ಹೊಳೆಯಲ್ಲಿ ಹುಣಿಸೆ ತೊಳೆದವರು – ಚೋಕ್ಷಿ, ಬಾಬಾ ರಾಮ್ ದೇವ್, ಮಲ್ಯ ಸಹಿತ 50 ಸಂಸ್ಥೆಗಳು | 68,607 ಕೋಟಿ ರೂ ರೈಟಾಫ್

ನವದೆಹಲಿ : RBI ಇದೀಗ ಸುಸ್ತಿದಾರರ  ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಅಗ್ರ 50 ಸಂಸ್ಥೆಗಳ ಹೆಸರುಗಳು ಅದರಲ್ಲಿ ಇವೆ. RTI ಅಡಿಯಲ್ಲಿ ಸಾಕೇತ್ ಗೋಖಲೆ ಎಂಬವರು RBI ನಿಂದ ಒಟ್ಟು ಸುಸ್ತಿದಾರ ಕಂಪನಿಗಳ ಪಟ್ಟಿ ಕೇಳಿದ್ದರು. ಇದೀಗ ಪಟ್ಟಿ ಸಿಕ್ಕಿದ್ದು, 68607 ಕೋಟಿ ರೂಪಾಯಿ ರೈಟ್ ಆಫ್ ಆಗಿರುವ ಮಾಹಿತಿ ಲಭ್ಯವಾಗಿದೆ.

ಈ‌  ಪಟ್ಟಿಯಲ್ಲಿ ಅತಿ ಹೆಚ್ಚು ಸಾಲ ಮನ್ನಾ ಮಾಡಿಸಿಕೊಂಡ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಮೆಹುಲ್ ಚೋಕ್ಸಿ ಮೊದಲ ಸ್ಥಾನದಲ್ಲಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸಾವಿರಾರು ಕೋಟಿ ರೂ. ಸಾಲ ಮರುಪಾವತಿಸದೆ ಬಾರ್ಬಡೋಸ್‌ನ ಆಂಟಿಂಟಿಗುವಾದಲ್ಲಿ ತಲೆಮರೆಸಿಕೊಂಡಿರುವ ಮೆಹುಲ್ ಚೋಕ್ಸಿ ಅವರ ಗೀತಾಂಜಲಿ ಜೆಮ್ಸ್‌ನ 5,492 ಕೋಟಿ ರೂ. ಗಿಲಿ ಇಂಡಿಯಾ ಲಿಮಿಟೆಡ್‌ನ 1,447 ಕೋಟಿ ರೂ. ಹಾಗೂ ನಕ್ಷತ್ರ ಬ್ರಾಂಡ್ಸ್ ನ 1,109 ಕೋಟಿ ರೂ. ಸಾಲ ಮನ್ನಾವಾಗಿದೆ.

ರೈಟ್ ಆಫ್ ಅಂದರೆ ಮನ್ನಾ ಅಲ್ಲ

ನಮಗೆ ಸಾಲಮನ್ನಾ ಗೊತ್ತು. ಲೈಟ್ ಆಫ್ ಅಂದರೆ ಸಾಲಮನ್ನಾ ಅನ್ನುವುದು ಬಹು ಜನರ ನಂಬಿಕೆ. ಒಂದರ್ಥದಲ್ಲಿ ಇದು ಸಾಲಮನ್ನಾ ಆದಂತೆ ಕಂಡರೂ ಅದಕ್ಕಿಂತ ಭಿನ್ನ. ಅಕೌಂಟಿಂಗ್ ಪರಿಭಾಷೆಯಲ್ಲಿ write-off ಮಾಡಿದ ಸಾಲವನ್ನು ಆನಂತರ ಕೂಡ ಸಂಸ್ಥೆಗಳಿಂದ ವಸೂಲಿ ಮಾಡಬಹುದು ಅಂತಹ ವಸೂಲು ಮಾಡಿದ ಹಲವು ಉದಾಹರಣೆಗಳು ನಮ್ಮಲ್ಲಿವೆ.

ಭಾರತದಿಂದ ಪರಾರಿಯಾಗಿ ವಿದೇಶದಲ್ಲಿ ನೆಲೆಸಿರುವ ಮದ್ಯದ ದೊರೆ ವಿಜಯ್ ಮಲ್ಯ ಮತ್ತು ಆಭರಣ ಉದ್ಯಮಿ ಮೆಹುಲ್ ಚೋಕ್ಸಿ ಸೇರಿದಂತೆ ಒಟ್ಟು 50 ಉದ್ಯಮಿಗಳ 68,607 ಕೋಟಿ ರೂ. ವಸೂಲಾಗದ ಸಾಲವನ್ನು ರಿಸರ್ವ್ ಬ್ಯಾಂಕ್ ರೈಟಾಫ್ ಮಾಡಿದೆ.

ಡೈಮಂಡ್ ವರ್ತಕ ಮೆಹಲ್ ಚೋಕ್ಸಿ ಅವರ ಒಡೆತನದ ಕಂಪೆನಿ ಗೀತಾಂಜಲಿ ಜೆಮ್ಸ್ ಈ ಡೀಫಾಲ್ಟ್ ರ್ ಪಟ್ಟಿಯಲ್ಲಿ 5,492 ಕೋಟಿ ರೂ.ಹಾಗೂ ಚೋಕ್ಸಿ ಅವರ ಇತರ ಸಂಸ್ಥೆಗಳು ಗಿಲಿ ಇಂಡಿಯಾ ಮತ್ತು ನಕ್ಷತ್ರ ಬ್ರಾಂಡ್ಗಳು ಸಹ 1,447 ರೂ. ಮತ್ತು 1,109 ಕೋಟಿ ರೂ. ನಾಷ್ಟು ಬಾಕಿ ಉಳಿಸಿಕೊಂಡಿದ್ದು ಈಗ ರೈಟಾಫ್ ಮಾಡಿಕೊಂಡಿವೆ.
ಅವರ ನಂತರ ದ ಸ್ಥಾನದಲ್ಲಿ ರೀ ಅಗ್ರೋ 4,314 ಕೋಟಿ ರೂ. ಮತ್ತು ವಿನ್ಸಂ ಡೈಮೊಂಡ್ ಕಂಪನಿಯು 4,076 ಕೋಟಿ ರೂ. ಬಾಕಿ ಉಳಿಸಿಕೊಂಡ ಕಂಪನಿಗಳು.

ರೋಟೊಮ್ಯಾಕ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್,2850 ಕೋಟಿ ಮತ್ತು ಕುದೋಸ್ ಕೆಮಿ ಯು 2,326 ಕೋಟಿ ರೂ. ಅನ್ನು ಬಾಕಿ ಉಳಿಸಿಕೊಂದದ್ದನ್ನು ಇಲ್ಲಿ ನೆನೆಯಬಹುದು.
ಇದರಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಅವರ ಮಾಲಕತ್ವದ ಪತಂಜಲಿಯಿಂದ 2,212 ಕೋಟಿ ಕೂಡ ಇದೆ ಎಂದು ತಿಳಿದು ಬಂದಿದೆ. ಇನ್ನೂ ಹಲವು ಬಾಕಿದಾರರಿದ್ದು, ಅವರ ಹಣವನ್ನು ಇದೀಗ  RBI ರೈಟ್ ಆಫ್ ಮಾಡಿದೆ.  

ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯವು ಕೆಲವು ಆರೋಪಿತ ವಂಚನೆಗಳನ್ನು ತನಿಖೆ ಮಾಡುತ್ತಿದ್ದಾರೆ.

ಈ ವಿಷಯ ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರದ ಮೇಲೆ ಆರೋಪಗಳನ್ನು ಮಾಡಲಾರಂಭಿಸಿದ್ದಾರೆ. ಲೈಟ್ ಆಫ್ ಮಾಡಿಸಿಕೊಂಡ ಕಂಪನಿಗಳಲ್ಲಿ ಬಾಬಾ ರಾಮದೇವ್ ತರಹದ ಹಲವು ಬಿಜೆಪಿ ಗೆಳೆಯರಿದ್ದಾರೆ ಎಂಬುದು ಕಾಂಗ್ರೆಸ್ನ ರಾಹುಲ್ ಗಾಂಧಿಯವರ ಆರೋಪ.

ರಾಜೇಶ್ ಕೆ. ಚೊಕ್ಕಾಡಿ

Leave A Reply

Your email address will not be published.