ಮಹಾನ್ ಮಾನವತಾವಾದಿ ಬಸವಣ್ಣ | ಇಂದು ಬಸವ ಜಯಂತಿ

ಹನ್ನೆರಡನೇ ಶತಮಾನದಲ್ಲಿ ಜನರ ಮೌಢ್ಯವನ್ನು ತನ್ನ ವಚನಗಳ ಮೂಲಕ ವರ್ಣಿಸಿದ ಮಹಾನ್ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣ.

ವೈದಿಕ ಕರ್ಮಾಚರಣೆಯ ವಿರೋಧಿಯಾಗಿದ್ದ ಬಸವೇಶ್ವರರು ಭಕ್ತಿ ಪಂಥದ ಹರಿಕಾರರು. ಲಿಂಗಾಯತ ಸಮುದಾಯದ ಸ್ಥಾಪಕರು. ಇವರ ಇವರ ಪ್ರತಿಯೊಂದು ಮತು ಹಾಗೂ ಅವರು ರಚಿಸಿದ ಪ್ರತಿಯೊಂದು ವಚನಗಳು ಕತ್ತಿಗಿಂತ ಹರಿತವಾದುದು.

ಸಮಾಜದಲ್ಲಿ ಬೇರೂರಿದ್ದ ಮೇಲು, ಕೀಳು, ಧನಕ-ಬಡವ, ಪುರುಶ-ಮಹಿಳೆ ಎನ್ನುವ ಭೇದ ಭಾವದ ವಿರುದ್ದ ಚಾಟಿ ಬೀಸಿದ್ದು ಬಸವಣ್ಣನವರ ವಚನಗಳು.

ಇವನಾರವ ಇವನಾರವ ಇವನಾರವ
ನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ
ನಮ್ಮವ ನೆಂದೆನಿಸಯ್ಯಾ
ಕೂಡಲಸಂಗಮದೇವಾ
ನಿಮ್ಮ
ಮಹಾಮನೆಯ ಮಗನೆಂದೆನಿಸಯ್ಯಾ

ಅನುಭವ ಮಂಟಪದ ಮೂಲಕ ಜಗತ್ತಿನ ಮೊಟ್ಟ ಮೊದಲ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಬುನಾಧಿ ಹಕಿದ್ದು ಬಸವೇಸ್ವರರು. ಸಮಾಜದಲ್ಲಿ ಎಲ್ಲರೂ ಸಮಾನರೆಂಬ ಸಂದೇಶವನ್ನು ಸಾರುವ ಮೂಲಕ ಸಮಾನತೆಯ ಹರಿಕಾರರಾದವರು ಗುರು ಬಸವೆಶವರರು. ಬೀನ ದಲಿತ, ಬಡವ ಬಲ್ಲಿದನ ಪಾಲಿಗೆ ಇವರು ಗುರುವೆನಿಸಿದರು.

ಕಾಯಕವೇ ಕೈಲಾಸ ಎನ್ನುವ ಮಂತ್ರಘೋಷ್ಟಿಯನ್ನು ಪಠಿಸಿದ ಬಸವೇಸ್ವರರು ನಾವು ಮಾಡುವ ಕಾಯಕದಲ್ಲಿ ದೇವರನ್ನು ಕಾಣುವಂತೆ ಸೂಚಿಸಿದರು.

ಪ್ರತಿಯೊಬ್ಬರು ಒಪ್ಪುವ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡುವ ವೈಚಾರಿಕತೆ, ಭಾಷಾ ಪ್ರಭುದ್ದತೆ ಹಾಗೂ ಕ್ರಾಂತಿ ಕರಿ ಚಿಂತನೆಗಳ ಬಸವಣ್ಣನವರ ವಚನಗಳ ಶಕ್ತಿಯಾಗಿದೆ.

ಬಸವಣ್ಣನವರು ಕ್ರಿ.ಶ 1,132 ರಲ್ಲಿ. ಬಿಜಾಪುರದ ಬಾಗೇವಾಡಿ ಎಂಬಲ್ಲಿ ಮಾದಲಾಮಬಿಕೆ ಹಾಗೂ ಮಾದರಸ ದಂಪತಿಗಳ ಪುತ್ರರಾಗಿ ಜನಿಸಿದರು.

ಬಸವಣ್ಣನವರು ಬಾಲ್ಯದಿಂದಲೇ ವೈದಿಕ ಸಂಸ್ಕೃತಿಯ ಆಚರಣೆಯನ್ನು ವಿರೋಧಿಸುತ್ತಾ ಬೆಳೆದವರು. ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಕೇವಲ ಗಂಡು ಮಕ್ಕಳಿಗೆ ಮಾತ್ರ ಜನಿವಾರ ಹಾಕುವ ವಿರುದ್ದ ಸಿಡಿದೆದ್ದರು. ಪುರುಷ ಹಾಗೂ ಮಹಿಳೆಯ ನಡುವಿನ ಅಸಮಾನತೆಯನ್ನು ಪ್ರಶ್ನಿಸಿದರು.

ಮಡಿ, ಮೈಲಿಗೆ, ಜುಟ್ಟು ಜನಿವಾರವನ್ನು ಕಿತ್ತೆಸೆದರು. ಹೀಗೆ ತಮ್ಮ ಜೀವನದುದ್ದಕ್ಕೂ ಕ್ರಾಂತಿಕಾರಿ ಬದಲಾವಣೆಯನ್ನು ಮಡುತ್ತಾ ಸೋದರ ಮಾವನ ಮಗಳಾದ ನೀಲಾಂಬಿಕೆಯನ್ನು ವಿವಾಹವಾದ ಬಳಿಕವೂ ತಮ್ಮ ಸೇವಾ ಕಾರ್ಯವನ್ನು ಬಿಡದೇ ಅದನ್ನು ಮುಂದುವರಿಸುತ್ತಾ ಹೋದರು ಬಸವಣ್ಣ.

ಬಸವಣ್ಣನ ಈ ಕಾರ್ಯವನ್ನು ಕಂಡು ರಾಜ ಬಿಜ್ಜಳ ಇವರನ್ನು ತಮ್ಮ ಆಸ್ತಾನದ ಮಂತ್ರಿಯಾಗಿ ನೇಮಕ ಮಾಡಿದರು.
ತಮಗೆ ಒದಗಿ ಬಂದ ಈ ಅವಕಾಶದಿಂದ ಬಸವಣ್ಣನವರು ಅಸ್ಪೃಷ್ಯತೆಯ ಹೆಸರಿನಲ್ಲಿ ಊರ ಹೊರಗಿದ್ದ ದಲಿತರನ್ನು ಸಮಾಜದ ಮುಂದೆ ತರುತ್ತಾರೆ.

ದೇವಾಲಯದ ಕುಡಿಯುವ ನೀರಿನ ಬಾವಿ, ಕೆರೆಗಲನ್ನು ಬಳಸಲು ಎಲ್ಲರಿಗು ಹಕ್ಕಿದೆ ಎಂದು ಪ್ರತಿಪಾದಿಸಿದರು. ಇದರಿಂದಾಗಿ ಸಮಾಜದ ವಿರೋಧ ಕಟ್ಟಿಕೊಳ್ಳಬೇಕಾಗಿ ಬಂತು. ಇವರ ವಿರುದ್ದ ತಿರುಗಿ ಬಿದ್ದ ಪುರೋತಶಾಹಿಗಳು ಆನೆಯ ಕಾಲಿನಿಂದ ತುಳಿಸಿ ಕೊಲ್ಲುವ ಸಂಚು ರೂಪಿಸಿದರು.

ಅದೇ ಸಮಯಕ್ಕೆ ಶಿವ ಶರಣರ ಮೇಲೆ ಬಿಜ್ಜಳದ ಸೇನೆ ಎಸಗಿದ ರಕ್ತಪಾತವನ್ನು ಕಂಡು ನೊಂದು ಹೋದ ಬಸವೇಶ್ವರರು ಅಲ್ಲಿಂದ ಕೂಡಲ ಸಂಗಮಕ್ಕೆ ಬಂದು ನೆಲೆಸುತ್ತಾರೆ.
ಸಾಮಾಜಿಕ ಅಸಮಾನತೆ ಹಾಗೂ ಜಾತೀ ಮತಗಳ ತಾರತಮ್ಯವನ್ನು ಹೊಡೆದೋಡಿಸಿ ಸರ್ವರೂ ಸಮನರು ಎನ್ನು ಸಂದೇಶವನ್ನು ಸಾರಲೆಂದೆ ಬಸವ ಮಂಟೊವನ್ನು ಸ್ಥಾಪಿಸುತ್ತಾರೆ. ಇದಕ್ಕೆ ಎಲ್ಲ ಜಾತಿ ಜಾತಿಯ ಭಂದವರು ಅನುಭವ ಮಂಟಪದ ಸದಸ್ಯರಾಗುತ್ತಾರೆ. ಹೀಗೆ ಹನ್ನೆರಡನೇಯ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಪ್ರಜ ಪ್ರಭುತ್ವ ವ್ಯವಸ್ತೆಗೆ ಕ್ರಾಂತಿ ಕಾರಿ ಯಾದ ಬಸವಣ್ಣನವರು ಮುನ್ನುಡಿ ಬರೆಯುತ್ತಾರೆ.

ಇದುವರೆಗೆ ಬಸವಣ್ಣನವರು ರಚಿಸಿದ ಸುಮಾರು ಸಾವಿರದ ಐನೂರು ವಚನಗಳನ್ನು ಸಂಗ್ರಹಿಸಲಗಿದೆ. ಜಗಜ್ಯೋತಿ, ಕ್ರಾಂತಿಕಾರಿ, ಭಕ್ತಿ ಪಮತದ ಹರಿಕಾರ, ಹಾಗೂ ಮಹಾನ್ ಮೌನವತಾವದಿ ಎಂದೆನಿಸಿದ ಬಸವಣ್ಣನವರ ಶ್ರೇಷ್ಟತೆ ಇಂದು ಲಮಡನ್ ವರೆಗೆ ಹಬ್ಬಿರುವುದು ನಿಜಕ್ಕೂ ಕನ್ನಡಿಗರ ಹೆಮ್ಮೆ.

ಬಸವ ಜಯಂತಿಯ ಶುಭಾಷಯಗಳು.
ನುಡಿದರೆ ಮುತ್ತಿನ ಹರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲ ಸಂಗಮದೇವನೊಂತೊಲಿವನಯ್ಯ

ಜೀವನ್ ಕುಮಾರ್ ಕಲ್ಲೇಗ ,ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಪದವಿ ಕಾಲೇಜು ಪುತ್ತೂರು.

Leave A Reply

Your email address will not be published.