ಆರೋಗ್ಯ ಭಾರತಿ, ಬೆಳ್ತಂಗಡಿ ಇದರ ಸಂಚಾಲಕ ಶ್ರೀ ಗಣೇಶ್ ಗೌಡ ಕಲಾಯಿ ಅವರಿಂದ 15 ಕ್ವಿಂಟಾಲ್ ಉಚಿತ ತರಕಾರಿ ಕಿಟ್ ಹಂಚಿಕೆ

ಬೆಳ್ತಂಗಡಿ : ಪಟ್ರಮೆ, ಪಟ್ಟೂರು, ಮುಂಡೂರು ಪಳಿಕೆ ಹಾಗೂ ಕೊಕ್ಕಡ ಭಾಗದಲ್ಲಿ ಕೊರೋನ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಬಡವರ್ಗದ ಜನರ ಸಹಾಯಕ್ಕೆ ಈಗ ಸಾಮಾಜಿಕ ಕಾರ್ಯಕರ್ತ ಮತ್ತು ಸತ್ ಕಾರ್ಯಗಳಿಗೆ ದಾನಿಯಾಗಿರುವ ಶ್ರೀ ಗಣೇಶ್ ಗೌಡ ಕಲಾಯಿ ಅವರು ಹೊರಟಿದ್ದಾರೆ.

ಅವರು ಸುಮಾರು ಹದಿನೈದು ಕ್ವಿಂಟಾಲ್ ತರಕಾರಿಯನ್ನು ಸ್ವತಃ ನಿಂತು ಹೈಜೆನಿಕ್ ಆಗಿಂಪ್ಯಾಕ್ ಮಾಡಿಸಿ ತಮ್ಮೂರ ಸುತ್ತಮುತ್ತಲಿನ ಊರುಗಳಿಗೆ ಹಂಚಲಿದ್ದಾರೆ.

ಆರೋಗ್ಯ ಭಾರತಿ, ಬೆಳ್ತಂಗಡಿ ಇದರ ಸಂಚಾಲಕರು ಆಗಿರುವ ಶ್ರೀ ಗಣೇಶ್ ಗೌಡ ಕಲಾಯಿ ಅವರು ಇಂದು, ಏಪ್ರಿಲ್ 25 ರಂದು ಉಚಿತವಾಗಿ ವಿತರಿಸಲಿದ್ದಾರೆ.

ಸುಮಾರು 400 ಕಿಟ್ ಗಳು ಈಗಾಗಲೇ ಹಂಚಲು ರೆಡಿಯಾಗಿದ್ದು ಇನ್ನೇನು ಆಯಾ ಪ್ರದೇಶಗಳಿಗೆ ಹೊರಡಲಿದೆ. ಈ ಸಮಯದಲ್ಲಿ ಗಣೇಶ್ ಗೌಡ ತೆಂಕಬೈಲ್, ಅಜಿತ್, ಯುಕೇಶ್ ಪಟ್ರಮೆ, ಪ್ರಸನ್ನ ತೆಂಕಬೈಲ್, ಲೇಖಾ ನಂದ ಬಾಲ್ತಿಮಾರ್, ಗಣೇಶ್ ಗೌಡರ ತಾಯಿ ವಿಜಯ ಕಲಾಯಿ ಮುಂತಾದವರು ಸಹಕರಿಸಿದರು.

ಪಟ್ರಮೆಯಲ್ಲಿ ಸುಮಾರು 130 ಬಡ ಕುಟುಂಬಕ್ಕೆ ವಿತರಣೆ ಮಾಡಲಾಯಿತು. ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಆಲಂಗೂರು ಉಪಸ್ಥಿತರಿದ್ದರು.

ಕೊಕ್ಕಡ ಮುಂಡುರುಪಾಲಿಕೆ ಪತ್ತೂರು ನಲ್ಲಿ ಸುಮಾರು 200 ಬಡ ಕುಟುಂಬಗಳಿಗೆ ವಿತರಿಸಲಾಯಿತು. ಮಾಜಿ APMC ಅಧ್ಯಕ್ಷ ಪೂವಾಜೆ ಕುಶಾಲಪ್ಪ ಗೌಡ್ರು ಈ ಸಮಯದಲ್ಲಿ ಉಪಸ್ಥಿತಿ ಇದ್ದರು.

ಗಣೇಶ ಗೌಡ ಕಲಾಯಿ ಇವರಿಗೆ ಸಹಕರಿಸಿದವರು ಗಣೇಶ್ ಗೌಡ ಥೆಂಕಬೈಲು, ಅಜಿತ್  ಥೆಂಕಬೈಲು, ಯುಕೇಶ್ ಪಟ್ರಮೆ, ಲೇಖನಂದ, ಪ್ರಸನ್ನ, ತಿಮ್ಮಪ್ಪ ಏಳಿಕಾಳ ಮುಂತಾದವರು.

Leave A Reply

Your email address will not be published.