ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೆ 47ನೇ ಹುಟ್ಟು ಹಬ್ಬ

ವಿಶ್ವ ಕ್ರಿಕೆಟ್ ನ ಬ್ಯಾಟಿಂಗ್ ದಿಗ್ಗಜ, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ, ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳ ಸರದಾರ , ಭಾರತೀಯ ಕ್ರಿಕೆಟ್ ನ ಆರಾಧ್ಯದೈವ ಸಚಿನ್ ತೆಂಡೂಲ್ಕರ್. ಇವರ ಪೂರ್ಣ ಹೆಸರು ಸಚಿನ್ ರಮೇಶ್ ತೆಂಡೂಲ್ಕರ್. ಅವರು 1973 ಏಪ್ರಿಲ್ 24ರಂದು ಮಹಾರಾಷ್ಟ್ರದ ಮುಂಬೈನಲ್ಲಿ ರಮೇಶ್ ತೆಂಡೂಲ್ಕರ್ ಹಾಗೂ ರಜ್ನಿ ತೆಂಡೂಲ್ಕರ್ ಅವರ ಮಗನಾಗಿ ಜನಿಸಿದರು.

ಮಾಸ್ಟರ್ ಬ್ಲಾಸ್ಟರ್ ಸಚಿನ್ ಶತಕಗಳ ಸರದಾರ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 100 ಶತಕಗಳನ್ನು ಸಿಡಿಸಿ ಅತಿ ದೊಡ್ಡ ಸಾಧನೆ ಮಾಡಿದ ಕ್ರಿಕೆಟ್ ದಂತಕಥೆ. ಭಾರತದ ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ತೆಂಡೂಲ್ಕರ್ ಚಿಕ್ಕಂದಿನಿಂದಲೇ ನಿರಂತರವಾಗಿ ಕ್ರಿಕೆಟ್ ಅಭ್ಯಸಿಸುತ್ತಿದ್ದರು. ಹಾಗೆ ಕ್ರಿಕೆಟ್ ನಲ್ಲಿ ಉತ್ತಮ ಕೌಶಲ್ಯ ಬೆಳೆಸಿಕೊಂಡರು. ನಂತರ ರಣಜಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ ಅವರು 1989 ರಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯ ಆಡುದರ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಟೆಸ್ಟ್ ಕ್ರಿಕೆಟ್ ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಇವರು ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿಯುತ್ತಾರೆ. ತಂಡಕ್ಕೆ ಅಗತ್ಯವೆನಿಸಿದಾಗ ಬೌಲಿಂಗ್ ಸಹ ಮಾಡುವುದುಂಟು.ಭಾರತದ ಕ್ರಿಕೆಟ್ ತಂಡದ ಮಾಜಿ ಬ್ಯಾಟಿಂಗ್ ಆಧಾರ ಸ್ತಂಭವಾಗಿದ್ದ ಸಚಿನ್ 1994 ಸೆಪ್ಟೆಂಬರ್ 19 ರಂದು ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸಿಂಗರ್ ವರ್ಲ್ಡ್ ಸೀರೀಸ್ ಚತುಷ್ಕೋನ ಏಕದಿನ ಪಂದ್ಯದಲ್ಲಿ ತನ್ನ ಚೊಚ್ಚಲ ಶತಕವನ್ನು ಬಾರಿಸಿದರು . ಇದರ ಬಳಿಕ ನಡೆದಿರುವುದು ಇತಿಹಾಸವೇ ಸರಿ.
30,000ಕ್ಕೂ ಹೆಚ್ಚು ರನ್ ಗಳ ಸರದಾರ, ತನ್ನ ಅತ್ಯದ್ಭುತ ಬ್ಯಾಟಿಂಗ್ ಮೂಲಕವೇ ಅದೆಷ್ಟೋ ಪಂದ್ಯವನ್ನು ಗೆಲ್ಲಿಸಿಕೊಟ್ಟ ನೇತಾರ, ಇವರ ಸಮಯೋಚಿತ ಬ್ಯಾಟಿಂಗ್ ಹಲವುಬಾರಿ ಭಾರತ ಕ್ರಿಕೆಟ್ ತಂಡಕ್ಕೆ ಆಸರೆಯಾದರು ಸೂರ್ಯನಷ್ಟೇ ಸತ್ಯ. ವಿಶ್ವಕಪ್ ಗೆಲುವಿನಲ್ಲೂ ಇವರ ಪಾತ್ರ ಅವಿಸ್ಮರಣೀಯ .ಸುಮಾರು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಇವರು ಹಲವು ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ 200ಕ್ಕೂ ಹೆಚ್ಚು ಪಂದ್ಯವಾಡಿ ಹುಟ್ಟು 15921 ರನ್ ದಾಖಲಿಸಿದ್ದು ಮಾತ್ರವಲ್ಲದೆ ಟೆಸ್ಟ್ ಕ್ರಿಕೆಟ್ ನಲ್ಲಿ 50 ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಕೀರ್ತಿ ಇವರದು.ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಪಂದ್ಯವಾಡಿರುವ ಇವರು ಒಟ್ಟು 18,426 ರನ್ ಹೊಡೆಯುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಸರದಾರ ಎನಿಸಿಕೊಂಡದ್ದು ಮಾತ್ರವಲ್ಲದೆ 49 ಶತಕ ಬಾರಿಸುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ.
ಏಕದಿನ ಕ್ರಿಕೆಟ್ ನ ಪಂದ್ಯವೊಂದರಲ್ಲಿ 200 ರನ್ ಬಾರಿಸಿದ ವಿಶ್ವದ ಮೊದಲ ಆಟಗಾರ ,ಹಾಗೆ ಅತಿ ಹೆಚ್ಚು ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಡೆದ ಕ್ರಿಕೆಟಿಗ.
ವಿಶ್ವದ ಎಲ್ಲಾ ಕ್ರಿಕೆಟ್ ತಂಡಗಳ ಕನಸಾಗಿರುವ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆ ಇವರದು.
ಕ್ರಿಕೆಟ್ ಲೋಕದಲ್ಲಿ ಮರೆಯಲಾಗದ ದಾಖಲೆಗಳನ್ನು ನಿರ್ಮಿಸಿದ ಸಚಿನ್ 2012 ನವೆಂಬರ್ 16 ರಂದು ಅಂತರಾಷ್ಟ್ರ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು.

ಅಂತರಾಷ್ಟ್ರ ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ ಮಾಡಿರುವ ಸಾಧನೆಗೆ ಅದೆಷ್ಟು ಪ್ರಶಸ್ತಿಗಳು ದೊರೆತಿವೆ.
ಮಾಸ್ಟರ್ ಮಾಸ್ಟರ್ ಗೆ 1994 ರಲ್ಲಿ ಅರ್ಜುನ ಪ್ರಶಸ್ತಿ, 1997 ನಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, 1999 ರಲ್ಲಿ ಪದ್ಮಶ್ರೀ ಪ್ರಶಸ್ತಿ, 2008 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆತಿವೆ.
ಭಾರತದ ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಇವರಿಗೆ 2010 ನಲ್ಲಿ ಕ್ರೀಡಾ ಅತ್ಯುತ್ತಮ ಸಾಧಕ ಪ್ರಶಸ್ತಿ ,2014 ರಲ್ಲಿ ನಮ್ಮ ದೇಶದ ಪರಮೋಚ್ಚ ಪುರಸ್ಕಾರವಾದ ಭಾರತರತ್ನ ವನ್ನು ನೀಡಿ ಗೌರವಿಸಿದೆ.
ಇನ್ನು 2020ರಲ್ಲಿ ಲಾರೆಸ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಯುವಜನತೆಗೆ ಸ್ಫೂರ್ತಿಯಾಗಿರುವ ಸಚಿನ್ ತೆಂಡೂಲ್ಕರ್ ಅವರು ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ಆಟಗಾರ. ಇಂದಿನ ಯುವ ಕ್ರಿಕೆಟ್ ಆಟಗಾರರು ಕೂಡ ಸಚಿನ್ ನಂತೆಯೇ ಶತಕ ಬಾರಿಸಬೇಕು ಎಂದುಕೊಂಡು ಆಟ ಆಡುತ್ತಾರೆ. ವಿಶ್ವಕ್ರಿಕೆಟ್ ನಲ್ಲಿ ಭಾರತದ ಬಲಿಷ್ಠ ತೆಯನ್ನು ಎತ್ತಿ ತೋರಿಸಿದ ಸಚಿನ್ ತೆಂಡೂಲ್ಕರ್ ಭಾರತೀಯ ಆಟಗಾರರಿಗೆ ಸ್ಫೂರ್ತಿ.

ಸಂದೀಪ್. ಎಸ್. ಮಂಚಿಕಟ್ಟೆ
ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು.

Leave A Reply

Your email address will not be published.