ಕಾನೂನು ಸಚಿವರ ಮೇಲೆ ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ | ಮಾಧುಸ್ವಾಮಿ ಮೇಲೆ ಸಿಎಂ ಗರಂ

ಬೆಂಗಳೂರು: ಕೋಲಾರದಲ್ಲಿ ರೈತ ಮಹಿಳೆಗೆ ಏ ಬಾಯಿ ಮುಚ್ಚು, ರಾಸ್ಕಲ್ ಎಂದು ಹೇಳಿ ತೀವ್ರ ವಿವಾದಕ್ಕೆ ಸಿಲುಕಿದ್ದ ಕಾನೂನು ಮಂತ್ರಿ ಮಾಧುಸ್ವಾಮಿಯವರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಮಾಧುಸ್ವಾಮಿ ರೈತ ಮಹಿಳೆಗೆ ಆ ರೀತಿ ವರ್ತಿಸಿದ್ದು ಬಹಳ ದೊಡ್ಡ ತಪ್ಪು, ಸಿಟ್ಟು ಬಂದಿದೆ ಅಂತಾ ಏನ್ ಬೇಕಾದ್ರೂ ಮಾತನಾಡೋದು ಸರಿಯಲ್ಲ. ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ವರ್ತಿಸಬಾರದು.

ಈಗಾಗಲೇ ಈ ಸಂಬಂಧ ಮಾಧುಸ್ವಾಮಿಗೆ ಎಚ್ಚರಿಕೆ ಕೊಟ್ಟಿದ್ದೇನೆ. ಜೊತೆಗೆ ರೈತ ಮಹಿಳೆಯನ್ನು ಕರೆದು ಸಮಾಧಾನದ ಮಾತನ್ನು ಹೇಳುತ್ತೇನೆ ಎಂದು ಹೇಳಿದರು.

Leave A Reply

Your email address will not be published.