ದಕ್ಷಿಣ ಕನ್ನಡದಲ್ಲಿ ಮರಳುಗಾರಿಕೆ ಸರಳೀಕರಣಗೊಳಿಸಲು ಶಾಸಕ ಸಂಜೀವ ಮಠ೦ದೂರು ಸದನದಲ್ಲಿ ಆಗ್ರಹ

ವಿಧಾನಸೌಧ, ಮಾ. 20 : ಕರಾವಳಿ ಭಾಗದಲ್ಲಿ ಇರುವ ಮರಳು ನೀತಿ ನಿಯಮಗಳಿಂದ ಕರಾವಳಿಯ ಜನರಿಗೆ ಅಭಿವೃದ್ಧಿ ಕಾರ್ಯಗಳಿಗೆ ತುಂಬಾ ತೊಂದರೆ ಆಗುತ್ತಿದೆ. ಒಂದು ಕೆಜಿ ಚಿನ್ನ ದುಬಾಯಿಯಿಂದ ತರಬಹುದು, ಆದರೆ ಒಂದು ಕೆಜಿ ಮರಳು ನದೀ ಪಾತ್ರದಿಂದ ತರಲು ಆಗುವುದಿಲ್ಲ. ಪೊಲೀಸರು ಜನರಿಗೆ ಮರಳೆತ್ತಲು ಬಿಡುವುದಿಲ್ಲ. ಅದಕ್ಕಾಗಿ ಸೂಕ್ತ ನಿಯಮಾವಳಿಯನ್ನು ತಕ್ಷಣ ರೂಪಿಸಬೇಕೆಂದು ಪುತ್ತೂರಿನ ಶಾಸಕ ಸಂಜೀವ ಮಠ೦ದೂರು ಅವರು ಸಚಿವರ ಗಮನ ಸೆಳೆದರು.


Ad Widget

Ad Widget

ಅದಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಕೂಡಾ ದನಿ ಸೇರಿಸಿದರು. ಮುಂದುವರಿದು ಮಾತನಾಡಿದ ಶಾಸಕ ಸಂಜೀವ ಮಠ೦ದೂರು ಅವರು, ಇನ್ನೆರಡು ತಿಂಗಳಲ್ಲಿ ದಕ್ಷಿಣ ಕನ್ನಡದಲ್ಲಿ ಮಳೆಗಾಲ ಪ್ರಾರಂಭವಾಗಲಿದೆ. ಆದುದರಿಂದ ಈ ಕೆಲಸ ತಕ್ಷಣ ಆಗಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ನದಿ ತೊರೆಗಳ ದಂಡೆಯಲ್ಲಿ ಮರಳು ನಿಂತು, ಆವಾಗಾವಾಗ ತೆಗೆಯದೆ ಹೋದರೆ ನದಿಗಳು ಉಕ್ಕಿ ಹೊರಗಡೆ ಬರುತ್ತದೆ. ಇಲ್ಲದೆ ಹೋದರೆ ಪ್ರವಾಹದ ವಾತಾವರಣ ಕಳೆದ ಸಲ ಆದಂತೆ ಆದೀತು ಎಂದವರು ಎಚ್ಚರಿಸಿದರು.


Ad Widget

ಹೊಸ ಮರಳು ನೀತಿ ಮಾಡಿ, ಅದರಿಂದ ಜನರಿಗೆ ಸುಲಭವಾಗಿ ಮರಳು ಸಿಗುವಂತಾಗಬೇಕು ಮತ್ತು ನದಿಗಳು ಉಕ್ಕಿ ಹರಿಯುವುದನ್ನು ತಪ್ಪಿಸಬೇಕು ಎಂಬ ಕಳಕಳಿ ವ್ಯಕ್ತಪಡಿಸಿದರು.

ಅದಕ್ಕೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಸಿ ಸಿ ಪಾಟೀಲ್ ಅವರು, ದಕ್ಷಿಣ ಕನ್ನಡದಲ್ಲಿ ಪ್ರವಾಹ ಬಂದ 21 ಪ್ರದೇಶಗಳಲ್ಲಿ, ಹಿನ್ನೀರು ನಿಂತ ಜಾಗದಲ್ಲಿ ಮರಳು ತೆಗೆಯಲು ಸರಕಾರದ ಅಭ್ಯಂತರವೇನೂ ಇಲ್ಲ. 01/102019 ರ ಪ್ರವಾಹದಿಂದ ನದೀ ಪಾತ್ರದಲ್ಲಿ ಸಂಗ್ರಹವಾದ ಮರಳು ಎತ್ತಲು ಕಾನೂನಿನಲ್ಲಿ ಅದಕ್ಕೆ ಅವಕಾಶವಿದೆ. ಆಯಾ ಜಿಲ್ಲೆಗಳ ಮರಳು ಸಮಿತಿಯಲ್ಲಿ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.

Ad Widget

Ad Widget

Ad Widget
error: Content is protected !!
Scroll to Top
%d bloggers like this: