ಕೊರೋನಾ ಕಾಟಕ್ಕೆ ನವವಿವಾಹಿತರ ಫಸ್ಟ್ ನೈಟ್ ಜಸ್ಟ್ ಮಿಸ್ !

ಕೊರೋನಾ ಕಾಟ ಈ ನವ ವಿವಾಹಿತರನ್ನೂ ಬಿಟ್ಟಿಲ್ಲ. ಲಾಕ್‌ಡೌನ್‌ ನಡುವೆಯೇ ಸಿಂಪಲ್ ಆಗಿ ನಾಲ್ಕು ಗಂಟು ಲಾಕ್ ಮಾಡಿ ಮದುವೆಯಾಗಿ ಫಸ್ಟ್‌ನೈಟ್ ನ ಕನಸು ಕಾಣುತ್ತಿದ್ದ ನವ ಜೋಡಿಗೆ ನಿರಾಸೆಯಾಗಿದೆ. ಕಾರಣ ಕೊರೋನಾ ಭೀತಿ !

ವರ ಮೂಲತ: ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೋಳ ಗ್ರಾಮದವನು.
ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ವರನ ಮದುವೆಯು ಕಾಪು ತಾಲೂಕು ಕುತ್ಯಾರಿನಲ್ಲಿ ನಡೆದಿತ್ತು. ಮದುವೆ ಸಿಂಪಲ್ಲಾಗಿ ನಡೆದಿತ್ತು. ಇದು ಲಾಕ್ ಡೌನ್ ಆಗುವ ಮೊದಲೇ ನಿಶ್ಚಯವಾದ ಮದುವೆ. ಮದುವೆ ಮುಗಿಸಿ ಸಂಜೆ ತನ್ನ ಕಾರ್ಕಳದ ತನ್ನ ಮನೆಗೆ ನವವಿವಾಹಿತ ಹುಡುಗ ಬಂದಿದ್ದಾನೆ.
ಆತನ ನವ ವಿವಾಹಿತೆ ಪತ್ನಿ ಸಂಜೆ ಆತನ ಮನೆಗೆ ಬರುವವಳಿದ್ದಳು. ಇನ್ನೊಂದೆರಡು ದಿನಗಳಲ್ಲಿ ಅವರ ಫಸ್ಟ್ ನೈಟ್ ಕೂಡ ನಡೆಯುವುದರಲ್ಲಿತ್ತು.

ಆದರೆ ಆತನಿಗೆ ಮನೆಗೆ ಬಂದರೆ ಶಾಕ್ ಕಾದಿತ್ತು. ಆತನನ್ನು ಕಾರ್ಕಳದಲ್ಲಿ ಆತನ ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆತ ಅಂತರ್ಜಿಲ್ಲಾ ಪ್ರವಾಸ ಮಾಡಿ ಬಂದ ಕಾರಣದಿಂದ ಆತನನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು.

ಮೊದಲ ರಾತ್ರಿಯ ಕನವರಿಕೆಯಲ್ಲಿದ್ದ ಜೋಡಿಗೆ ದೊಡ್ಡ ನಿರಾಸೆ ಆಗಿದೆ. ಹುಡುಗನಂತೂ, ಸಿನಿಮಾಗಳಲ್ಲಿ ತೋರಿಸಿದಂತೆ, ಪತ್ನಿ ತಲೆ-ಮುಖ ಮುಚ್ಚಿಕೊಂಡು, ತುಂಬಿದ ಹಾಲಿನ ಗ್ಲಾಸ್ ಹಿಡಿದುಕೊಂಡು ಬರುತ್ತಾಳೆ. ಆಕೆ ನಾಚಿ ನೀರಾಗುತ್ತಾಳೆ. ತಾನು ಆಕೆಯ ಮುಖಗವಸು ತೆಗೆಯುತ್ತಾನೆ….ಇತ್ಯಾದಿ ಕಲ್ಪನೆಗಳಲ್ಲಿ ಇರುವಾಗಲೇ, ಸ್ವತಃ ಆತನೇ ಮಾಸ್ಕನಿಂದ ಮುಖ ಮುಚ್ಚಿಕೊಂಡು ಮನೆಯಲ್ಲೇ ಕುಳಿತು ಕೊಳ್ಳುವಂತಾಗಿದೆ. ಇನ್ನು ಕನಿಷ್ಠ ಹದಿನಾಲ್ಕು ದಿನ ಆತನ ಕರೀನಾ ಆತನಿಗೆ ಸಿಗದಂತೆ ಮಾಡಿದ್ದಾಳೆ ಕೊರೋನಾ.

ರಾಜೇಶ್ ಕೆ. ಶೇಣಿ

Leave A Reply

Your email address will not be published.