಾಣ ಹೋಗುವುದನ್ನು ಸಹಿಸದೇ ತಾವೂ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ವಿವೇಕ್ ಎರಡು ತಿಂಗಳ ಗರ್ಭಿಣಿ ಪತ್ನಿಯನ್ನು ಬಿಟ್ಟು ಅಗಲಿದ್ದಾರೆ ಎಂದು ವಾಂಖೇಡ್ಕರ್ ತಿಳಿಸಿದ್ದಾರೆ.
ಕೋವಿಡ್ ಬಿಕ್ಕಟ್ಟನ್ನು ನಿರ್ವಹಿಸುವಾಗ ಇದು ಭಾರಿ ಭಾವನಾತ್ಮಕ ಒತ್ತಡವನ್ನು ಗಮನಕ್ಕೆ ತರುತ್ತದೆ. ಯುವ ವೈದ್ಯನ ಈ ಸಾವು ಮೂಲಭೂತ ಆರೋಗ್ಯ ಸೌಲಭ್ಯಗಳ ಕೊರತೆಯ ನಿರಾಶೆಯನ್ನು ಸೃಷ್ಟಿಸಿರುವ ಈ ಕೆಟ್ಟ ವ್ಯವಸ್ಥೆ ಮಾಡಿದ ಕೊಲೆ ಎಂದರೆ ತಪ್ಪಾಗಲಾರದು. ಕೆಟ್ಟ ರಾಜಕೀಯ ಮತ್ತು ಕೆಟ್ಟ ಆಡಳಿತ ದುಷ್ಪರಿಣಾಮವಿದೆ ಎಂದು ವಾಖೇಂಡ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.