ಸುಳ್ಯ |ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಸ್ಯಾನಿಟೈಝರ್ ಹಾಗು ಮಾಸ್ಕ್ ವಿತರಣೆ

ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಕಛೇರಿಗೆ ಸ್ಯಾನಿಟೈಝರ್ , ಗ್ಲೌಸ್ ಹಾಗು ಮಾಸ್ಕ್ ಗಳನ್ನು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ನೀಡಲಾಯಿತು.

ಕೊರೊನಾ ವಾರಿಯರ್ಸ್‌ಗಳಿಗೆ ನೆರವು ನೀಡುವ ಸಲುವಾಗಿ ಬೀಜದಕಟ್ಟೆ ಇಂಡಸ್ಟ್ರೀಸ್ ವ್ಯವಸ್ಥಾಪಕರು ಹಾಗು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಸದಸ್ಯರು ಆದ ರಹೀಂ ಬೀಜದಕಟ್ಟೆಯವರು ಸುಳ್ಯ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ರವರಿಗೆ ಸ್ಯಾನಿಟೈಝರ್ , ಗ್ಲೌಸ್ ಹಾಗು ಮಾಸ್ಕ್ ಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಸದಸ್ಯರಾದ ಸಲೀಂ ಪೆರುಂಗೋಡಿಯವರು ಪಾಲ್ಗೊಂಡಿದ್ದರು.

Leave A Reply

Your email address will not be published.