ನನ್ನ ಗರ್ಲ್ ಫ್ರೆಂಡನ್ನು ಮೀಟ್ ಆಗಬೇಕಿದೆ, ಯಾವ ಸ್ಟಿಕ್ಕರ್ ಬಳಸಲಿ ಎಂದಾತ ಲಾಕ್ ಡೌನ್ ಸಂದರ್ಭ ಪೊಲೀಸರನ್ನು ಕೇಳಿದ್ದ | ಪೊಲೀಸರು ಅದಕ್ಕೆ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ ?!

ನಡುವೆ ಗರ್ಲ್​ಫ್ರೆಂಡ್​​ನ ಮೀಟ್ ಮಾಡ್ಬೇಕು, ಏನು ಮಾಡ್ಲಿ? ಎಂದವನಿಗೆ ಸಖತ್ ಉತ್ತರ ನೀಡಿದ ಮುಂಬೈ ಪೋಲೀಸ್

ಲಾಕ್​ಡೌನ್​ ನಿಂದ ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆ ಆಗಿದೆ. ಆದರೆ ಇದರಿಂದ ಹೆಚ್ಚು ಸಮಸ್ಯೆ ಆದದ್ದು ನವ ಪ್ರೇಮಿಗಳಿಗೆ.

ಮುಂಬೈನಲ್ಲಿ ಏಪ್ರಿಲ್ 15 ರಿಂದ ಲಾಕ್ಡೌನ್ ಹೇರಿದ್ದು ಎಲ್ಲರಿಗೂ ತಿಳಿದೇ ಇದೆ. ಮೊನ್ನೆ ಮುಂಬೈನ ಯುವಪ್ರೇಮಿಯೊಬ್ಬ ಮುಂಬೈ ಪೊಲೀಸರಲ್ಲಿ ತನ್ನ ಅಳಲು ತೋಡಿಕೊಂಡಿದ್ದಾನೆ.
” ನಾನು ಹೊರ ಹೋಗಿ ನನ್ನ ಗೆಳತಿಯನ್ನು ಭೇಟಿಯಾಗಬೇಕಿದೆ; ಯಾವ ಸ್ಟಿಕ್ಕರ್ ಬಳಸಲಿ ಹೇಳಿ ?! ನಾನವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ” ಏನ್ ಮಾಡ್ಲಿ? ಎಂದು ಪೋಲೀಸರನ್ನೇ ಕೇಳಿದ್ದಾನೆ. ಹಾಗೆ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ಆತ ಟ್ವೀಟ್ ಮಾಡಿದ್ದ. ಆತನ ಟ್ವೀಟ್ ಎಷ್ಟು ಫನ್ನಿ ಆಗಿದೆಯೋ, ಅದರಷ್ಟೇ ಜಾಣ ಉತ್ತರವನ್ನು ಮುಂಬೈ ಪೊಲೀಸರು ಮರು ಟ್ವೀಟ್ ಮಾಡಿದ್ದಾರೆ.

ಟ್ವಿಟರ್​ನಲ್ಲಿ ಮುಂಬೈ ಪೋಲೀಸರ ಎದುರು ಈ ಪ್ರಶ್ನೆ ಇಟ್ಟಿರುವಾತನ ಹೆಸರು ಅಶ್ವಿನ್ ವಿನೋದ್. ಮುಂಬೈನಲ್ಲಿ ತುರ್ತು ಕೆಲಸಗಳಿಗಾಗಿ ಲಾಕ್​ಡೌನ್ ಸಂದರ್ಭದಲ್ಲಿ ಹೊರಗೆ ಓಡಾಡುವವರಿಗೆ ಬೇರೆ ಬೇರೆಯಾದ ಸ್ಟಿಕರ್​ಗಳನ್ನು ನೀಡಲಾಗ್ತಿದೆ. ಅದನ್ನೇ ಮನಸ್ಸಲ್ಲಿ ಇಟ್ಟುಕೊಂಡು ಆತ ಈ ಪ್ರಶ್ನೆ ಕೇಳಿದ್ದಾನೆ.

ಮುಂಬೈ ಪೋಲೀಸ್ ರು ತಾವು ಕರ್ತವ್ಯ ನಿಷ್ಠೆಯಲ್ಲಿ ಎಷ್ಟು ಖಡಕ್ ಆಗಿರುತ್ತಾರೆಯೋ ಟ್ವಿಟರ್​ನಲ್ಲಿ ಕ್ರಿಯೇಟಿವ್ ಉತ್ತರವನ್ನು ನೀಡುವುದರಲ್ಲಿ ಕೂಡಾ ಅಷ್ಟೇ ನಿಸ್ಸೀಮರು. ಅದು ಈ ಹಿಂದೆ ಹಲವು ಸಂದರ್ಭಗಳಲ್ಲಿ ಪ್ರೂವ್ ಆಗಿದೆ. ಇಂಥಾ ಪ್ರಶ್ನೆಗಳಿಗೆಲ್ಲಾ ಬೊಂಬಾಟ್ ಉತ್ತರಗಳನ್ನು ನೀಡಿ ಅವರು ಈಗಾಗಲೇ ಭಾರೀ ಫೇಮಸ್ ಆಗಿದ್ದಾರೆ.

ಈಗ ಈತನ ಬೇಡಿಕೆಗೂ ಅಷ್ಟೇ ಅದ್ಭುತವಾಗಿ ಉತ್ತರಿಸಿದ್ದಾರೆ.

” ನಿಮಗೆ ಇದು ಅತ್ಯಂತ ತುರ್ತು ಅಗತ್ಯ ಕೆಲಸ ಎನ್ನುವುದು ನಮಗೆ ಅರ್ಥವಾಗುತ್ತದೆ. ಆದರೆ ನಮ್ಮ ಅಗತ್ಯ ಮತ್ತು ತುರ್ತು ಸೇವೆಗಳ ಅಡಿಯಲ್ಲಿ ನಿಮ್ಮ ಬೇಡಿಕೆ ಬರುವುದಿಲ್ಲ! “

” ದೂರದಲ್ಲಿದ್ದರೆ ಹೃದಯಗಳು ಮತ್ತಷ್ಟು ಹತ್ತಿರವಾಗುತ್ತವೆ, ಈಗ ತಾವು ಆರೋಗ್ಯದಿಂದಿದ್ದೀರಿ. ವಿ.ಸೂ: ನೀವಿಬ್ಬರೂ ಇಡೀ ಜೀವನ ಜೊತೆಯಾಗಿರಿ ಎಂದು ಹಾರೈಸುತ್ತೇವೆ. ಇದು ಕೇವಲ ಜೀವನದ ಒಂದು ಹಂತ ಅಷ್ಟೇ ” ಎಂದು ಉತ್ತರಿಸಿದ್ದಾರೆ.

ಇಂಥಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಟ್ವೀಟ್​ಗಳ ಮೂಲಕ ಜನರಿಗೆ ಮಾಹಿತಿ ಮತ್ತು ಮನರಂಜನೆ ಎರಡನ್ನೂ ನೀಡ್ತಿದ್ದಾರೆ ಮುಂಬೈ ಪೋಲೀಸರು. ಪ್ರೀತಿಯ ಹುಡುಗನ ಪ್ರಶ್ನೆ ಮತ್ತು ಮುಂಬೈ ಪೊಲೀಸರ ಈ ಜಾಣ್ಮೆಯ ಉತ್ತರ ಇದೀಗ ವೈರಲ್ ಆಗಿದೆ. ಮಹಿಂದ್ರಾ ಕಂಪನಿಯ ಆನಂದ ಮಹಿಂದ್ರಾ ಸಹಿತ ಹಲವರು ಟ್ವೀಟ್ ಮಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.