ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಧಾರ್ಮಿಕ ಮುಖಂಡ ಕಾವು ಹೇಮನಾಥ ಶೆಟ್ಟಿಯವರಿಂದ 1500 ಕಿಟ್ ವಿತರಣೆ

ಪುತ್ತೂರು : ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಧಾರ್ಮಿಕ ಮುಖಂಡ ಕಾವು ಹೇಮನಾಥ ಶೆಟ್ಟಿಯವರು ಕೊರೋನ ಸಂಕಷ್ಟದಿಂದ ತೊಂದರೆಗೊಳಗಾದ ಸುಮಾರು 1500 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.

ಒಟ್ಟು 1500 ಕುಟುಂಬಗಳಿಗೆ ಕಿಟ್ ವಿತರಣೆ ಕಾರ್ಯ ನಡೆದಿದ್ದು ಇನ್ನುಳಿದ ಆಯ್ದ ಕುಟುಂಬಗಳಿಗೆ  ಈ ವಾರಾಂತ್ಯದಲ್ಲಿ ಕಿಟ್ ವಿತರಣೆ ನಡೆಯಲಿದೆ. ಅಲ್ಲದೇ 1500 ಕುಟುಂಬಗಳಲ್ಲಿ 500 ಕ್ಕೂ ಅಧಿಕ ಮುಸ್ಲೀಂ ಬಾಂಧವರ ಕುಟುಂಬಗಳಿಗೆ ವಿಶೇಷ ರಂಜಾನ್ ಕಿಟ್ ವಿತರಣೆ ಮಾಡಿದ್ದಾರೆ. ಸುಮಾರು 5.5 ಲಕ್ಷ ವೆಚ್ಚದ ಕಿಟ್ ಗಳನ್ನು ವಿವರಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಹೇಮನಾಥ ಶೆಟ್ಟಿ ಅವರು ಕೋರೋನಾ ಎಲ್ಲರಿಗೂ ಸಂಕಷ್ಟವನ್ನು ತಂದಿದೆ. ಈ ನಡುವೆ ಬಡಜನರು ಬಹಳಷ್ಟು ತೊಂದರೆ ಅನುಭವಿಸಿದ್ದಾರೆ. ಸುಮಾರು 1500  ಕುಟುಂಬಗಳಿಗೆ ನಮ್ಮ ಕುಟುಂಬದ ಎಲ್ಲರ ಸಹಕಾರದೊಂದಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಿದ್ದೇವೆ. ಯಾರಿಗೆ ಆಹಾರ ಸಾಮಗ್ರಿಗಳ ಅಗತ್ಯತೆ ಇದೆಯೋ ಅಂತಹ ಕುಟುಂಬಗಳನ್ನು ಹುಡುಕಿ ಕೊಟ್ಟಿದ್ದೇವೆ. ಮನಸ್ಸಿಗೆ ಒಂದು ನೆಮ್ಮದಿ, ತೃಪ್ತಿ ಸಿಕ್ಕಿದೆ. ಕೋರೋನಾ ಆದಷ್ಟು ಬೇಗ ದೂರವಾಗಲಿ ಎನ್ನುವುದೇ ನಮ್ಮ ಆಶಯ ಎಂದರು.

Leave A Reply

Your email address will not be published.