ಶಾಸಕ ಸಂಜೀವ ಮಠಂದೂರು ಅವರ ಬೇಡಿಕೆಗೆ ಮನ್ನಣೆ ನೀಡಿದ ಸರಕಾರ | ನೂತನ ಮರಳು ನೀತಿ ಜಾರಿ

ಬೆಂಗಳೂರು : ಪುತ್ತೂರಿನ ಶಾಸಕ ಸಂಜೀವ ಮಠಂದೂರು ಅವರ ಬೇಡಿಕೆಗೆ ಸ್ಪಂದಿಸಿದ ಸರಕಾರ ಇದೀಗ ‌ಗ್ರಾಮೀಣ ಪ್ರದೇಶದಲ್ಲಿ ಮರಳು ಪೂರೈಸುವ ಸಲುವಾಗಿ ಪಟ್ಟಾಭೂಮಿ ಹಾಗೂ ಹಳ್ಳಕೊಳ್ಳಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಿದೆ. ಇದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮರಳು ಆಕಾಂಕ್ಷಿಗಳಿಗೆ ಭಾರಿ ಅನುಕೂಲವಾಗಲಿದೆ.

” ಕರಾವಳಿ ಭಾಗದಲ್ಲಿ ಇರುವ ಮರಳು ನೀತಿ ನಿಯಮಗಳಿಂದ ಕರಾವಳಿಯ ಜನರಿಗೆ ಅಭಿವೃದ್ಧಿ ಕಾರ್ಯಗಳಿಗೆ ತುಂಬಾ ತೊಂದರೆ ಆಗುತ್ತಿದೆ. ಒಂದು ಕೆಜಿ ಚಿನ್ನ ದುಬಾಯಿಯಿಂದ ತರಬಹುದು, ಆದರೆ ಒಂದು ಕೆಜಿ ಮರಳು ನದೀ ಪಾತ್ರದಿಂದ ತರಲು ಆಗುವುದಿಲ್ಲ. ಪೊಲೀಸರು ಜನರಿಗೆ ಮರಳೆತ್ತಲು ಬಿಡುವುದಿಲ್ಲ. ಅದಕ್ಕಾಗಿ ಸೂಕ್ತ ನಿಯಮಾವಳಿಯನ್ನು ತಕ್ಷಣ ರೂಪಿಸಬೇಕು ” ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಅವರು ಮಾರ್ಚ್ 20 ರಂದು ಸದನದಲ್ಲಿ ಸಚಿವರ ಗಮನ ಸೆಳೆದಿದ್ದರು.

‌‌ ” ಸದ್ಯಕ್ಕೆ ನದಿ ಪಾತ್ರದಲ್ಲಿ ಮರಳು ಬ್ಲಾಕ್ ಗುರುತಿಸಿ ಹರಾಜಿನ ಮೂಲಕ ಮರಳುಗಾರಿಕೆಗೆ ಅವಕಾಶ ನೀಡಲಾಗುತ್ತಿದೆ. ಆದರೂ ಮರಳಿನ ಅಭಾವ ಕಂಡು ಬರುತ್ತಿದೆ ಹೀಗಾಗಿ ಪಟ್ಟಾಭೂಮಿ ಮತ್ತು ಹಳ್ಳಕೊಳ್ಳಗಳಲ್ಲಿ ಮರಳುಗಾರಿಕೆ ನಡೆಸಲು ಅನುಮತಿ ನೀಡಿದ್ದೇನೆ. ಸ್ಥಳೀಯವಾಗಿ ಮರಳು ಲಭ್ಯತೆಯನ್ನು ಗ್ರಾಮ ಪಂಚಾಯಿತಿಯವರು ಗುರುತಿಸಿ ಅಗತ್ಯವುಳ್ಳವರಿಗೆ ಪೂರೈಸುವ ವ್ಯವಸ್ಥೆ ಮಾಡಬೇಕಾಗುತ್ತದೆ. ತಹಸೀಲ್ದಾರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳು ಇದರ ಉಸ್ತುವಾರಿ ಮತ್ತು ಸಮನ್ವಯ ನೋಡಿಕೊಳ್ಳಲಿದ್ದಾರೆ ” ಇಂದು ಸಂಪುಟ ಸಭೆ ಇವರ ಒದಗಿಸಿದ ಕಾನೂನು ಸಚಿವ ಜೆ .ಸಿ. ಮಧುಸ್ವಾಮಿ ತಿಳಿಸಿದರು.

ಈ ಮರಳನ್ನು ಆಶ್ರಯ ಮನೆ ನಿರ್ಮಾಣ ಹಾಗೂ ಇನ್ನಿತರ ಸಣ್ಣಪುಟ್ಟ ಕಾಮಗಾರಿಗಳಿಗೆ ಪೂರೈಸಲಾಗುತ್ತದೆ .ಒಂದು ಮೆಟ್ರಿಕ್ ಟನ್ ಮರಳಿಗೆ 700 ರೂ. ದರ ವಿಧಿಸಲಾಗುತ್ತದೆ. ಇದರಿಂದಾಗಿ ಮರಳು ದಂಧೆಗೆ ಕಡಿವಾಣ ಬಿದ್ದಂತಾಗುತ್ತದೆ. ಮರಳುಗಾರಿಕೆಯಿಂದ 130 ಕೋಟಿ ಆದಾಯ ಬರುತ್ತಿದೆ. ಹೊಸ ನೀತಿ ಜಾರಿಯಾದ ಕೂಡಲೇ ಹೆಚ್ಚುವರಿಯಾಗಿ ರಾಜ್ಯದ ಬೊಕ್ಕಸಕ್ಕೆ 70 ಕೋಟಿ ರೂ. ಆದಾಯ ಸಂಗ್ರಹವಾಗುವ ನಿರೀಕ್ಷೆಗಳಿವೆ ಎಂದು ಸಚಿವರು ತಿಳಿಸಿದರು.

ಅಲ್ಲದೆ ಮರಳು ಸಮಸ್ಯೆಯ ಬಗ್ಗೆ ಹಲವು ಬಾರಿ ಕರಾವಳಿ ಶಾಸಕರ, ಹಾಗೂ ಮರಳುಗಾರಿಕೆಯ ಅನುಮತಿ ಇದ್ದವರ,ತಜ್ಞರ ಸಭೆ ಸಚಿವ ಸಿ.ಸಿ.ಪಾಟೀಲ್ ಉಪಸ್ಥಿಯಲ್ಲಿ ಸಭೆ ನಡೆದಿತ್ತು.

ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಹಳೆಯ ಸುದ್ದಿ

Leave A Reply

Your email address will not be published.