ಬ್ರೇಕ್ ಜಾಮ್ ಜಲ್ಲಿ ಸಾಗಾಟದ ಲಾರಿ ಪಲ್ಟಿ | ಪಕ್ಕದಲ್ಲಿದ್ದ ಕಾರಿಗೆ ಹಾನಿ

ಬ್ರೇಕ್ ಜಾಮ್ ಆದ ಪರಿಣಾಮ ಜಲ್ಲಿ ಸಾಗಾಟದ ಲಾರಿಯೊಂದು ರಸ್ತೆ ಮಧ್ಯೆ ಮಗುಚಿ ಬಿದ್ದ ಘಟನೆ ಇಂದು ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಲ್ಲಿ ನಡೆದಿದೆ.

ಬ್ರೇಕ್ ಜಾಮ್ ಆದ ಪರಿಣಾಮ ರಸ್ತೆ ಲಾರಿ ಮಗುಚಿ ಬಿದಿದ್ದು, ಇದರಿಂದ ಎದುರಿನಿಂದ ಬರುತ್ತಿದ್ದ ಕಾರಿಗೆ ಹಾನಿಯಾಗಿದೆ. ಲಾರಿ ಸಂಪೂರ್ಣ ನಜ್ಜು ಗುಜ್ಜು ಆಗಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅಪಘಾತದಿಂದ ರಸ್ತೆಯಲ್ಲಿ ಜಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

Leave A Reply

Your email address will not be published.