ಆಶ್ರಯ ಫೌಂಡೇಶನ್ ಸುಳ್ಯ ಇದರ ರಮ್ಜಾನ್ ತಿಂಗಳ ವಿಶೇಷ ಭೋಜನ ವ್ಯವಸ್ಥೆ ಹಾಗೂ ಗಂಜಿ ವಿತರಣಾ ಕಾರ್ಯಕ್ರಮದ ಸಮಾರೋಪ

ಆಶ್ರಯ ಫೌಂಡೇಶನ್ ಸುಳ್ಯ ಇದರ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿನಿಂದ ಲಾಕ್ ಡೌನ್ ಸಂದರ್ಭದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿ ಬಡ ಕೂಲಿ ಕಾರ್ಮಿಕರಿಗೆ ನಿರಾಶ್ರಿತರಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ದಾನಿಗಳ ಸಹಕಾರವನ್ನು ಪಡೆದು ನೀಡುವ ಮೂಲಕ ಸಹಾಯಹಸ್ತವನ್ನು ನೀಡುತ್ತಾ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಪವಿತ್ರ ರಂಜಾನ್ ತಿಂಗಳ ಆರಂಭಗೊಂಡ ಹಿನ್ನೆಲೆಯಲ್ಲಿ ವಿಶ್ವ ದಿಂದಲೇ ಕೊರೋನ ಮಹಾಮಾರಿ ನಿರ್ಮೂಲನೆ ಗೊಂಡು ವಿಶ್ವಶಾಂತಿ ಬೆಳಗಲಿ ಎಂಬ ಪ್ರಾರ್ಥನೆಯೊಂದಿಗೆ ನಗರದ ವಿವಿಧ ವಾರ್ಡುಗಳಲ್ಲಿ ರಂಜಾನ್ ವೃತ ದಾರಿಗಳಿಗೆ ಗಂಜಿಯನ್ನು ವಿತರಿಸುವ ಮೂಲಕ ಸೇವೆಯನ್ನು ಸಲ್ಲಿಸುತ್ತಿದ್ದರು.
ಇದೀಗ ರಂಜಾನ್ ತಿಂಗಳ 27 ನೇ ದಿನದ ಅಂಗವಾಗಿ ಸ್ಥಳೀಯ ಪರಿಸರದ ನೂರಾರು ನಿವಾಸಿಗಳಿಗೆ ದಾನಿಗಳ ಸಹಕಾರದಿಂದ ಭೋಜನದ ವ್ಯವಸ್ಥೆಯನ್ನು ನೀಡಿ ನಿರಂತರವಾಗಿ ನಡೆಸಿಕೊಂಡು ಬಂದಂತಹ ಈ ಕಾರ್ಯಕ್ರಮಕ್ಕೆ ಸಮಾರೋಪ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಅನ್ಸಾರಿಯ ಜುಮಾ ಮಸ್ಜಿದ್ ನ ಖತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ದಾಳ ವಿಶೇಷ ದುವಾ ಪ್ರಾರ್ಥನೆಯನ್ನು ನೆರವೇರಿಸಿದರು. ಆಶ್ರಯ ಪೌಂಡೇಶನ್ ಎಲ್ಲಾ ಸದಸ್ಯರು ಹಾಗೂ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.

ವರದಿ: ಹಸೈನಾರ್ ಜಯನಗರ

Leave A Reply

Your email address will not be published.