ಬೆಳ್ತಂಗಡಿಯ ಬಂದಾರು, ಮುಗೇರಡ್ಕ ಇತ್ಯಾದಿ ಪ್ರದೇಶಗಳಲ್ಲಿ ಗಾಳಿ ಮಳೆಯಿಂದ ತೀವ್ರ ಹಾನಿ

ವರದಿ : ಜೈ ಶ್ರೀ ರಾಮ ಫ್ರೆಂಡ್ಸ್, ಅಲೆಕ್ಕಿ

ನಿನ್ನೆ ದಕ್ಷಿಣ ಕನ್ನಡದಾದ್ಯಂತ ಮಳೆ ಸುರಿದಿದೆ. ನಿನ್ನೆ ಸಂಜೆ ಬಿದ್ದ ಅಡ್ಡ ಮಳೆಗೆ ಬೆಳ್ತಂಗಡಿ ತಾಲ್ಲೂಕಿನಲ್ಲಿ ದೊಡ್ಡ ಪ್ರಮಾಣದ ಹಾನಿಯಾಗಿದೆ. ಹಲವು ಮರಗಳು ರಸ್ತೆಗೆ ಅಡ್ಡಡ್ಡ ಮಲಗಿವೆ.

ಬಂದಾರು ಮುಗೇರಡ್ಕ ರಸ್ತೆ ದೊಡ್ಡ ದೊಡ್ಡ ಮರಗಳು ಬಿದ್ದು ಕಂಪ್ಲೀಟ್ ಬ್ಲಾಕ್ ಆಗಿದೆ.
ಬಂದರಿನಲ್ಲಿ ಲಕ್ಷದ ಮೇಲೆ ಮರ ಬಿದ್ದು ಆಟೋರಿಕ್ಷಾ ಜಖಂ ಆಗಿದೆ ಪ್ರಾಥಮಿಕ ಶಾಲೆಯ ಹೆಂಚುಗಳು ಹಾರಿಹೋಗಿತ್ತು ಮಾಡಿನ ಮೇಲೆ ಗೆಲ್ಲು ಬಿದ್ದು ಭಾಗಶಃ ಹಾನಿಯಾಗಿವೆ. ಅದೇ ಶಾಲೆಯ ಶೌಚಾಲಯದ ಸೀಟುಗಳು ಗಾಳಿ ಎಗರಿ ಹೋಗಿವೆ. ಸುತ್ತಮುತ್ತಲ ಹಲವು ಮನೆಗಳು ಗಾಳಿ ತೀವ್ರತೆಗೆ ಮತ್ತು ಮರಗಳು ಬಿದ್ದು ಹಾನಿಯಾಗಿದೆ ಎಲೆಕ್ಟ್ರಿಕ್ ಕಂಬಗಳು ಧರೆಗುರುಳಿವೆ.

ತೆರವು ಕಾರ್ಯಾಚರಣೆ
ಸೇವೆಯಲ್ಲಿ ಜವನೆರ್

ಬಂದಾರು ಮುಗೇರಡ್ಕ ಭಾಗದಲ್ಲಿ ಕೃಷಿಗೆ ತೀವ್ರ ಹಾನಿಯಾಗಿದೆ ಅಡಿಕೆ ತೆಂಗಿನ ಮರಗಳು ಬುಡಸಮೇತ ಬಿದ್ದುಕೊಂಡಿವೆ.

ರೈತನಿಗೆ ವರುಷ ಗಾಳಿಗೆ ನಿಮಿಷ

ಕುಪ್ಪೆಟ್ಟಿ, ಉರುವಾಲು ಪದವು , ಪದ್ಮುಂಜ,ಮೈರೋಳ್ತಡ್ಕ, ಬಂದಾರು,ಮುಗೇರಡ್ಕ, ಮುರ ಮುಂದಾಗದೆ ಬಿರುಸಿನ ಗಾಳಿ,ಮಳೆಗೆ ಹಲವಾರು ಕಡೆ ಮರಗಳು ಬಿದ್ದು ವಿದ್ಯುತ್  ವ್ಯತ್ಯಯವಾಗಿದೆ.

ಇದಕ್ಕೆ ನಾಗರಿಕರು ಎಚ್ಚೆತ್ತು ತಮಗೆ ಸಂಬಂಧಿಸಿದ ವಿದ್ಯುತ್ ಕಂಬಗಳಿಗೆ ಬಿದ್ದ ಮರಗಳನ್ನು  ಅದಕ್ಕೆ ಸಂಬಂಧಪಟ್ಟವರು ಮಧ್ಯಾಹ್ನ 02 ಗಂಟೆಯ ಒಳಗೆ ತೆರವು ಕಾರ್ಯ‌ ಮಾಡಬೇಕಾಗಿ ವಿನಂತಿಯನ್ನು ಕೆಇಬಿ ಮಾಡಿಕೊಂಡಿದೆ.

ಶ್ರೀರಾಮ್ ಫ್ರೆಂಡ್ಸ್ ಕ್ಲಬ್, ಅಲೆಕ್ಕಿ ಇದರ ಸದಸ್ಯರು ರಾತ್ರಿಯೇ ಕಾರ್ಯಾಚರಣೆಗಿಳಿದಿದ್ದು ಹಲವು ಮನೆಗಳನ್ನು ಭೇಟಿ ಮಾಡಿ ಅಲ್ಲಿ ಕೆಲವು ಕಾರ್ಯ ಕೈಗೊಂಡಿದ್ದಾರೆ ಅಲ್ಲದೆ ಮುಗೆರಡ್ಕ ಬಂದರು ರಸ್ತೆಯ ತೆರವು ಕಾರ್ಯ ಇತರ ಸಾರ್ವಜನಿಕರ ಸಹಾಯದೊಂದಿಗೆ ನಡೆದಿದೆ.

ಹಾನಿಯ ತೀವ್ರತೆಯ ಕಾರಣದಿಂದ ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರು ಹಾನಿಗೊಳಗಾದ ಪ್ರದೇಶಗಳನ್ನು ಇವತ್ತು ಭೇಟಿಯಾಗುವ ಸಂಭವವಿದೆ.

Leave A Reply

Your email address will not be published.