ಬಿತ್ತು ಸೋನಿಯಾಗಾಂಧಿ ಮೇಲೆ ಶಿವಮೊಗ್ಗದಲ್ಲಿ FIR | ಮೋದಿ ಅವರು ಪಿಎಂ ಕೇರ್ಸ್‌ ನಿಧಿ ದುರ್ಬಳಕೆ ಆರೋಪದ ಹಿನ್ನೆಲೆ

ಸಾಗರ: ಕಾಂಗ್ರೇಸ್ ಹಿರಿಯ ನಾಯಕಿ ಸೋನಿಯಾ ಗಾಂಧಿಯ ವಿರುದ್ದ ಶಿವಮೊಗ್ಗ ಜಿಲ್ಲೆಯ ಸಾಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ಪ್ರಧಾನಿಯ ಕಾರ್ಯವೈಖರಿಯನ್ನು ಟ್ವಿಟರ್ ನಲ್ಲಿ ಟೀಕಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೇಸ್ ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿಯನ್ನು ಅವಹೇಳನ ಮಾಡಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯ ವಕೀಲ ಕೆ.ವಿ.ಪ್ರವೀಣ್‌ಕುಮಾರ್‌ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

ಮೋದಿ ಅವರು ಪಿಎಂ ಕೇರ್ಸ್‌ ನಿಧಿಯನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ. ಇದು ಬಡ ಜನರ ಉಪಯೋಗಕ್ಕೆ ಬರುತ್ತಿಲ್ಲ ಎಂದು ಸೋನಿಯಾ ಅವರು, ಮೇ. 11 ರಂದು ಟ್ವೀಟ್‌ ಮಾಡಿದ್ದರು ಎಂದು ಪ್ರವೀಣ್ ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಐಎನ್‌ಸಿ ಇಂಡಿಯಾ ಎನ್ನುವ ಟ್ವಿಟ್ಟರ್‌ ಖಾತೆಯಿಂದ ಹೊರಟ ಈ ಸಂದೇಶ ಜನರಲ್ಲಿ ಪ್ರಧಾನಿ ವಿರುದ್ಧ ಅಪನಂಬಿಕೆಯನ್ನು ಉಂಟು ಮಾಡುತ್ತದೆ. ಅವರನ್ನು ಎತ್ತಿಕಟ್ಟುವ ದುರುದ್ದೇಶದಿಂದ ಇಂಥ ಮಾತುಗಳನ್ನು ಬರೆಯಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.