Daily Archives

April 17, 2021

ಉಪ್ಪಿನಂಗಡಿ | ಹಾವು ಕಡಿತಕ್ಕೊಳಗಾಗಿ ಹಾವು ಹಿಡಿಯುವ ಯುವಕ ಸ್ನೇಕ್ ಮುಸ್ತಾ ಮೃತ್ಯು

ಮನೆಗಳಿಗೆ ಬರುತ್ತಿದ್ದ ವಿಷಕಾರಿ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ರಕ್ಷಿಸುತ್ತಿದ್ದ ಉಪ್ಪಿನಂಗಡಿಯ 34 ನೆಕ್ಕಿಲಾಡಿ ನಿವಾಸಿ 'ಸ್ನೇಕ್ ಮುಸ್ತಾ' ಎಂದೇ ಚಿರಪರಿಚಿತರಾಗಿದ್ದ ಎಂ.ಆರ್. ಮುಹಮ್ಮದ್ ಮುಸ್ತಾಫ ಶನಿವಾರ ನಾಗರಹಾವಿನ ಕಡಿತಕ್ಕೆ ಸಿಲುಕಿ ಮೃತಪಟ್ಟರು.34 ನೆಕ್ಕಿಲಾಡಿ ಬೊಳಂತಿಲ

ಕೊಕ್ಕಡ ಸೌತಡ್ಕದ ಬಳಿ ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ | ಇಬ್ಬರಿಗೆ ಗಂಭೀರ ಗಾಯ

ಇಂದು ಸಂಜೆ ಕೊಕ್ಕಡ ಸಮೀಪ ದ್ವಿಚಕ್ರ ವಾಹನ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.ಕೊಕ್ಕಡದ ಸೌತಡ್ಕ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಈ ಅವಘಡ ಸಂಭವಿಸಿದೆ. ಟಿಪ್ಪರ್ ಚಾಲಕ ಟಿಪ್ಪರ್ ಅನ್ನು ಗುಡ್ಡದತ್ತ ತಿರುಗಿಸಿ ಹೆಚ್ಚಿನ ಅಪಾಯವನ್ನು

Big Breaking : ಕೊರೋನಾ ಸೋಂಕಿತರ ಜೀವರಕ್ಷಕ ‘ ರೆಮ್ ಡೆಸಿವಿರ್ ‘ ಬೆಲೆ 2000 ರೂಪಾಯಿ ಇಳಿಕೆ

ಲಕ್ಷಾಂತರ ಕೋವಿಡ್-19 ರೋಗಿಗಳಿಗೆಜೀವರಕ್ಷಕವಾಗಿರುವ ರೆಮ್ ಡೆಸಿವಿರ್ ನ ಪ್ರತಿ ಇಂಜೆಕ್ಷನ್ ಬೆಲೆಯನ್ನು ಕೇಂದ್ರ ಸರ್ಕಾರ 2000 ರೂಪಾಯಿಯಷ್ಟು ಕಡಿತ ಮಾಡಿದೆ.ಕೇಂದ್ರ ರಾಸಾಯನಿಕ ರಸಗೊಬ್ಬರಗಳ ಸಚಿವಾಲಯ ಔಷಧ ವಿಭಾಗದ ಸದಸ್ಯ ಸಲಹೆಗಾರ ಡಾ. ವಿನೋದ್ ಕೊತ್ವಾಲ್ ಅವರು ಶನಿವಾರ ಈ ಡ್ರಗ್ ಇಂಜೆಕ್ಷನ್

ದರೋಡೆ ಪ್ರಕರಣ: ಪುತ್ತೂರು ವಿ.ಸ. ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಅಬ್ದುಲ್ ಬಶೀರ್ ಬಂಧನ | ಸಮಾಜ ಸೇವೆಯ…

ಮಂಗಳೂರು ದ.ಕ.ಜಿಲ್ಲೆಯ ಮೂಡುಬಿದಿರೆ, ಮುಲ್ಕಿ, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ದ್ವಿಚಕ್ರ ವಾಹನ, ಹಣ ಮತ್ತಿತರ ವಸ್ತುಗಳನ್ನು ದಡೋಡೆ ಮಾಡುತ್ತಿದ್ದ ಪ್ರಕರಣದ ಮತ್ತೊಬ್ಬ ಆರೋಪಿ ಪುತ್ತೂರಿನ

  ದ.ಕ. ಶನಿವಾರದ ವರದಿ 309  ಜನರಿಗೆ ಕೊರೊನಾ ದೃಢ | ಒಂದು ಸಾವು

ದ.ಕ.ಜಿಲ್ಲೆಯಲ್ಲಿಂದು 309 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 37871 ಕ್ಕೆ ಏರಿಕೆಯಾಗಿದೆ.ಇಂದು 99 ಜನ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 35504 ಕ್ಕೆ ಏರಿಕೆಯಾಗಿದೆ.

ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ, ಮಹತ್ವದ ನಿರ್ಧಾರ ಸಾಧ್ಯತೆ

ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾತ್ರಿ 8 ಗಂಟೆಗೆ ವಿವಿಧ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.ಈ ಸಭೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಮುಖ

ಮತ ಪ್ರವಚನ ನೀಡಲು ತೆರಳಿದ್ದ ಸುಳ್ಯದ ವಿದ್ಯಾರ್ಥಿ ಮಸೀದಿಯಲ್ಲಿ ಮೃತ್ಯು

ಮಂಗಳೂರಿನ ಹೊರವಲಯದ ಮರಕಡ ಮಸೀದಿಗೆ ರಮಝಾನ್‌ನ ಮತ ಪ್ರವಚನ ನೀಡಲು ಬಂದಿದ್ದ ಸುಳ್ಯ ಮೂಲದ ವಿದ್ಯಾರ್ಥಿಯೊಬ್ಬ ಮಸೀದಿಯಲ್ಲೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ.ಸುಳ್ಯ ಸಮೀಪದ ಅಜ್ಜಾವರದ ಹಸೈನಾರ್ ಹಾಜಿ-ಜೊಹರಾ ದಂಪತಿಯ ಪುತ್ರ ಅಬ್ದುಲ್ ಅಲ್ ಸಿನಾನ್ ಅಜ್ಜಾವರ (20) ಮೃತಪಟ್ಟ ಯುವಕ.

ಸುಳ್ಯ ಕಾನೂನು ಕಾಲೇಜಿನಲ್ಲಿ ಸ್ಕಾರ್ಫ್ ವಿವಾದ

ಸುಳ್ಯದ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಸ್ಕಾರ್ಫ್ ಹಾಕಿ ಪರೀಕ್ಷೆ ಬರೆಯಲು ಅವಕಾಶ ನೀಡದ ವಿಚಾರದಲ್ಲಿ ಉಂಟಾದ ವಿವಾದವು, ಕಾಲೇಜು ಪ್ರಾಂಶುಪಾಲರು, ಸಲಹೆಗಾರರು ಹಾಗೂ ವಿದ್ಯಾರ್ಥಿನಿಯ ಪೋಷಕರ ನಡುವೆ ಮಾತುಕತೆ ಬಳಿಕ ಸುಖಾಂತ್ಯಗೊಂಡ ಘಟನೆ ವರದಿಯಾಗಿದೆ.ಕಾನೂನು ಕಾಲೇಜಿನ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಈ ಮುಸ್ಲಿಂ ಕುಟುಂಬದ ಚಂಡಿಕಾ ಹೋಮ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಮುಸ್ಲಿಂ ಕುಟುಂಬವೊಂದು ಕಳೆದ ಹಲವು ವರ್ಷಗಳಿಂದ ವರ್ಷಕ್ಕೊಮ್ಮೆ ಚಂಡಿಕಾಹೋಮ ನೆರವೇರಿಸುವ ಮೂಲಕ ಗಮನ ಸೆಳೆದಿದೆ. ಆ ಕುಟುಂಬವು ಎಲ್ಲರಂತೆ ಶ್ರದ್ಧಾಭಕ್ತಿಯಿಂದ ದೇವಿಯನ್ನು ಆರಾಧಿಸಿ ಸೇವೆಯನ್ನು ನೀಡುತ್ತಿದೆ.ಬಳ್ಳಾರಿಯ

ಅಡುಗೆ ಗ್ಯಾಸ್ ಸಿಲಿಂಡರ್ ನಿಂದ ದಾರಿ ಮಧ್ಯೆ ಗ್ಯಾಸ್ ಕಳ್ಳತನ | ಓರ್ವನ ಬಂಧನ, ಮತ್ತೊಬ್ಬನಿಗಾಗಿ ಶೋಧ

ಗ್ಯಾಸ್ ಏಜೆನ್ಸಿಯ ಡೆಲಿವರಿ ಸಿಬಂದಿಯೋರ್ವ ಡೆಲಿವೆರಿ ಮಾಡಬೇಕಾಗಿದ್ದ ಗ್ಯಾಸ್ ಸಿಲಿಂಡರ್ ನಿಂದ ಅನಿಲ ಕದ್ದು ಬೇರೆ ಖಾಲಿ ಸಿಲಿಂಡರಿಗೆ ತುಂಬಿಸಿ ಮಾರಾಟ ಮಾಡುತ್ತಿದ್ದುದ್ದನ್ನು ಗ್ರಾಮಸ್ಥರು ಪತ್ತೆ ಹಚ್ಚಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.ಬಂಟ್ವಾಳದ ಕಾವಳಪಡೂರು ಗ್ರಾಮದ ಅಲಂಪುರಿ