Day: May 21, 2020

ಕ್ವಾರಂಟೈನ್‌ನಲ್ಲಿರುವವರಿಗೆ ಊಟ ನೀಡುವ ವ್ಯಕ್ತಿಗಳಿಗೆ ಅಡ್ಡಿಪಡಿಸಿದರೆ ಕ್ರಿಮಿನಲ್ ಮೊಕದ್ದಮೆ!| ಕ್ವಾರಂಟೈನ್‌ನಲ್ಲಿ ಇರುವವರು ಕೊರೊನಾ ಬಾಧಿತರಲ್ಲ

ಪುತ್ತೂರು: ಕ್ವಾರೆಂಟೈನ್‌ನಲ್ಲಿರುವವರಿಗೆ ಊಟ ನೀಡುವ ವ್ಯಕ್ತಿಗಳಿಗೆ ಅಡ್ಡಿಪಡಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತಹಶೀಲ್ದಾರ್ ಟಿ. ರಮೇಶ್ ಬಾಬು ತಿಳಿಸಿದ್ದಾರೆ. ಮೇ 21ರಂದು ತಮ್ಮ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯಗಳಲ್ಲಿಂದ ಬಂದವರಿಗೆ ಪುತ್ತೂರು ತಾಲೂಕಿನಲ್ಲಿ ಕೊರೆಂಟೈನ್ ವ್ಯವಸ್ಥೆ ಮಾಡಲಾಗುತ್ತಿದ್ದು, 14 ದಿನಗಳ ಕಾಲ ಅವರಿಗೆ ಕ್ವಾರೆಂಟೈನ್ ಮಾಡಲಾಗುತ್ತದೆ. ಇಂತವರಿಗೆ ಊಟ ಕೊಡುವ ವ್ಯಕ್ತಿಗಳಿಗೆ ಅಡ್ಡಿ ಪಡಿಸುತ್ತಿರುವ ಬಗ್ಗೆ ಕೆಲವೊಂದು ದೂರು ಬಂದಿದೆ. ಅಂತಹ ಕೆಲಸ ಮಾಡುವವರ ವಿರುದ್ದ ವಿಪತ್ತು ನಿರ್ವಹಣೆ 2005 ಕಾಯಿದೆಯಡಿ …

ಕ್ವಾರಂಟೈನ್‌ನಲ್ಲಿರುವವರಿಗೆ ಊಟ ನೀಡುವ ವ್ಯಕ್ತಿಗಳಿಗೆ ಅಡ್ಡಿಪಡಿಸಿದರೆ ಕ್ರಿಮಿನಲ್ ಮೊಕದ್ದಮೆ!| ಕ್ವಾರಂಟೈನ್‌ನಲ್ಲಿ ಇರುವವರು ಕೊರೊನಾ ಬಾಧಿತರಲ್ಲ Read More »

ಉಡುಪಿ | ಕೊರೋನ ಕ್ವಾರಂಟೈನ್ ನಲ್ಲಿದ್ದ ವಿವಾಹಿತೆ ‘ ಕರೋನಾ ಪ್ಯಾರ್ ಹೈ ‘ ಅಂದ ಪ್ರಿಯಕರನ ಜತೆ ಪರಾರಿ

ಕಾರ್ಕಳ : ವಿಶ್ವವೇ ಕೊರೋನಾಗೆ ಹೆದರಿ ಅದರ ವಿರುದ್ಧ ಹೋರಾಡಲು ದಾರಿ ಕಂಡುಕೊಳ್ಳುತ್ತಿದ್ದರೆ ಇಲ್ಲೊಬ್ಬ ಮಹಿಳೆ ಹೋಂ ಕ್ವಾರಂಟೈನ್‌ ಮುಗಿಯುತ್ತಿದ್ದಂತೆ ತನ್ನ ಮಗು ಬಿಟ್ಟು ವಿವಾಹಿತ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಿಂದ ವರದಿಯಾಗಿದೆ. ಅಜೆಕಾರು ಕೈಕಂಬ ನಿವಾಸಿ ಮುಬೀನಾ (28)‌ ಎಂಬುವರು ಪರಾರಿಯಾದ ಮಹಿಳೆ. ಮಂಗಳೂರಿಗೆ ಮದುವೆಗೆ ಹೋದ ಕಾರಣಕ್ಕೆ ಈ ಮಹಿಳೆಯನ್ನು ತನ್ನ ತಾಯಿ ಮತ್ತು ಸಹೋದರನ ಜೊತೆ ಹೋಂ ಕ್ವಾರಂಟೈನ್ ಮಾಡಿದ್ದರು. ಹೋಂ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದಂತೆ ಈಕೆ …

ಉಡುಪಿ | ಕೊರೋನ ಕ್ವಾರಂಟೈನ್ ನಲ್ಲಿದ್ದ ವಿವಾಹಿತೆ ‘ ಕರೋನಾ ಪ್ಯಾರ್ ಹೈ ‘ ಅಂದ ಪ್ರಿಯಕರನ ಜತೆ ಪರಾರಿ Read More »

ಕಾನೂನು ಸಚಿವರ ಮೇಲೆ ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ | ಮಾಧುಸ್ವಾಮಿ ಮೇಲೆ ಸಿಎಂ ಗರಂ

ಬೆಂಗಳೂರು: ಕೋಲಾರದಲ್ಲಿ ರೈತ ಮಹಿಳೆಗೆ ಏ ಬಾಯಿ ಮುಚ್ಚು, ರಾಸ್ಕಲ್ ಎಂದು ಹೇಳಿ ತೀವ್ರ ವಿವಾದಕ್ಕೆ ಸಿಲುಕಿದ್ದ ಕಾನೂನು ಮಂತ್ರಿ ಮಾಧುಸ್ವಾಮಿಯವರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಮಾಧುಸ್ವಾಮಿ ರೈತ ಮಹಿಳೆಗೆ ಆ ರೀತಿ ವರ್ತಿಸಿದ್ದು ಬಹಳ ದೊಡ್ಡ ತಪ್ಪು, ಸಿಟ್ಟು ಬಂದಿದೆ ಅಂತಾ ಏನ್ ಬೇಕಾದ್ರೂ ಮಾತನಾಡೋದು ಸರಿಯಲ್ಲ. ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ವರ್ತಿಸಬಾರದು. …

ಕಾನೂನು ಸಚಿವರ ಮೇಲೆ ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ | ಮಾಧುಸ್ವಾಮಿ ಮೇಲೆ ಸಿಎಂ ಗರಂ Read More »

ಗ್ರಾಮ ಪಂಚಾಯತ್ ಗೆ ನಾಮನಿರ್ದೇಶನ ಕ್ರಮ ಸರಿಯಲ್ಲ | ಶಕುಂತಳಾ ನಾಗರಾಜ್

ಗ್ರಾಮ ಪಂಚಾಯತ್ ಅವಧಿ ಮುಕ್ತಾಯ ವಾಗುವ ಸಂದರ್ಭದಲ್ಲಿ ಚುನಾವಣೆ ಮುಂದೂಡಿ ನಾಮನಿರ್ದೇಶನ ಕ್ರಮಕ್ಕೆ ಇಳಿದಿರುವ ರಾಜ್ಯ ಸರಕಾರ ಪಂಚಾಯತ್ ರಾಜ್ ವ್ಯವಸ್ಥೆ ಗೆ ವಿರುದ್ಧ ದಾರಿ ಹಿಡಿದಿದ್ದು, ರಾಜಕೀಯ ರಹೀತ ಪಂಚಾಯತ್ ಗೆ ರಾಜಕೀಯ ಮಸಿ ಬಳಿಯುವ ತಂತ್ರ ನಡೆಯುತ್ತಿದೆ ಎಂದು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಕುಂತಳಾನಾಗರಾಜ್ ಸರಕಾರದ ಈ ಕ್ರಮವನ್ನು ಖಂಡಿಸಿದ್ದಾರೆ. ಈಗೀರುವ ಆಡಳಿತ ಸಮಿತಿಯನ್ನೇ ಮುಂದುವರಿಸಲು ಸರಕಾರಕ್ಕೇನು ತೊಂದರೆ, ಸರಕಾರದ ಕೂಡಲೇ ನಾಮನಿರ್ದೇಶನ ಕ್ರಮ ಕೈಬಿಡಲು ಆಗ್ರಹಿಸಿದ್ದಾರೆ.

ಕಡಬ | ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ನೇಣಿಗೆ ಶರಣು

ಕಡಬ: ಕಡಬ ತಾಲೂಕಿನ ಕೊಂಬಾರು ಎಂಬಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ. ಕೊಂಬಾರುಗದ್ದೆ ನಿವಾಸಿ ತಿಮ್ಮಪ್ಪ ಗೌಡ ಎಂಬವರ ಪುತ್ರ ನಂದನ್(16 ವರ್ಷ) ಎಂಬವನು ಆತ್ಮಹತ್ಯೆಗೆ ಶರಣಾದವನು. ನಂದನ್ ಹತ್ತನೆ ತರಗತಿಯಲ್ಲಿ ಓದುತ್ತಿದ್ದು ಇಂದು ಮುಂಜಾನೆ ತನ್ನ ಮನೆಯ ಸಮೀಪದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆತ್ಮಹತ್ಯೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ಯನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಸಲಾಗಿದೆ.

ಕರಾವಳಿಯಲ್ಲಿ ಇಂದು ಕೋರೋನಾ 31 ಪಾಸಿಟಿವ್ | ಮುಂಬೈ ಲಿಂಕು…!

ಮಂಗಳೂರು: ಕರಾವಳಿಯಲ್ಲಿ ಕೊರೊನಾ ಆರ್ಭಟ ಹೆಚ್ಚಿದ್ದು,‌ ಅವಿಭಜಿತ ಜಿಲ್ಲೆಯಲ್ಲಿ ಇಂದು 31 ಪ್ರಕರಣ ದೃಢವಾಗಿದ್ದು, ಇದು ಉಭಯ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಅರೋಗ್ಯ ಇಲಾಖೆ ಇಂದು ಮಧ್ಯಾಹ್ನ ಬಿಡುಗಡೆ ಮಾಡಿದ ಬುಲೆಟಿನ್ ಉಡುಪಿ ಜಿಲ್ಲೆಯಲ್ಲಿ 25 ಪ್ರಕರಣ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಪೈಕಿ ದುಬೈ ಹಾಗೂ ಮುಂಬೈಯಿಂದ ಬಂದ ಪ್ರಯಾಣಿಕರಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿಯೂ ಕೋರೋನಾ ಅಬ್ಬರ ಭುಗಿಲೆದ್ದಿದೆ. ಇಂದು ಈವರೆಗೆ …

ಕರಾವಳಿಯಲ್ಲಿ ಇಂದು ಕೋರೋನಾ 31 ಪಾಸಿಟಿವ್ | ಮುಂಬೈ ಲಿಂಕು…! Read More »

ಬಿತ್ತು ಸೋನಿಯಾಗಾಂಧಿ ಮೇಲೆ ಶಿವಮೊಗ್ಗದಲ್ಲಿ FIR | ಮೋದಿ ಅವರು ಪಿಎಂ ಕೇರ್ಸ್‌ ನಿಧಿ ದುರ್ಬಳಕೆ ಆರೋಪದ ಹಿನ್ನೆಲೆ

ಸಾಗರ: ಕಾಂಗ್ರೇಸ್ ಹಿರಿಯ ನಾಯಕಿ ಸೋನಿಯಾ ಗಾಂಧಿಯ ವಿರುದ್ದ ಶಿವಮೊಗ್ಗ ಜಿಲ್ಲೆಯ ಸಾಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ಪ್ರಧಾನಿಯ ಕಾರ್ಯವೈಖರಿಯನ್ನು ಟ್ವಿಟರ್ ನಲ್ಲಿ ಟೀಕಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಂಗ್ರೇಸ್ ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿಯನ್ನು ಅವಹೇಳನ ಮಾಡಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯ ವಕೀಲ ಕೆ.ವಿ.ಪ್ರವೀಣ್‌ಕುಮಾರ್‌ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. ಮೋದಿ ಅವರು ಪಿಎಂ ಕೇರ್ಸ್‌ ನಿಧಿಯನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ. ಇದು ಬಡ …

ಬಿತ್ತು ಸೋನಿಯಾಗಾಂಧಿ ಮೇಲೆ ಶಿವಮೊಗ್ಗದಲ್ಲಿ FIR | ಮೋದಿ ಅವರು ಪಿಎಂ ಕೇರ್ಸ್‌ ನಿಧಿ ದುರ್ಬಳಕೆ ಆರೋಪದ ಹಿನ್ನೆಲೆ Read More »

ಆಶ್ರಯ ಫೌಂಡೇಶನ್ ಸುಳ್ಯ ಇದರ ರಮ್ಜಾನ್ ತಿಂಗಳ ವಿಶೇಷ ಭೋಜನ ವ್ಯವಸ್ಥೆ ಹಾಗೂ ಗಂಜಿ ವಿತರಣಾ ಕಾರ್ಯಕ್ರಮದ ಸಮಾರೋಪ

ಆಶ್ರಯ ಫೌಂಡೇಶನ್ ಸುಳ್ಯ ಇದರ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿನಿಂದ ಲಾಕ್ ಡೌನ್ ಸಂದರ್ಭದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿ ಬಡ ಕೂಲಿ ಕಾರ್ಮಿಕರಿಗೆ ನಿರಾಶ್ರಿತರಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ದಾನಿಗಳ ಸಹಕಾರವನ್ನು ಪಡೆದು ನೀಡುವ ಮೂಲಕ ಸಹಾಯಹಸ್ತವನ್ನು ನೀಡುತ್ತಾ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಪವಿತ್ರ ರಂಜಾನ್ ತಿಂಗಳ ಆರಂಭಗೊಂಡ ಹಿನ್ನೆಲೆಯಲ್ಲಿ ವಿಶ್ವ ದಿಂದಲೇ ಕೊರೋನ ಮಹಾಮಾರಿ ನಿರ್ಮೂಲನೆ ಗೊಂಡು ವಿಶ್ವಶಾಂತಿ ಬೆಳಗಲಿ ಎಂಬ ಪ್ರಾರ್ಥನೆಯೊಂದಿಗೆ ನಗರದ ವಿವಿಧ ವಾರ್ಡುಗಳಲ್ಲಿ ರಂಜಾನ್ ವೃತ ದಾರಿಗಳಿಗೆ ಗಂಜಿಯನ್ನು ವಿತರಿಸುವ …

ಆಶ್ರಯ ಫೌಂಡೇಶನ್ ಸುಳ್ಯ ಇದರ ರಮ್ಜಾನ್ ತಿಂಗಳ ವಿಶೇಷ ಭೋಜನ ವ್ಯವಸ್ಥೆ ಹಾಗೂ ಗಂಜಿ ವಿತರಣಾ ಕಾರ್ಯಕ್ರಮದ ಸಮಾರೋಪ Read More »

ಮಹಾರಾಷ್ಟ್ರಗಡಿಯಲ್ಲಿ ಸಿಲುಕಿಕೊಂಡ ಗರ್ಭಿಣಿ ಸಹಿತ 300 ಜನರ ನೆರವಿಗೆ ಧಾವಿಸಿದ ಹರೀಶ್ ಪೂಂಜಾ | ಮುಖ್ಯಮಂತ್ರಿಯನ್ನು ಭೇಟಿಯಾಗಿ ಅವರನ್ನು ಕರೆತರುವಲ್ಲಿ ಯಶಸ್ವಿ ಕಾರ್ಯಾಚರಣೆ

ಬೆಳ್ತಂಗಡಿ: ಜನರ ಹಿತವೇ ತನ್ನ ಹಿತವೆಂದು ದುಡಿಯುತ್ತಿರುವ ಶಾಸಕರಾದ‌ ಹರೀಶ್ ಪೂಂಜ ಅವರು ಸಂಕಷ್ಟಕ್ಕೆ ಸಿಲುಕಿದ್ದ ಜನರ ಸಮಸ್ಯೆಗೆ ಕಿವಿಗೊಟ್ಟು ಪರಿಹಾರ ಒದಗಿಸಿದ್ದಾರೆ. ಪೂಂಜರವರು ಮತ್ತೊಮ್ಮೆ ತಮ್ಮ ರಾಪಿಡ್ ರೆಸ್ಪಾನ್ಸ್ ಗೆ ಸುದ್ದಿಯಲ್ಲಿದ್ದಾರೆ. ಘಟನಾ ವಿವರ:ಮುಂಬೈ ನ ಮಹಿಳಾ ಏಜೆಂಟ್ ಒಬ್ಬರ ವಂಚನೆಯಿಂದ ಪಾಸ್ ಇಲ್ಲದೆ ಮುಂಬೈನಿಂದ ಹೊರಟು ಕರಾವಳಿಗೆ ಆಗಮಿಸುತ್ತಿದ್ದ ಏಳು ತಿಂಗಳ ಗರ್ಭಿಣಿ, 10 ತಿಂಗಳ ಮಗು ಸೇರಿದಂತೆ ಸುಮಾರು 32 ಮಂದಿ ಬೆಳಗಾವಿಯ ನಿಪ್ಪಾಣಿಯಲ್ಲಿ ಸಂಕಷ್ಟ ಪಡುತ್ತಿದ್ದರು. ಲಾಕ್ ಡೌನ್ ಸಮಯದಲ್ಲಿ ಮುಂಬೈನಲ್ಲಿ …

ಮಹಾರಾಷ್ಟ್ರಗಡಿಯಲ್ಲಿ ಸಿಲುಕಿಕೊಂಡ ಗರ್ಭಿಣಿ ಸಹಿತ 300 ಜನರ ನೆರವಿಗೆ ಧಾವಿಸಿದ ಹರೀಶ್ ಪೂಂಜಾ | ಮುಖ್ಯಮಂತ್ರಿಯನ್ನು ಭೇಟಿಯಾಗಿ ಅವರನ್ನು ಕರೆತರುವಲ್ಲಿ ಯಶಸ್ವಿ ಕಾರ್ಯಾಚರಣೆ Read More »

ಆನ್ ಲೈನ್ ನಲ್ಲಿ ದೇವರ ದರ್ಶನ, ಪೂಜೆ…..! ಮುಜರಾಯಿ ಇಲಾಖೆ ನಿರ್ಧಾರ

ಬೆಂಗಳೂರು: ಕಾಲ ಎಷ್ಟು ಮುಂದುವರಿಯುತ್ತಿದೆ ಎಂದರೆ ಆನ್ಲೈನ್ ವ್ಯವಹಾರದ ಮೂಲಕ ಇಂದಿಗೆ ಎಲ್ಲಾ ಸೌಕರ್ಯಗಳು ನಮ್ಮ ಕಾಲು ಬುಡಕ್ಕೆ ಬರುತ್ತಿವೆ. ಅಚ್ಚರಿಯ ವಿಷಯವೆಂದರೆ ಇದೀಗ ದೇವರ ದರ್ಶನ, ಪೂಜಾ ಕೈಂಕರ್ಯಗಳನ್ನು ಆನ್‌ಲೈನ್‌ ಮೂಲಕ ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ.ಕೊರೊನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳು ಬಾಗಿಲು ಮುಚ್ಚಿದ್ದು, ದೇವರ ದರ್ಶನವನ್ನು ನಿರ್ಬಂಧಿಸಲಾಗಿದೆ. ಹೀಗಾಗಿ, ಭಕ್ತರಿಗೆ ಆನ್‌ಲೈನ್‌ ಮೂಲಕ ವ್ಯವಸ್ಥೆ ಕಲ್ಪಿಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ.ಆನ್‌ಲೈನ್‌ ನೇರ ಪ್ರಸಾರಕ್ಕೆ ಸಂಬಂಧಿಸಿದಂತೆ ಇಲಾಖೆಯ ಆಯುಕ್ತರು ಎಲ್ಲಾ …

ಆನ್ ಲೈನ್ ನಲ್ಲಿ ದೇವರ ದರ್ಶನ, ಪೂಜೆ…..! ಮುಜರಾಯಿ ಇಲಾಖೆ ನಿರ್ಧಾರ Read More »

error: Content is protected !!
Scroll to Top