ಮಹಾರಾಷ್ಟ್ರಗಡಿಯಲ್ಲಿ ಸಿಲುಕಿಕೊಂಡ ಗರ್ಭಿಣಿ ಸಹಿತ 300 ಜನರ ನೆರವಿಗೆ ಧಾವಿಸಿದ ಹರೀಶ್ ಪೂಂಜಾ | ಮುಖ್ಯಮಂತ್ರಿಯನ್ನು ಭೇಟಿಯಾಗಿ ಅವರನ್ನು ಕರೆತರುವಲ್ಲಿ ಯಶಸ್ವಿ ಕಾರ್ಯಾಚರಣೆ

ಬೆಳ್ತಂಗಡಿ: ಜನರ ಹಿತವೇ ತನ್ನ ಹಿತವೆಂದು ದುಡಿಯುತ್ತಿರುವ ಶಾಸಕರಾದ‌ ಹರೀಶ್ ಪೂಂಜ ಅವರು ಸಂಕಷ್ಟಕ್ಕೆ ಸಿಲುಕಿದ್ದ ಜನರ ಸಮಸ್ಯೆಗೆ ಕಿವಿಗೊಟ್ಟು ಪರಿಹಾರ ಒದಗಿಸಿದ್ದಾರೆ. ಪೂಂಜರವರು ಮತ್ತೊಮ್ಮೆ ತಮ್ಮ ರಾಪಿಡ್ ರೆಸ್ಪಾನ್ಸ್ ಗೆ ಸುದ್ದಿಯಲ್ಲಿದ್ದಾರೆ.

ಘಟನಾ ವಿವರ:
ಮುಂಬೈ ನ ಮಹಿಳಾ ಏಜೆಂಟ್ ಒಬ್ಬರ ವಂಚನೆಯಿಂದ ಪಾಸ್ ಇಲ್ಲದೆ ಮುಂಬೈನಿಂದ ಹೊರಟು ಕರಾವಳಿಗೆ ಆಗಮಿಸುತ್ತಿದ್ದ ಏಳು ತಿಂಗಳ ಗರ್ಭಿಣಿ, 10 ತಿಂಗಳ ಮಗು ಸೇರಿದಂತೆ ಸುಮಾರು 32 ಮಂದಿ ಬೆಳಗಾವಿಯ ನಿಪ್ಪಾಣಿಯಲ್ಲಿ ಸಂಕಷ್ಟ ಪಡುತ್ತಿದ್ದರು.

ಲಾಕ್ ಡೌನ್ ಸಮಯದಲ್ಲಿ ಮುಂಬೈನಲ್ಲಿ ಸಂಕಷ್ಟಕ್ಕೀಡಾಗಿದ್ದ ಒಂದಷ್ಟು ತುಳುನಾಡು ಮೂಲದ ಕನ್ನಡಿಗರು ಮಹಿಳಾ ಏಜೆಂಟ್ ಒಬ್ಬರ ಸಹಾಯದಿಂದ ಟಿಕೆಟ್ ಬುಕ್ ಮಾಡಿ ಹಣ ಪಾವತಿಸಿ ಮುಂಬೈನಿಂದ ದಕ್ಷಿಣ ಕನ್ನಡ ಮತ್ತು ಉಡುಪಿಗೆ ಹೊರಟಿದ್ದರು. ಸ್ವತಃ ಎಜೆಂಟರ್ ತಾನು ಸೇವಾ ಸಿಂಧೂ ಮೂಲಕ ಪಾಸ್ ಪಡೆದಿರುವ ಬಗ್ಗೆ ಪ್ರಯಾಣಿಕರಿಗೆ ತಿಳಿಸಿದ್ದಳು. ಬಳಿಕ ಮುಂಬೈನಿಂದ ಹೊರಟಿದ್ದ ಬಸ್ ಬೆಳಗಾವಿಯ ನಿಪ್ಪಾಣಿ ಟೋಲ್ ಗೇಟ್ ಸಮೀಪ ತಲುಪುತ್ತಿದ್ದಂತೆ ಬಸ್ ತಡೆಯಲಾಗಿದೆ. ಈ ಸಂದರ್ಭದಲ್ಲಿ ಸೇವಾ ಸಿಂಧೂ ಆಪ್ ನಲ್ಲಿ ನೋಂದಣಿ ಮಾಡಿರುವ ಪಾಸ್ ಬಗ್ಗೆ ವಿಚಾರಿಸಿದಾಗ. ಪಾಸ್ ಇಲ್ಲ ಎಂದು ಚಾಲಕ ತಿಳಿಸಿದ್ದಾನೆ. ಇದರಿಂದಾಗಿ ಟೋಲ್ ಗೇಟ್ ನಲ್ಲಿ ಬಸ್ ತಡೆಯಲಾಗಿದೆ.

ಯಾರೋ ಮಾಡಿದ ತಪ್ಪಿಗೆ ಬಲಿಯಾಗಿ ಕಳೆದ ಎರಡು ದಿನಗಳಿಂದ ನಿಪ್ಪಾಣಿಯಲ್ಲಿ ಸಿಲುಕಿ ಹಾಕಿಕೊಂಡಿದ್ದವರ ಸುದ್ದಿ ತಿಳಿದ ತಕ್ಷಣ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿ, ಅಲ್ಲಿರುವ ಜನರ ಸಮಸ್ಯೆಗಳ ಕುರಿತಾಗಿ ಮನವರಿಕೆ ಮಾಡಿ, ಅವರ ಕ್ಷೇಮ ಕಾಪಾಡುವಂತೆ ಮನವಿ ಮಾಡಿಕೊಂಡರು.

ಜತೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸುದ್ದಿ ತಿಳಿಸಿದರು. ಸಚಿವರು ಬೆಳಗಾವಿ, ಉಡುಪಿ, ದ.ಕ. ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ್ದು,‌ ಅವರೂ ಕೂಡ ಸಚಿವರಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ.
ಇದೀಗ ಶಾಸಕರು, ಸಚಿವರು ಮತ್ತು ಜಿಲ್ಲಾಧಿಕಾರಿಗಳ ಮುತುವರ್ಜಿಯಿಂದ ಇದೀಗ 300 ರಷ್ಟು ದೊಡ್ಡ ಸಂಖ್ಯೆಯ ಸಂಕಷ್ಟದಲ್ಲಿದ್ದವರು ಇದೀಗ ಊರಿಗೆ ಮರಳುತ್ತಿದ್ದಾರೆ. ಈಗಾಗಲೇ ಒಂದು ಬಸ್ಸು ಅಂಕೋಲಾ ತಲುಪಿ ಮುಂದಕ್ಕೆ ಬರುತ್ತಿದೆ.

ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಈ ಕಾರ್ಯಕ್ಕೆ ಪ್ರಯಾಣಿಕರು ಅಭಾರಿಯಾಗಿದ್ದಾರೆ.

Leave A Reply

Your email address will not be published.