COVID 19: ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆ: ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ!!

ICU : ಕೇಂದ್ರ ಸರ್ಕಾರ(Central Government)ರೋಗಿಗಳನ್ನು ತುರ್ತು ನಿಗಾ ಘಟಕಕ್ಕೆ(ICU) ಸೇರಿಕೊಳ್ಳಲು ಇದೇ ಮೊದಲ ಬಾರಿಗೆ ನಿಯಮಾವಳಿಗಳನ್ನು ರೂಪಿಸಿದೆ. ದೇಶದ ಪ್ರತಿಷ್ಠಿತ 24 ವೈದ್ಯರ ಸಮಿತಿ ಈ ನಿಯಮಗಳನ್ನು ರೂಪಿಸಿದೆ.

ಒಂದು ವೇಳೆ ರೋಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರೆ, ಉಸಿರಾಟ ಯಂತ್ರ ಅಳವಡಿಸಬೇಕಾದ ಪರಿಸ್ಥಿತಿ ಎದುರಾದರೆ ಹೆಚ್ಚಿನ ನಿಗಾ ವಹಿಸಬೇಕಾದ ಪರಿಸ್ಥಿತಿಯಲ್ಲಿ ಶಸ್ತ್ರ ಚಿಕಿತ್ಸೆಯ ನಂತರ ಚಿಕಿತ್ಸೆಗಾಗಿ, ತೀವ್ರವಾದ ಶಸ್ತ್ರಚಿಕಿತ್ಸೆ ಅಗತ್ಯವಿದ್ದ ಸಮಯದಲ್ಲಿ ಐಸಿಯುಗಳಲ್ಲಿ ಮಾತ್ರ ಅಡ್ಮಿಟ್‌ ಮಾಡಿಕೊಳ್ಳಬಹುದೆಂದು ಸಮಿತಿ ಮಾಹಿತಿ ನೀಡಿದೆ.

ಇದನ್ನು ಓದಿ: CM Siddaramaiah: ಡಿಕೆಶಿ ‘ಅದರಲ್ಲಿ’ ನನಗಿಂತಲೂ ಎತ್ತಿದ ಕೈ !! ಹೀಗ್ಯಾಕಂದ್ರು ಸಿದ್ದರಾಮಯ್ಯ?

ಭಾರತದಲ್ಲಿ ಸುಮಾರು 1 ಲಕ್ಷ ಐಸಿಯು ಹಾಸಿಗೆಗಳ ಸೌಲಭ್ಯವಿದ್ದು, ಇವುಗಳಲ್ಲಿ ಹೆಚ್ಚಿನ ಖಾಸಗಿ ಹಾಗೂ ಮಹಾನಗರಗಳಲ್ಲಿದೆ. ಬಡವರು ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳುವುದು ಕಷ್ಟ ವಾಗಿರುವ ಹಿನ್ನೆಲೆ ಎಲ್ಲರಿಗೂ ಈ ಸೌಲಭ್ಯ ದೊರೆಯಬೇಕೆಂಬ ಉದ್ದೇಶದಿಂದ ನಿಯಮಗಳನ್ನು ರೂಪಿಸಲಾಗಿದೆ ಎಂದು ಸರ್ಕಾರ ಹೇಳಿದೆ. ದೇಶದಲ್ಲಿ ಐಸಿಯು ಪರಿಮಿತ ಸಂಪನ್ಮೂಲವಾಗಿದ್ದು, ಇವು ಅತ್ಯಂತ ಅಗತ್ಯವಿರುವವರಿಗೆ ದೊರೆಯಬೇಕೆಂಬುದು ನಮ್ಮ ಮೂಲ ಉದ್ದೇಶವಾಗಿದೆ ಎಂದು ಸಮಿತಿ ಮಾಹಿತಿ ನೀಡಿದೆ.

Leave A Reply

Your email address will not be published.