ಇನ್ನೇನು ಹಸಮಣೆ ಏರಬೇಕಿದ್ದ ಯುವಕ ಕೊರೋನಾಗೆ ಬಲಿ !

Share the Article

ಎಲ್ಲವೂ ಸರಿಯಾಗಿದ್ದಿದ್ದರೆ ಆತನ ಮನೆಯಲ್ಲಿ ಇಂದು ಸಂಭ್ರಮ ಇರುತ್ತಿತ್ತು. ಆದರೆ ವಿಧಿಯೆಂಬ ದುಷ್ಟ ಕೋರೋಣ ರೂಪದಲ್ಲಿ ಬಂದು ಆ ಮನೆಯ ಶುಭಗಳಿಗೆಯನ್ನು ಕಸಿದುಕೊಂಡು ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.

ಅಲ್ಲಿ ಹಸೆಮಣೆ ಏರಬೇಕಿದ್ದ ಯುವಕ ಕೊರೊನಾ ಸೋಂಕಿಗೆ ಬಲಿಯಾಗಿ ಹೋಗಿದ್ದಾನೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ನಡೆದಿದೆ.

ಕೊಪ್ಪ ತಾಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ಈ ರೀತಿ ಸೋಂಕಿಗೆ ಬಲಿಯಾದ ಯುವಕ 32 ವರ್ಷದ ಪೃಥ್ವಿರಾಜ್ ಎಂದು ತಿಳಿದು ಬಂದಿದೆ.

ಇಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಪೃಥ್ವಿರಾಜ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾನೆ. ಈತ ಕೇವಲ

ಬೆಂಗಳೂರಿನಿಂದ ಹತ್ತು ದಿನಗಳ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ. ಬರುವಾಗಲೇ ಬೆಂಗಳೂರಿನಲ್ಲಿ ಹಬ್ಬಿ ನಿಂತಿರುವ ಕೋರೋನಾವನ್ನೂ ಹೊತ್ತು ತಂದಿದ್ದ. ಆತ ಊರಿಗೆ ಬರುತ್ತಲೇ ಅಸೌಖ್ಯ ಕಾಡಿದೆ. ಅದು ಕೊರೋ ನಾ ಅಂತ ನಂತರ ಕನ್ಫರ್ಮ್ ಆಗಿದೆ. ಆಗ ಆ ಯುವಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.

ಸಂಭ್ರಮ ಇರಬೇಕಿದ್ದ ಆತನ ಮತ್ತು ವಧುವಿನ ಮನೆಯಲ್ಲಿಗ ಸೂತಕದ ಛಾಯೆ‌ ಆವರಿಸಿದೆ.

Leave A Reply

Your email address will not be published.