Hair style: ನಿಮಗೂ ಬೋಳು ತಲೆಯ ಭಯ ಇದ್ಯಾ?! ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

Hair style: ತಲೆ ಕೂದಲು ಪ್ರತಿಯೊಬ್ಬರಿಗೂ ಮುಖ್ಯವಾಗಿರುತ್ತದೆ. ಆದ್ರೆ ಬಹುತೇಕ ಪುರುಷರಿಗೆ ಬೋಳು ತಲೆ ಅಥವಾ ಕೂದಲು ಉದುರುವಿಕೆಯ ಸಮಸ್ಯೆಯಿಂದ ಮುಕ್ತಿ ಬೇಕಾಗಿದೆ. ಇತ್ತೀಚಿಗೆ ಪುರುಷರು ವಿಗ್ ಹಾಕಿಸಿಕೊಳ್ಳುವುದು, ಕಸಿ ಮಾಡಿಸಿಕೊಳ್ಳುವುದು ಸೇರಿ ಹಲವು ಟ್ರೀಟ್‌ಮೆಂಟ್‌ಗೆ ಒಳಗಾಗುತ್ತಿದ್ದಾರೆ ಆದರೆ ಇದು ಒಳ್ಳೆಯದಲ್ಲ.
ಅದರಲ್ಲೂ ಚಿಕ್ಕವಯಸ್ಸಿನಲ್ಲಿ ಕೂದಲು ಉದುರಲು ಹಲವಾರು ಕಾರಣಗಳಿವೆ. ಕೆಲಸದ ಒತ್ತಡ, ಸರಿಯಾದ ಪೋಷಣೆಯ ಕೊರತೆ ಮತ್ತು ನಿದ್ರೆಯ ಕೊರತೆಯಿಂದ ಕೂದಲು ಉದುರುವಿಕೆ ಉಂಟಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಇಲ್ಲಿದೆ ಸಿಂಪಲ್ ಟಿಪ್ಸ್.
ಈರುಳ್ಳಿ: ಈರುಳ್ಳಿಯಲ್ಲಿರುವ ಸಲ್ಫರ್ ನಮ್ಮ ತಲೆಯಲ್ಲಿ ರಕ್ತ ಪರಿಚಲನೆ ಸುಧಾರಿಸಲು ತುಂಬಾ ಸಹಕಾರಿ. ಇದಕ್ಕಾಗಿ, ಈರುಳ್ಳಿಯ ಮೃದುವಾದ ಮಿಶ್ರಣವನ್ನು ಮಾಡಿ ಮತ್ತು ಅದರಿಂದ ರಸವನ್ನು ಹೊರತೆಗೆಯಿರಿ, ರಸಕ್ಕೆ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ, ತಲೆಗೆ ಚೆನ್ನಾಗಿ ಮಸಾಜ್ ಮಾಡಿ.
ಹರಳೆಣ್ಣೆ: ಕ್ಯಾಸ್ಟರ್ (ಹರಳೆಣ್ಣೆ) ಆಯಿಲ್ ನ್ನು ಬೆರಳುಗಳ ಸಹಾಯದಿಂದ ನೆತ್ತಿಯ ಮೇಲೆ ಚನ್ನಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಬೋಳು ತಲೆಯಲ್ಲಿಯೂ ಕೂದಲು ಹುಟ್ಟುತ್ತವೆ.. ಅಲ್ಲದೆ, ಕೂದಲು ಉದುರುವಿಕೆ ಸಮಸ್ಯೆಯೂ ದೂರವಾಗುತ್ತದೆ.
ಅಲೋವೆರಾ: ಅಲೋವೆರಾ ಕೂದಲಿನ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆದ್ದರಿಂದ ನಾವು ವಾರಕ್ಕೆ ಎರಡರಿಂದ ಮೂರು ಬಾರಿ ಅಲೋವೆರಾ ಜೆಲ್ ಅನ್ನು ತಲೆಗೆ ಹಚ್ಚಬೇಕು. ಈ ಮೂರು ಸಿಂಪಲ್ ಟಿಪ್ಸ್ ಪಾಲಿಸಿದರೆ ನಯವಾದ ಕೂದಲನ್ನು ಹೊಂದಬಹುದು.
I am not rattling fantastic with English but I line up this real easygoing to read .