Ad Widget

‘ ಗೋಲ್ಡ್ ಮ್ಯಾನ್ ‘ ಎಂದೇ ಪ್ರಖ್ಯಾತಿಯ ಸಾಮ್ರಾಟ್ ಮೋಜ್ ಚಿನ್ನದ ಭಾರ ಕೆಳಗಿಟ್ಟು ಮಲಗಿದ್ದಾನೆ !

ಲೇ : ರಾಜೇಶ್ ಕೆ. ಶೇಣಿ

Ad Widget Ad Widget

ಪುಣೆ : ತನ್ನ ವಿಚಿತ್ರ ಶೈಲಿಯ ಚಿನ್ನಾಭರಣ ಧಾರಣೆಯಿಂದ ಗೋಲ್ಡ್ ಮ್ಯಾನ್ ಎಂದೇ ಪ್ರಖ್ಯಾತಿ ಹೊಂದಿದ್ದ ಸಾಮ್ರಾಟ್ ಮೋಜ್ ಅವರು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.

Ad Widget Ad Widget

ಇವರು ಕುತ್ತಿಗೆ ಹಾಗೂ ಕೈಗಳ ಸುತ್ತ ಸುಮಾರು 8 -10 ಕೆ.ಜಿ. ಚಿನ್ನಾಭರಣಗಳನ್ನು ಧರಿಸಿಕೊಳ್ಳುತ್ತಿದ್ದರು. ಮೈಮೇಲೆ ಕೆಜಿಗಟ್ಟಲೆ ಚಿನ್ನ ಹೊತ್ತುಕೊಂಡು ಬದುಕುತ್ತಿದ್ದರು. ಅದೇ ಕಾರಣಕ್ಕೆ ಅವರು ದೇಶಾದ್ಯಂತ ಪ್ರಖ್ಯಾತರಾಗಿದ್ದರು. ಇವರು ಪುಣೆಯಲ್ಲಿ ಪ್ರಸಿದ್ಧ ಉದ್ಯಮಿಯಾಗಿದ್ದರು ಕೂಡ. ಅಲ್ಲದೇ ಅವರು ಪುಣೆಯ ಸಂಗಂವಾಡಿಯ ಶಾಸಕ ರಾಮ್ ಬಾಬು ಅವರ ಅಳಿಯನಾಗಿದ್ದರು. ರಾಜಕೀಯವಾಗಿ ಕೂಡ ಆಸಕ್ತಿ ಇದ್ದ ಅವರು ಮುಂದಿನ ಎಮ್ ಎಲ್ ಎ ಗೆ ಸ್ಪರ್ಧಿಸುವ ಇರಾದೆ ಹೊಂದಿದ್ದರು. ಅಷ್ಟರಲ್ಲಿ 39 ರ ಚಿಕ್ಕ ವರ್ಷ ವಯಸ್ಸಿಗೇ ಅವರು ಸಾವನ್ನಪ್ಪಿದ್ದಾರೆ.

ಇನ್ನೊಬ್ಬನಿದ್ದ ಗೋಲ್ಡ್ ಮ್ಯಾನ್

ಆತ, ಈಗ ಸಾವನ್ನಪ್ಪಿದ ಸಾಮ್ರಾಟ್ ಮೋಜ್ ಎಂಬ ಗೋಲ್ಡ್ ಮ್ಯಾನ್ ಗಿಂತ ಮುಂಚಿನ ಮತ್ತು ಭಾರತದ ಮೊದಲ ಗೋಲ್ಡ್ ಮ್ಯಾನ್ ! ಆತ ಕೂಡ ಈ ಮೋಜ್ ನಂತೆಯೇ ಮೈಮೇಲೆ ಕೆಜಿಗಟ್ಟಲೆ ಚಿನ್ನ ಹೇರಿಕೊಂಡು ಬದುಕಿದ್ದ. ಆತನ ಜೀವ ಕೂಡ ತನ್ನ 45 ನೆಯ ವಯಸ್ಸಿಗೇ ಜಗತ್ತಿಗೆ ಭಾರವಾಯಿತು! ಕುತ್ತಿಗೆಗೆ ಹಾಕಿಕೊಂಡ ಭಾರದ್ದೇ ಸಮಸ್ಯೆಯೇ ?! ಈ ಚಿನ್ನದ ಭಾರವಲ್ಲದೆ ಜಿಮ್ ಗಳಲ್ಲಿ ಒಂದಷ್ಟು ಭಾರ ಎತ್ತಿದ್ದರೆ ಬದುಕು ಮತ್ತಷ್ಟು ದಿನ ಮುಂದುವರಿಯುತ್ತಿತ್ತಾ ? ಸಾವಿನ ವಿಷಯದಲ್ಲಿ ಯಾರನ್ನು consult ಮಾಡುವುದು ?!

ಮತ್ತೊಬ್ಬನಿದ್ದ. ಚಿನ್ನದ ಶರ್ಟ್ ಹಾಕುತ್ತಿದ್ದ ದತ್ತಾತ್ರೇಯ ಪುಳೆ. ಆತ ಮೂರುವರೆ ಕೆಜಿ ಚಿನ್ನದ ಶರ್ಟ್ ಧರಿಸುತ್ತಿದ್ದ. ಅದರ ಬೆಲೆ 1.29 ಕೋಟಿ ರೂಪಾಯಿ ! ದುರದೃಷ್ಟವಶಾತ್ 2016 ರಲ್ಲಿ ತನ್ನ ಸ್ವಂತ ಮಗನ ಎದುರೇ ಹತ್ಯೆಯಾದ.

ಈಗ ತೀರಿಕೊಂಡ ಮೋಜ್ ಅವರು ಯರವಾಡ ಪ್ರದೇಶದಲ್ಲಿ ಅವರ ಅಂತ್ಯಸಂಸ್ಕಾರ ಮಂಗಳವಾರ ನೆರವೇರಿತು. ಸಾಮ್ರಾಟ್ ಅವರು ಪತ್ನಿ, ಇಬ್ಬರು ಮಕ್ಕಳು, ತಾಯಿ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

Ad Widget Ad Widget

Leave a Reply

error: Content is protected !!
Scroll to Top
%d bloggers like this: