ಲಾಕ್ ಡೌನ್ ಸಡಿಲಿಸಿದರೂ ಮದ್ಯಾಹ್ನ 2 ಗಂಟೆ ತನಕ ಮಾತ್ರ ವ್ಯಾಪಾರ | ಮಾದರಿಯಾದ ಪುಣಚದ ವರ್ತಕರು
ಪುಣಚ: ವ್ಯಾಪಾರಕ್ಕಿಂತ ಜನತೆಯ ಆರೋಗ್ಯವೇ ಮುಖ್ಯ ಎಂಬಂತೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಎಲ್ಲಾ ವರ್ತಕರು ಸ್ವಯಂಪ್ರೇರಿತವಾಗಿ ನಾಳೆಯಿಂದ ಸಮಯ ಬೆಳಿಗ್ಗೆ 7 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿಗಳನ್ನು ತೆರೆಯುವ ಬಗ್ಗೆ ನಂತರ ಬಂದ್ ಮಾಡುವ ಬಗ್ಗೆ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ.
ಈ ನಿರ್ಧಾರ ಇತರ ವ್ಯಾಪಾರ ವರ್ಗಕ್ಕೆ ಮಾದರಿಯಾಗಿದೆ.
ಪ್ರಸ್ತುತ ಕೋರೋನಾ ವೈರಸ್ ರೋಗದಿಂದ ಲಾಕ್ ಡೌನ್ ಇದ್ದು ಇದರ ನಡುವೆ ಮೇ 4 ರಿಂದ ನಂತರದ ದಿನಗಳಲ್ಲಿ ದ.ಕ.ಜಿಲ್ಲೆಯಲ್ಲಿ ಜಿಲ್ಲಾಡಳಿತ ಲಾಕ್ ಡೌನ್ ಸಡಿಲ ಮಾಡಿಕೊಂಡು ಬೆಳಿಗ್ಗೆ ಸಮಯ 7 ರಿಂದ ರಾತ್ರಿ 7 ರ ತನಕ ಜನ ಸಾಮಾನ್ಯರ ಒಡಾಟಕ್ಕೆ ರಿಯಾಯಿತಿ ಮತ್ತು ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಆ ನಂತರದ ದಿನಗಳಲ್ಲಿ ಜಿಲ್ಲೆಯಾದ್ಯಂತ 3 ಪಾಸಿಟಿವ್ ಪ್ರಕರಣ ಕಂಡಿದೆ ಇದರಿಂದಾಗಿ ಜನಸಾಮಾನ್ಯರು ಇನ್ನಷ್ಟು ಭಯಭೀತರಾಗಿದ್ದಾರೆ.
ಮತ್ತು ಜಿಲ್ಲಾಡಳಿತದ ಸಡಿಲ ರಿಯಾಯಿತಿ ನಡುವೆ ಜನಸಾಮಾನ್ಯರು ಸರಿಯಾಗಿ ಸಾಮಾಜಿಕ ಅಂತರ ಕಾಪಡದೇ ಮಾಸ್ಕ್ ಧರಿಸದೇ ಇಡೀ ಒಡಾಟ ನಡೆಸಿದ್ದರು ಇವೆಲ್ಲ ವಿಚಾರಗಳನ್ನು ಗಮನಿಸಿಕೊಂಡು ಈಗಾಗಲೇ ಸ್ಥಳೀಯ ಗ್ರಾಮ ಪಂಚಾಯತಿಗೆ ಮಾಹಿತಿಯನ್ನು ನೀಡಿದ್ದಾರೆ.
ಒಟ್ಟಿನಲ್ಲಿ ಲಾಕ್ ಡೌನ್ ಸಂಪೂರ್ಣವಾಗಿ ಸಡಿಲಿಕೆ ಆಗುವಷ್ಟು ದಿನ ಈ ತೀರ್ಮಾನವನ್ನು ಪುಣಚದ ಎಲ್ಲಾ ವರ್ತಕರು ಸ್ವಯಂಪ್ರೇರಿತವಾಗಿ ತೆಗೆದುಕೊಂಡಿರುವುದು ಶಾಘ್ಲನೀಯ ಮತ್ತು ಸಮಾಜಕ್ಕೆ ಇತರೆ ಗ್ರಾಮಗಳಿಗೆ ಉತ್ತಮ ಸಂದೇಶವನ್ನು ಸಾರಿದೆ ಎಂಬುದರಲ್ಲಿ ಎರಡು ಮಾತಿಲ್ಲ.