ಶವಾಗಾರಕ್ಕೆ ಅಂಬುಲೆನ್ಸ್ ನಲ್ಲಿ ಹೋಗುವಾಗ ನೆಲಕ್ಕೆ ಬಿದ್ದ ಸೋಂಕಿತ ವ್ಯಕ್ತಿಯ ದೇಹ !
ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ರೋಗಿಯೊಬ್ಬರು ಬದುಕ್ಕಿದ್ದಾಗಲೇ ಸಾವನ್ನಪ್ಪಿದ್ದಾನೆಂದು ಎರಡೆರಡು ಬಾರಿ ವರದಿ ನೀಡಿ ವಿವಾದಕ್ಕೊಳಗಾಗಿದ್ದ ಅದೇ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇದೀಗ ಮತ್ತೊಂದು ನಿರ್ಲಕ್ಷ್ಯ ನಡೆದಿದೆ.
ಕಳೆದ ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ವಿದಿಶಾದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂತಹದೊಂದು ನಿರ್ಲಕ್ಷ್ಯ ನಡೆದಿರುವುದು ಬೆಳಕಿಗೆ ಬಂದಿತ್ತು.
ಇದೀಗ ಆ್ಯಂಬುಲೆನ್ಸ್ನಲ್ಲಿ ಮೃತದೇಹ ತೆಗೆದುಕೊಂಡು ಹೋಗ್ತಿದ್ದ ವೇಳೆ ಅದು ಅಂಬುಲೆನ್ಸ್ ನಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದ್ದು, ಅದರ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರಿ ವೈದ್ಯಕೀಯ ಕಾಲೇಜ್ನಿಂದ ಕೋವಿಡ್ನಿಂದ ಸಾವನ್ನಪ್ಪಿದ್ದ ಸೋಂಕಿತ ವ್ಯಕ್ತಿಯ ಮೃತದೇಹ ಶವಾಗಾರಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಆಸ್ಪತ್ರೆಯ ಗೇಟ್ನಿಂದ ಹೊರಹೋಗುತ್ತಿದ್ದಂತೆ, ವಾಹನದ ಸೈಡ್ ಡೋರ್ ತೆರೆಯಲ್ಪಟ್ಟು ಮೃತದೇಹ ಕೆಳಕ್ಕೆ ಒಗೆಯಲ್ಪಟ್ಟಿದೆ.
ಈ ಘಟನೆ ಆ ಕೂಡಲೇ ವೈರಲ್ ಆಗಿ, ತಕ್ಷಣ ಕೋವಿಡ್-19 ರೋಗಿಯ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ‘ಕಳೆದ ಎರಡು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್ ಸೋಂಕಿತನ ಮಾಹಿತಿ ನೀಡಿಲ್ಲ. ಇದೀಗ ಆತ ಸಾವನ್ನಪ್ಪಿದ್ದಾನೆಂದು ಮಾಹಿತಿ ನೀಡಿದ್ದರು. ಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವ ವೇಳೆ ಹೀಗಾಗಿದೆ ‘ ಎಂದು ಆಕ್ರೋಶ ಹೊರಹಾಕಿದ್ದಾರೆ.