ಸುಳ್ಯ | ಸೇವಾ ಭಾರತಿ ಫುಡ್ ಕಿಟ್ ತಯಾರಿ ಸ್ಥಳಕ್ಕೆ ಶಾಸಕ ಅಂಗಾರ ಭೇಟಿ

ಸುಳ್ಯದ ಶಾಸಕ ಎಸ್.ಅಂಗಾರ ರ ನೇತೃತ್ವದಲ್ಲಿ, ಸೇವಾಭಾರತಿಯ ವತಿಯಿಂದ ಸುಳ್ಯದ ದಾನಿಗಳ ನೆರವಿನೊಂದಿಗೆ ಇಂದು ಲೋಕ್ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಕಡು ಬಡವರ ಸಹಾಯಕ್ಕಾಗಿ ಪಡಿತರ ಕಿಟ್ ಗಳನ್ನು ಸಿದ್ಧಪಡಿಸುತ್ತಿರುವ ಸ್ಥಳವಾದ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರಕ್ಕೆ ಇಂದು ಶಾಸಕ ಅಂಗಾರರು ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ಶಾಸಕರ ಸಹಾಯವಾಣಿ ಕೇಂದ್ರದ ಉಸ್ತುವಾರಿ ಮಹೇಶ್ ರೈ ಮೇನಾಲ , ತಾ ಪಂ ಸದಸ್ಯರಾದ ರಾಧಾಕೃಷ್ಣ ಬೊಳ್ಳೂರು ಹಾಗೂ ಸೇವಾ ಭಾರತೀಯ ಹಿರಿಯ ಕಿರಿಯ ಕಾರ್ಯಕರ್ತರು, ನ.ಪಂ.ಸದಸ್ಯರು ಉಪಸ್ಥಿತರಿದ್ದರು.

Leave A Reply

Your email address will not be published.