ಲೂಡೋ ಆಟದಲ್ಲಿ ಸತತವಾಗಿ ಸೋಲಿಸಿದ ಪತ್ನಿಯ ಬೆನ್ನುಮೂಳೆ ಮುರಿದು ಹಾಕಿದ ಪತಿ

ಅಹಮದಾಬಾದ್, ಏಪ್ರಿಲ್ 29 : ಪತಿ ಪತ್ನಿ
ಆನ್‌ಲೈನ್ ನಲ್ಲಿ ಲೂಡೋ ಆಟ ಆಡುತ್ತಿದ್ದರು. ಆಟದಲ್ಲಿ ಆತನನ್ನು ಸತತವಾಗಿ ಸೋಲಿಸಿದ್ದಕ್ಕೆ ಕೋಪಗೊಂಡ ಪತಿ ಪತ್ನಿಯ ಬೆನ್ನು ಮೂಳೆ ಮುರಿದು ಹಾಕಿದ್ದಾನೆ.

ಕೊರೊನಾ ಲಾಕ್‌ಡೌನ್ ಇದ್ದರೂ ಪತಿ ಮನೆಯಿಂದ ಹೊರಗಡೆ ತಿರುಗಾಡಲು ಹೋಗುತ್ತಿದ್ದನು. ಅದಕ್ಕೆ ಪತ್ನಿ ಗಂಡ ಹೊರಗೆ ಹೋಗದಿರಲೆಂದು ಆತನಿಗೆ ಮೊಬೈಲ್ ​ನಲ್ಲಿ ಲೂಡೋ ಗೇಮ್ ಆಡುವುದನ್ನು ಕಲಿಸಿದ್ದಳು. ಆ ನಂತರ ಅವರಿಬ್ಬರೂ ಟೈಂಪಾಸ್​ಗೆಂದು ಆನ್​ಲೈನ್​ನಲ್ಲಿ ಲೂಡೋ ಆಡುತ್ತಿದ್ದರು.

ಆನ್‌ಲೈನ್ ನಲ್ಲಿ ಲೂಡೋ ಆಟದಲ್ಲಿ ಸತತವಾಗಿ ಪತ್ನಿ ಗೆಲ್ಲುತ್ತಿದ್ದಳು. ಅಲ್ಲದೆ, ಗಂಡನನ್ನು ಸೋಲಿಸಿ ಮುಂದೆ ಹೋಗುತ್ತಿದ್ದಳು. ಸೋಲಿನಿಂದ ಕಂಗೆಟ್ಟಿದ್ದ ಆತ ಪತ್ನಿಯ ಜತೆ ಜಗಳ ಆಡುತ್ತಿದ್ದ. ಮೊನ್ನೆ ಇದೇ ಕಾರಣಕ್ಕೆ ಜಗಳ ಶುರುವಾಯಿತು. ಅದು ಅತಿರೇಕಕ್ಕೆ ಹೋಗಿ ಕೋಪಗೊಂಡ ಗಂಡ ಆಕೆಯನ್ನು ಜೋರಾಗಿ ಥಳಿಸಿದ್ದಾನೆ. ಈ ವೇಳೆ ಹೆಂಡತಿಯ ಬೆನ್ನಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಮಹಿಳೆ ನೋವಿನಿಂದ ನರಳುತ್ತಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬೆನ್ನು ಮೂಳೆ ಮುರಿದಿದೆ ಎಂದು ವೈದ್ಯರು ಹೇಳಿದ್ದಾರೆ.

ಮಹಿಳೆ ಗುಜರಾತ್ ಸರ್ಕಾರದ ಅಭಯಮ್ ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಬಂದಿದ್ದರೂ, ಮಹಿಳೆ ಗಂಡನ ವಿರುದ್ಧ ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ. ಟಿಪಿಕಲ್ ಇಂಡಿಯನ್ !

Leave A Reply