ಲಾಕ್‌ಡೌನ್ ಮಧ್ಯೆ ಮಸೀದಿಯಲ್ಲಿ ಸಾಮೂಹಿಕ ನಮಾಝ್ | ಮಸೀದಿಗೆ ನುಗ್ಗಿದ ತಹಶಿಲ್ದಾರ್ ಶೋಭಿತ | ಜೋರಾಗಿತ್ತು ಆವಾಜ್ !

0 7

ಮಹಿಳೆಯರಿಗೆ ಮಸೀದಿಯೊಳಗೆ ನಿರ್ಬಂಧದ ನಡುವೆಯೂ ಮಸೀದಿಯೊಳಗೆ ನಮಾಜ್ ನಡೆಯುತ್ತಿದ್ದ ಕಾರಣದಿಂದ ತಹಶೀಲ್ದಾರ್ ಶೋಭಿತ ಅವರು ಹಿಂದು ಮುಂದು ಯೋಚಿಸದೆ ಸೀದಾ ಮಸೀದಿ ಒಳಕ್ಕೆ ನುಗ್ಗಿದ್ದಾರೆ.

ನಮಾಜ್ ಮಾಡುತ್ತಿರುವ ಮಾಹಿತಿ ಮೇರೆಗೆ ಕೋಲಾರ ನಗರದ ಮುನಿಸಿಪಾಲ್ ಆಸ್ಪತ್ರೆ ಮುಂಭಾಗದ ಮಸೀದಿಗೆ ನುಗ್ಗಿದ ಶೋಭಿತ ಅವರು ಮಸೀದಿಯಲ್ಲಿ ಮೊದಲು ಕನ್ನಡದಲ್ಲಿ ಆನಂತರ ಹಿಂದಿಯಲ್ಲಿ ಸಕ್ಕತ್ ಅವಾಜ್ ಹಾಕಿದ್ದಾರೆ.

ನಿಮಗೆ ಲಾಕ್‍ಡೌನ್ ಸಮಯದಲ್ಲಿ ನಮಾಜ್ ಮಾಡಲು ಯಾರು ಹೇಳಿದ್ದು? ಈ ರೀತಿ ಮಾಡಬಾರದು ಎಂದು ನಿಮಗೆ ಗೊತ್ತಿಲ್ವಾ? ಇವರೆಲ್ಲರನ್ನೂ ಇಲ್ಲಿಯೇ ಕೂಡಿಹಾಕಿ. ಯಾರನ್ನೂ ಹೊರಗೆ ಬಿಡಬೇಡಿ ಎಂದು ಹೇಳಿ ಕಾನೂನು ಉಲ್ಲಂಘನೆ ಮಾಡಿದವರಿಗೆ ಸರಿಯಾದ ಪಾಠ ಕಳಿಸಿದ್ದಾರೆ.

ಲಾಕ್‍ಡೌನ್ ನಡುವೆಯೂ ನಿಯಮಗಳನ್ನು ಗಾಳಿಗೆ ತೂರಿ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ 10 ಜನರನ್ನು ವಶಕ್ಕೆ ಪಡೆದಿದ್ದಾರೆ. ಮಸೀದಿಗೆ ನುಗ್ಗಿದ ತಹಶೀಲ್ದಾರ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಫುಲ್ ವೈರಲ್ ಆಗಿದ್ದು ಕೋಲಾರ ತಹಸೀಲ್ದಾರ್ ಶೋಭಿತ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಮಸೀದಿಯೊಳಗೆ ಕಾಲಿರಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗುತ್ತಿದ್ದಾರೆ.

ಇಂದು ಈ ವಿಚಾರವಾಗಿ ಮಾತನಾಡಿದ ಅವರು, ಸಾರ್ವಜನಿಕರೊಬ್ಬರು ಕರೆ ಮಾಡಿ ಮಸೀದಿಯಲ್ಲಿ ನಮಾಜ್ ಸಲ್ಲಿಸುತ್ತಿರುವ ಬಗ್ಗೆ ದೂರು ನೀಡಿದರು. ಆ ಸಮಯದಲ್ಲಿ ನಾನು ಕೂಡ ರೌಂಡ್ಸ್ ನಲ್ಲಿ ಇದ್ದೆ. ತಕ್ಷಣ ಸ್ಥಳಕ್ಕೆ ನಾನು ಧಾವಿಸಿ ಹೋದೆ. ಹೋಗಿ ನೋಡಿದಾಗ ಸುಮಾರು 10 ಮಂದಿ ಮಸೀದಿಯೊಳಗೆ ನಮಾಜ್ ಮಾಡುತ್ತಿರುವುದು ಕಂಡು ಬಂತು ಎಂದು ಆಕೆ ಹೇಳಿದ್ದಾರೆ.

ನಮ್ಮ ಕೋಲಾರ ಗ್ರೀನ್ ಝೋನ್ ಅಲ್ಲಿ ಇರುವ ಕಾರಣ ನಮ್ಮ ಜನರಿಗೆ ಸ್ವಲ್ಪ ಗಂಭೀರತೆ ಕಡಿಮೆಯಾಗಿದೆ. ಹೀಗಾಗಿ ಆ ಮಸೀದಿ ನಗರದ ಮಧ್ಯಭಾಗದಲ್ಲಿ ಇದ್ದು ಅದರ ಸುತ್ತಮುತ್ತಾ ಬಟ್ಟೆ ಅಂಗಡಿಯಂತಹ ಕೆಲ ಶಾಪ್‍ಗಳು ಇವೆ. ಇಲ್ಲಿನ ಕೆಲ ಯುವಕರು ರಜೆ ಇರುವ ಕಾರಣ ನಮಾಜ್ ಸಮಯದಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಗಿದ್ದಾರೆ. ಈ ಸಂಬಂಧ ಮಸೀದಿ ಮುಖಂಡರಿಗೂ ಎಚ್ಚರಿಕೆ ನೀಡಿದ್ದೇವೆ ಎಂದು ಶೋಭಿತ ತಿಳಿಸಿದ್ದಾರೆ.

ಇದೇ ವೇಳೆ ಮಹಿಳೆಯಾಗಿ ಮಸೀದಿಗೆ ಹೋಗಿದ್ದರ ಬಗ್ಗೆ ಮಾತನಾಡಿದ ಅವರು, ನಾನು ಮಹಿಳೆಯಾಗಿ ಮಸೀದಿಗೆ ಹೋಗಿಲ್ಲ. ಆದರೆ ಓರ್ವ ಅಧಿಕಾರಿಯಾಗಿ ನಾನು ಮಸೀದಿಯೊಳಗೆ ಹೋದೆ. ನನಗೆ ವೈಯಕ್ತಿಕವಾಗಿ ಯಾವುದೇ ಧರ್ಮದ ನಂಬಿಕೆಯನ್ನು ಘಾಸಿಗೊಳಿಸುವ ಉದ್ದೇಶವಿಲ್ಲ. ನನಗೆ ನಮ್ಮ ಜಿಲ್ಲೆ ಗ್ರೀನ್ ಝೋನ್ ಅಲ್ಲಿ ಇದೆ. ಅದು ಹಾಗೇ ಮುಂದುವರಿಯಬೇಕು ಅದು ನನ್ನ ಉದ್ದೇಶ. ಮಸೀದಿಯವರು ಮಹಿಳೆಯಾಗಿ ಒಳಗೆ ಹೋಗಿದಕ್ಕೆ ಪರವಾಗಿಲ್ಲ ಏನೂ ತೊಂದರೆಯಿಲ್ಲ ಎಂದು ಹೇಳಿದ್ದಾರೆ ಎಂದು ಶೋಭಿತ ತಿಳಿಸಿದ್ದಾರೆ.

Leave A Reply