ಮದುವೆಯಾಗಿ ಎರಡು ಮಕ್ಕಳಿರುವ ತನ್ನ ಪ್ರೀತಿಯ ಹೆಂಡತಿಯನ್ನು ಬೇರೊಬ್ಬನೊಂದಿಗೆ ಮದುವೆ ಮಾಡಿದ ಗಂಡ !
ಪ್ರೀತಿಸಿ ಮದುವೆಯಾದ ಅದೆಷ್ಟೋ ಉದಾಹರಣೆಗಳು ನಮ್ಮೆದುರು ಇವೆ. ಆದರೆ ಇದೊಂದು ಅವೆಲ್ಲದಕ್ಕಿಂತಲೂ ವಿಚಿತ್ರ ಘಟನೆ. ಇಲ್ಲೊಬ್ಬ ವ್ಯಕ್ತಿ ತನ್ನ ಮಡದಿಗೆ ಇನ್ನೊಬ್ಬನೊಂದಿಗೆ ಪ್ರೀತಿ ಹುಟ್ಟಿದ್ದನ್ನು ಅರಿತು ಆಕೆಯ ಪ್ರಿಯಕರನೊಂದಿಗೆ ತನ್ನದೇ ಉಸ್ತುವಾರಿಯಲ್ಲಿ ಮದುವೆ ಮಾಡಿಸಿದ್ದಾನೆ. ಅದು ಆತನ ಔದಾರ್ಯವೋ ಅನಿವಾರ್ಯವೋ ನೀವೇ ಓದಿ, ತಿಳಿಯುತ್ತದೆ.
ಬಿಹಾರದ ಭಗಲ್ಪುರ್ ಜಿಲ್ಲೆಯ ಸುಲ್ತಾನ್ ಗಂಜ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಮಡದಿಯನ್ನು ಆಕೆಯ ಪ್ರೇಮಿಯೊಂದಿಗೆ ವಿವಾಹ ಮಾಡಿಸಿದ್ದಾನೆ. ಇದು ಪ್ರಸಿದ್ಧ ಹಿಂದಿ ಸಿನಿಮಾ ಹಮ್ ದಿಲ್ ದೇ ಚುಕೆ ಸನಮ್ನಂತೆಯೇ ನಡೆದಿದೆ.
ನಡೆದದ್ದು ಏನು..?
ಸುಲ್ತಾನ್ ಗಂಜ್ ನ ಐದನೇ ಬೀದಿ ನಿವಾಸಿ ಉತ್ತಮ್ ಮಂಡಲ್ ಸುಮಾರು ಎಂಟು ವರ್ಷಗಳ ಹಿಂದೆ ಖಗೇರಿಯಾ ಜಿಲ್ಲೆಯ ನಿವಾಸಿ ಸಪ್ನಾ ಕುಮಾರಿಯನ್ನು ಮದುವೆಯಾಗಿದ್ದ. ಮದುವೆಯ ನಂತರ, ಇಬ್ಬರ ನಡುವೆ ಎಲ್ಲವೂ ಸರಿಯಿತ್ತು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಪತ್ನಿಯ ನಡವಳಿಕೆ ಬದಲಾಗಿತ್ತು. ಸಪ್ನಾ ತನ್ನ ನೆರೆಮನೆಯ ರಾಜುನನ್ನು ಪ್ರೀತಿಸಲು ಶುರು ಮಾಡಿದ್ದಳು. ಕ್ರಮೇಣ ಇಬ್ಬರ ನಡುವಿನ ನಿಕಟ ಸಂಬಂಧ ಗಾಢವಾಗಿತ್ತು.
ಇದರಿಂದಾಗಿ ಸಪ್ನಾ ಹಾಗೂ ಉತ್ತಮ್ ನಡುವಿನ ದಾಂಪತ್ಯದಲ್ಲಿ ಸಂತೋಷ ಮಾಯವಾಗತೊಡಗಿತ್ತು. ಸಪ್ನಾ ಮತ್ತು ರಾಜು ನಡುವಿನ ಪ್ರೀತಿ ಬಹಳ ಆಳವಾದದ್ದಾಗಿತ್ತು ಮತ್ತು ಅವರಿಬ್ಬರೂ ವಿವಾಹವಾಗುವುದು ನಿಶ್ವಯವಾಗಿತ್ತು. ಅದಕ್ಕಾಗಿ ಯಾವ ತ್ಯಾಗಕ್ಕೂ ಅವರು ಸಿದ್ಧರಾಗಿದ್ದರು. ಯಾವ ಎಕ್ಸ್ಟ್ರೀಮ್ ಅನ್ನುವಂತಹ ಸನ್ನಿವೇಶವನ್ನು ಎದುರಿಸಲು ಅವರು ಬದ್ಧರಾಗಿದ್ದರು.
ಇದೀಗ ಸಪ್ನಾ ತನ್ನ ಪ್ರೇಮಿ ರಾಜು ಜೊತೆ ದೇವಾಲಯದಲ್ಲಿ ಎರಡನೇ ಮದುವೆಯಾಗಿದ್ದಾಳೆ. ಈ ಸಮಯದಲ್ಲಿ, ರಾಜು ಅವರ ಕುಟುಂಬದೊಂದಿಗೆ ನಡೆದಿದೆ. ವಿಶೇಷವೆಂದರೆ ಈ ಮದುವೆಯಲ್ಲಿ ಸಪ್ನಾ ಮತ್ತು ಉತ್ತಮ್ ಅವರ ಕುಟುಂಬದ ಸದಸ್ಯರು ಸಹ ಉಪಸ್ಥಿತರಿದ್ದರು.
ವಿಚಿತ್ರವೆಂದರೆ ಆಕೆಯ ಪತಿ ಉತ್ತಮ ಮುಂದೆ ನಿಂತು ಈ ಮದುವೆ ಮಾಡಿಕೊಟ್ಟಿದ್ದ. ಇದಕ್ಕೆ ಹೊರತು ನನಗೆ ಬೇರೆ ದಾರಿಗಳಿರಲಿಲ್ಲ ಎಂದು ಉತ್ತಮ್ ಹೇಳಿದ್ದಾನೆ. ಮದುವೆಯಾಗಿ ಸಪ್ನಾಗೆ ಎರಡು ಮಕ್ಕಳಿದ್ದರೂ ಆಕೆಗೆ ಪ್ರೀತಿಯ ಹುಚ್ಚು ತಲೆಗೇರಿದೆ.
ಒಂದೊಮ್ಮೆ ಆಕೆ ರಾಜುವಿನೊಂದಿಗೆ ಮದುವೆಯಾಗದೆ ಹೋದಲ್ಲಿ ರಾಜು ಅವರನ್ನು ಕೊಲೆ ಮಾಡುವುದಕ್ಕೂ ಹೇಸುತ್ತಿರಲಿಲ್ಲ ಎಂದು ಉತ್ತಮ್ ಹೇಳಿದ್ದಾನೆ. ಸಪ್ನಾಳ ಪ್ರೇಮಿ ಇತ್ತೀಚೆಗೆ ಮಾರಕಾಸ್ತ್ರದಿಂದ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಕೂಡಾ ಉತ್ತಮ್ ಆರೋಪಿಸಿದ್ದಾರೆ.
ತನ್ನ ಹಾಗೂ ಮಕ್ಕಳ ಜೀವ ಉಳಿಸಿಕೊಳ್ಳುವ ಸಲುವಾಗಿ ಅವನು ತನ್ನ ಹೆಂಡತಿಗೆ ಮದುವೆಗೆ ಅವಕಾಶ ಕೊಟ್ಟನು ಮತ್ತು ಅವಳನ್ನು ಹಳೆಯ ಬಂಧನದಿಂದ ಮುಕ್ತಗೊಳಿಸಿದನು. ಮದುವೆಯ ನಂತರ ಸಪ್ನಾ ಮಕ್ಕಳನ್ನು ಕೂಡ ಸಾಕಲು ನಿರಾಕರಿಸಿದ್ದಾಳೆ. ಇದೀಗ ಮಕ್ಕಳಿಬ್ಬರೂ ಇನ್ನೂ ಉತ್ತಮ್ ಜೊತೆಗಿದ್ದಾರೆ.
ಆ ಇಬ್ಬರು ಅಮಾಯಕ ಮಕ್ಕಳು ದಿನಬೆಳಗಾದರೆ ತಮ್ಮ ಅಮ್ಮನನ್ನು ಮನೆಯೆಲ್ಲಾ ಓಡಾಡಿ ಮೂಲೆ ಮೂಲೆಗಳಲ್ಲಿ ಹುಡುಕುತ್ತಿದ್ದಾರೆ. ಆದರೆ ಅವರ ತಾಯಿ ಇವರನ್ನೆಲ್ಲಾ ಬಿಟ್ಟು ಬಹುದೂರ ಸಾಗಿದ್ದಾಳೆಂದು ಮಕ್ಕಳಿಗೆ ಇನ್ನೂ ಅರಿವಾಗಿಲ್ಲ.
ಒಂದು ದೃಷ್ಟಿಯಿಂದ ನೋಡಿದರೆ ,ಉತ್ತಮ್ ಏನೇ ಆದರೂ ಹೃದಯ ವೈಶಾಲ್ಯತೆಯನ್ನು ಮೆರೆದು ಸ್ವಪ್ನಾಳಿಗೆ ಮದುವೆಯಾಗಲು ಅವಕಾಶ ಕೊಡುವ ಮುಖಾಂತರ ಹೀರೋ ಆಗಿದ್ದಾನೆ. ಆತನ ಲೋಕ ಅರಿಯದ ಮಕ್ಕಳು ಅಪ್ಪನ ಪ್ರೀತಿಯ ಆಲಿಂಗನದಲ್ಲಿ ಬೆಳೆಯುತ್ತಿವೆ.