ಗೋಲ್ಡ್ ಫಿಂಚ್ ಕೆ.ಪ್ರಕಾಶ್ ಶೆಟ್ಟಿ ರಾಜ್ಯಸಭೆಗೆ ಸ್ಪರ್ಧೆ?

ರಾಜ್ಯಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೆ ಈ ಬಾರಿ ಐವರು ಕಣದಲ್ಲಿದ್ದಾರೆ. ಅದರಲ್ಲಿ ಪ್ರಭಾಕರ ಕೋರೆ, ರಮೇಶ್ ಕತ್ತಿ, ಎಂ.ನಾಗರಾಜ್, ಹಾಗೂ ಗೋಲ್ಡ್ ಫಿಂಚ್ ಮಾಲಕ ಕೆ.ಪ್ರಕಾಶ್ ಶೆಟ್ಟಿ ಅವರ ಹೆಸರು ಕೇಳಿಬರುತ್ತಿದೆ.


Ad Widget

Ad Widget

Ad Widget

Ad Widget
Ad Widget

Ad Widget

Ad Widget

“ಪ್ರಕಾಶಾಭಿನಂದನಾ” ಕಾರ್ಯಕ್ರಮದ ಮೂಲಕ ಜನತೆಗೆ ಪರಿಚಿತರಾಗಿರುವ ಕೊಡುಗೈ ದಾನಿ ಕೆ.ಪ್ರಕಾಶ್ ಶೆಟ್ಟಿಯವರು ಈ ಹಿಂದೆ ರಾಜ್ಯ ನೆರೆ ಪರಿಹಾರ ನಿಧಿಗೆ ಒಂದು ಕೋಟಿ ರೂ. ದೇಣಿಗೆ ನೀಡಿದ್ದರು.

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜನತೆಗೆ ನೆರವಾಗಿರುವ ಇವರು ಕೋಟ್ಯಾಂತರ ರೂ. ಮೊತ್ತದ ಆಹಾರ ಕಿಟ್ ಗಳನ್ನು ವಿತರಿಸಿದ್ದರು.

ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಸಭೆ ನಡೆಯಲಿದ್ದು ಈ ವೇಳೆ ಹೆಸರು ಫೈನಲ್ ಆಗಲಿದೆ.

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಆಡಳಿತ ನಡೆಸುತ್ತಿರುವ ಬಿಜೆಪಿಗೆ ಎರಡು ಸ್ಥಾನ ಲಭಿಸಲಿದೆ. ಹಾಲಿ ಸದಸ್ಯ ಪ್ರಭಾಕರ ಕೋರೆ ಅವರು ತಮ್ಮನ್ನು ಮೂರನೇ ಬಾರಿಗೆ ಆಯ್ಕೆ ಮಾಡುವಂತೆ ಈಗಾಗಲೇ ಯಡಿಯೂರಪ್ಪ ಬಳಿ ದುಂಬಾಲು ಬಿದ್ದಿದ್ದಾರೆ.

ಮಾಜಿ ಸಂಸದ ರಮೇಶ್ ಕತ್ತಿ ಪರವಾಗಿ ಅವರ ಸೋದರ ಉಮೇಶ್ ಕತ್ತಿ ಈಗಾಗಲೇ ಬಹಿರಂಗ ಹೋರಾಟಕ್ಕೆ ಇಳಿದಿದ್ದಾರೆ.

ಆದರೆ ಅಂತಿಮವಾಗಿ ಪಕ್ಷ ಯಾರಿಗೆ ಮಣೆ ಹಾಕಲಿದೆ ಎಂಬುದು ಪ್ರಶ್ನೆಯಾಗಿದೆ.

error: Content is protected !!
Scroll to Top
%d bloggers like this: