Breaking News | ಬೆದರಿ ಬಿದ್ದ ಬೆಳ್ತಂಗಡಿ | ತಾಲೂಕಿನಾದ್ಯಂತ ಸೋಂಕು ಹರಡುವ ಆತಂಕ : 192 ಜನರ ಹೋಂ ಕ್ವಾರಂಟೈನ್
ಈ ಸುದ್ದಿ ಕೇಳಿ ಬೆಳ್ತಂಗಡಿ ಅಕ್ಷರಶಃ ಬೆಚ್ಚಿ ಬೆದರಿ ಬೀಳಲಿದೆ. ಕೋರೋನದಿಂದ ಮುಕ್ತವಾಗಿದ್ದ ಬೆಳ್ತಂಗಡಿಯಲ್ಲಿ ಮತ್ತೆ ಕೋರೋನಾದ ಕರಿ ನೆರಳು ಇದೀಗ ಇಡೀ ಬೆಳ್ತಂಗಡಿ ತಾಲೂಕಿಗೆ ವ್ಯಾಪಿಸುವ ಭಯ ಮೂಡಿದೆ.
ಶಿರ್ಲಾಲು ಸೊಂಕಿತೆ ಮಹಿಳೆಯು ನಾವೂರಿನ ವೈದ್ಯರೊಬ್ಬರಲ್ಲಿ ಚಿಕಿತ್ಸೆಗೆಂದು ಹೋಗಿದ್ದರು. ಆದರೆ ವೈದ್ಯರು ಮಹಿಳೆಯನ್ನು ಬೇರೆ ಕಡೆಗೆ ರೆಫರ್ ಮಾಡಿದ್ದರು. ಆದ್ದರಿಂದ ವೈದ್ಯರನ್ನು ಕೂಡಾ ಮುಂಜಾಗರೂಕತೆಯ ದೃಷ್ಟಿಯಿಂದ ಕ್ವಾರಂಟೈನ್ ಮಾಡಿದ್ದರು.
ಆ ಹಿರಿಯ ವೈದ್ಯರು, ಸಹಜವಾಗಿ ಶಿರ್ಲಾಲು ಸೊಂಕಿತೆ ಮಹಿಳೆ ಅಲ್ಲಿಗೆ ಬಂದ ನಂತರ ಇತರ ಹಲವು ಮಂದಿಗೆ ಶುಶ್ರೂಷೆ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನಾದ್ಯಂತ ಅದರ ಪ್ರೈಮರಿ ಕಾಂಟಾಕ್ಟ್ ಹರಡಿರುವ ಸಂಭವ ಇದೆ. ಆದುದರಿಂದ ತಾಲೂಕು ಆಡಳಿತ ಈಗಾಗಲೇ ಬರೋಬ್ಬರಿ 192 ಮಂದಿಯನ್ನು ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಗುರುತಿಸಿದೆ.
ಆ 192 ಜನರು ಬೆಳ್ತಂಗಡಿ ತಾಲೂಕಿನಾದ್ಯಂತ ಇದ್ದು, ಅದುವೇ ಈಗಿನ ಆತಂಕಕ್ಕೆ ಮೂಲ ಕಾರಣ. ಬೆಳ್ತಂಗಡಿ ತಾಲೂಕಿನ ನಾವೂರು, ನಡ, ಮಂಜೊಟ್ಟಿ, ಸುರ್ಯ, ಕೊಯ್ಯೂರು, ಕಿಲ್ಲೂರು, ಮಿತ್ತಬಾಗಿಲು, ದಿಡುಪೆ, ಭೋಜಾರ ನಡ, ಕನ್ಯಾಡಿ, ಕಲ್ಲಾಜೆ ಇಂದಬೆಟ್ಟು, ಬೆದ್ರ ಬೆಟ್ಟು, ಕುಕ್ಕಾಜೆ, ಹತ್ಯಡ್ಕ, ಲೈಲಾ, ಬಂಗಾಡಿ, ಕುವೆಟ್ಟು, ಕಿಲ್ಲೂರು, ಮಿತ್ತಬಾಗಿಲು, ಸುರ್ಯ, ಪುತ್ರ ಬೈಲು, ದಿಡುಪೆ ಪಡಂಗಡಿ ಮತ್ತಿತರ ಪ್ರದೇಶಗಳ ಒಟ್ಟು 192 ಜನರ ಕ್ವಾರಂಟೈ ನ್ ಪ್ರಕ್ರಿಯೆ ಪ್ರಗತಿಯಲ್ಲಿದೆ.